ಬಂಟ್ವಾಳ: ಕಲ್ಲಡ್ಕ ಸಮೀಪದ ಶ್ರೀ ಆದಿನಾಥ ತೀರ್ಥಂಕರ ಬಸದಿ ಬಾಳ್ತಿಲದಲ್ಲಿ ಶ್ರೀ ಜ್ಞಾನೇಶ್ವರ ಮುನಿಮಹಾರಾಜ್ ಅವರ ಶಿಷ್ಯೆ ಕ್ಷುಲ್ಲಿಕಾ ವಿಶುದ್ಧ ಮತಿ ಮಾತಾಜಿಯವರು ಭವ್ಯ ಮಂಗಳ ವರ್ಷಾ ಯೋಗದ ನಿಮಿತ್ತ ಮೊಕ್ಕಾಂ ಹೂಡಿದ್ದು ಪ್ರತಿದಿನ ಶ್ರೀ ಆದಿನಾಥ ಸ್ವಾಮಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ವಿಶೇಷ ಸೇವೆ ನಡೆಯುತ್ತಿದೆ.
ಭಾನುವಾರ ಮೃತ್ಯುಂಜಯ ಆರಾಧನೆ ಮತ್ತು ನವಗ್ರಹ ಶಾಂತಿ ನಡೆಯಿತು. ಉದಯ ಕುಮಾರ್ ಜೈನ್ ಕುಟುಂಸ್ಥರು ಪೂಜೆ ಸೇವೆ ನಡೆಸಿದರು. ಅಖಿಲ ವಿಜಯಕುಮಾರ್ ಬೆಳ್ತಂಗಡಿ ಮನೆಯವರು ಆಹಾರ ದಾನ ಸೇವೆ ನಡೆಸಿಕೊಟ್ಟರು.
ಪ್ರಮುಖರಾದ ಉದ್ಯಮಿ ಪದ್ಮಪ್ರಸಾದ್ ಜೈನ್ ಬುಡೋಳಿ, ಮಹಾವೀರ ಪ್ರಸಾದ್ ಜೈನ್ ಪೆರಾಜೆ, ಆದಿರಾಜ ಜೈನ್ ಕೇದಿಗೆ, ಅಮಿತ್ ಕುಮಾರ್ ಜೈನ್,ಅನಿಲ್ ಕುಮಾರ್ ಜೈನ್ ಪಾಪೆತ್ತಿಮಾರು, ಉದಯ ಕುಮಾರ್ ಮದ್ವ, ನ್ಯಾಯವಾದಿ ಶಿವ ಪ್ರಜಾಶ್, ಬೃಜೇಶ್ ಜೈನ್ ಬಾಳ್ತಿಲ ಬೂಡು ಮೊದಲಾದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ