ಮಂಗಳೂರು: ಬಿಜೆಪಿಯ ಹಿರಿಯ ಕಾರ್ಯಕರ್ತ ಮಾಧವ ಶೆಟ್ಟಿಗಾರ ಅವರ ಮನೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಕಾರ್ಯಕರ್ತರು ಮಾಡುವ ಸೇವೆಯಾಗಿರುವ ‘ಸ್ಪಂದನೆ ಸೇವಾ ಯೋಜನೆ’ಗೆ ಶಾಸಕ ಭರತ್ ಶೆಟ್ಟಿ ಮತ್ತು ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ರವಿವಾರ ಚಾಲನೆ ನೀಡಿದರು.
ಯೋಜನೆಯ ಪ್ರಮುಖರಾದ ಅಜಿತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಇದರ ಉದ್ದೇಶ ಮತ್ತು ಅಗತ್ಯದ ಕುರಿತು ಮಾಹಿತಿ ನೀಡಿದರು. ಅನಾರೋಗ್ಯದಿಂದ ಬಳಲುತ್ತಿರುವ ಮಾಧವ ಶೆಟ್ಟಿಗಾರ ಅವರ ಆರೋಗ್ಯ ವಿಚಾರಿಸಿದ ಶಾಸಕ ಭರತ್ ಶೆಟ್ಟಿ ಯೋಜನೆಯ ಧನ ಸಹಾಯ ಮಾಡಿದರು.
ಸಂಚಾಲಕ ಪ್ರಸನ್ನ ಚೌಟ, ಪ್ರಮುಖರಾದ ಗೋಕುಲದಾಸ್ ಶೆಟ್ಟಿ, ಕಮಲಾಕ್ಷ ತಲ್ಲಿಮಾರು, ಸುಧೀರ್ ಕಾಮತ್ ಗುರುಪುರ, ಸೋಹನ್ ಅತಿಕಾರಿ, ಕಿಶೋರ್ ಉಗ್ಗರಕೋಡಿ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ