ಖಾರ ಮಸಾಲೆ: 'ಹಿಂಹುಲಿ ಕರದಂಟು ಬೆಣ್ಣಿ ಗರಂ ಆಗ್ಯಾವು'

Upayuktha
0


'ಅಲ್ಲಾ ಈ ಮರಿನ್ನ ಇಳ್ಸೂತನ್ಕಾ ಇವ್ರು ಸುಮ್ಮನಿರಂಗ ಕಾಣಸಲ್ಲ ಬಿಡು' ಎಂದ ಟುಮ್ಯಾ

'ಯಾಕ ಏನಾತು ಕ್ಯಾ ಹುವಾ?' ಎಂದ ಬಾಶಾ

'ಯಾಕಾ? ಅಲ್ಲಿ ಹೊತ್ತಿ ಉರ್ಯಾಕ ಹತೈತಿ ಇನ್ನಾ ಯಾಕ? ಕೆಂವ್? ಅಂತ ಕೇಳ್ತಿಯಲ್ಲಪಾ ನೀ?' ಕಾಳ್ಯಾ ಕೇಳಿದಾ

'ಏನು ಬೆಂಕಿ ಹತ್ತೇತಾ? ಫೈರ್ ಫೈಟರ್ಕೂ ಬುಲಾನಾ ನಹಿ?' ಕೇಳಿದ ಬಾಶಾ.

'ಇಂವಾ ಯಾವಲೇ ಫೈರ್ ಫೈಟರ್ ಮಾರಿಯಂವಾ? ನಾ ಏನ ಹೇಳಾಕತ್ತಿನಿ ತಾ ಏನು ಹೇಳ್ತೈತಿ ಮಳ್ಳ ಮಕಾಸಿನ್ನ ತಂದು' ಅಂತ ಬೈದ ಟುಮ್ಯಾ


'ನೀ ಏನ ಹೇಳ್ತಿದಿ ಕ್ಲೀಯರ್ ಬೋಲ' ಎಂದ ಬಾಶಾ

'ಅಲ್ಲಿ ಹಿಂಹುಲಿ, ಗೋಕಾಕ ಕರದಂಟ, ದಾವಣಗೇರಿ ಬೆಣ್ಣೆ, ಚಿಕ್ಕೋಡಿ ಮಾಜಿಕಿಂಗ್, ಮೈಸೂರ ಹುಲಿ.... ಎಲ್ಲಾ ಸೇರಿ ಮೀಟಿಂಗ್ ಮಾಡಿ ಮರಿನ್ನ ಕಿತ್ತಿ ಒಗಿರಿ ಅಂತ ಕುಂತಾವು' ಎಂದ ಟುಮ್ಯಾ

'ನೀ ಏನ ಹೇಳಿದೆಲಾ ಶ್ರೀಲಂಕಾ ಲ್ಯಾಂಗ್ವೆಜ್ ಮೇ, ನಂಗ ಒಂದೂ ತಿಳಿಲಿಲ್ಲ!' ಅಂತ ಅಳು ಮಾರಿ ಮಾಡಿ ಅಂದ ಬಾಶಾ

'ನಿಂಗs ತಿಳಿಲಾರ್ದೆ ಇದ್ದದ್ದು ಛೋಲೋ ಆಗೇತಿ ತಗೋ' ಅಂತ ನಕ್ಕಳು ರಾಣಿ


'ಮತ್ತs ಸುರಪುರ ಹುಲಿನೂ ಸೇರೈತಂತಲಾ ಅದ್ರಾಗ ?' ಕೇಳಿದಳು ರಾಶಿ

'ಏ ಅದರ ಬಗ್ಗೆ ನಮ್ಗ ಮಾಹಿತಿ ಇಲ್ಲಾ, ಆ ಸಿಡಿ ಶಿವುಗೇ ಕೇಳ್ಬೇಕು ಅಂತ ಕರದಂಟು ಹೇಳೈತಿ' ಅಂದಳು ರಾಣಿ

'ಅಂದ್ರs ಮರಿಸಿಟ್ಟೂರಿನ್ನ ಹೊಳ್ಳಿ ಮಲೆನಾಡಿಗೆ ಕಳಸ್ತಾರು ಅಂದಂಗಾತು' ಅಂತ ನಕ್ಕ ಕಾಕಾ

'ಇದೆಲ್ಲಾ 'ಅಸಂತೋಸ'ದ ಗೇಮ್ ಪ್ಲಾನ್ ಇರಬಹುದಾ?' ಕೇಳಿದಳು ರಾಶಿ

'ಇದ್ರೂ ಇರಬಹುದು ಏನು ಹೇಳಾಕ ಬರಂಗಿಲ್ಲ, ಸಿಟ್ಟೂರಿ ಮ್ಯಾಲಿನ ಸಿಟ್ಟಿಗೆ ಈ ಏಟು ಕುಂದ್ರುಸು ಪ್ಲಾನ್ ಹೈ ಕ್ಯಾ?' ಎಂದ ಬಾಶಾ.


'ಅಲ್ಲ ಆಗಲೇ ಏನೂ ತಿಳಿವಲ್ತು ಅಂದಿ ಈಗ ಹೀಂಗs ಪ್ಲೇಟ್ ತಿರಿವಿದೆಲಾ?' ಅಂದ ಕಾಳ್ಯಾ

'ಈಗಿನ ರಾಜಕೀಯ ಅಂದ್ರs ಹೀಂಗೇ ಐತೇಪಾ ತಮ್ಮಾ, ಹಿಂಗs ಪ್ಲೇಟ ಚೇಂಜ್ ಮಾಡ್ಕೊಂತs ಹೋಕ್ಕಾವು ಈ ಲೀಡರ್ಗೋಳು!' ಅಂದ ಕಾಕಾ.

'ಅವು ಲೀಡ ಇರ್ಲಾದ್ದ, ಮಂದಿಗಿ ತಲಿಬ್ಯಾನಿ ಆಗಿರೋ 'ಗೋಳು' ಅವು ಅದಾವು' ಅಂತ ನಕ್ಕಳು ರಾಣಿ

'ಅಲ್ಲಾ ಎಲ್ಲಿ ನೋಡಿದಲ್ಲಿ ಎಲ್ಲಾರs ಮ್ಯಾಲೂ ಎಫ್ಆಯ್ಆರ್ ಆಗಕತ್ತಾವು, ಎಲ್ಲಾರೂ ಬೇಲ್ ಸಮಂದ ಓಡ್ಯಾಡಕತ್ತಾರು' ಕೇಳಿದ ಸ್ಟೀಲ್.


' ಅಂದ್ರs ರಾಜ್ಯದ್ದು ಜೇಲು ಸಾಲಾಕ್ಕಿಲ್ಲ, ಇನ್ನಾ ಭಾಳಷ್ಟು ಕಟ್ಟಸಬೇಕಾಕೈತಿ ಅಂದಂಗಾತು!' ಅಂತ ವ್ಯಂಗವಾಗಿ ನಕ್ಕಳು ರಾಣಿ

'ಆಗ ಹಿಂದ್ಕs ಸ್ವಾತಂತ್ರ್ಯ ಹೋರಾಟಕ್ಕ ಜೇಲಿಗಿ ಹೋಗಿ ಬರತಿದ್ರು ದೇಶಪ್ರೇಮಿಗಳು'ಅಂದ ಕಾಕಾ.

'ಈಗ ಸ್ವಜನ ಪಕ್ಷಪಾತ, ಲಂಚ, ಭ್ರಷ್ಟಾಚಾರ, ಅತ್ಯಾಚಾರ, ಕೊಲೆ, ಸುಲಿಗೆ,.  ಕುರ್ಚಿ ಪಡ್ಯಾಕ ಫೈಟಿಂಗ್.. ಇಂಥಾ ಮಹಾನ್ ಸಾಧನೆಗಾಗಿ ಜೇಲಿಗಿ ಹೋಗಿ ಬರ್ತಾರು' ಎಂದಳು ರಾಶಿ.


'ಇವ್ರೂ ಒಂದs ನಮೂನಿ ಸ್ವಾತಂತ್ರ್ಯ ಹೋರಾಟಗಾರರೇ! ಇವ್ರಿಗೂ ಸನ್ಮಾನ ಮಾಡಿ ಪಿಂಚಣಿ ಕೊಡ್ಬೇಕು' ನಕ್ಕ ಕಾಳ್ಯಾ

'ಇವ್ರು ಯಾರ್ದರೇ ಮನಿ ಮುಚ್ಚುವ ನಾಮರ್ದರು! ಇವರನ್ನ ಒಯ್ದಕೇರಿ ಆ ಪವಿತ್ರ ಸ್ವಾತಂತ್ರ್ಯ ಹೋರಾಟಗಾರರಿಗೆ ಯಾಕ ಹೋಲಿಸಿ ಆ ಶಬ್ದಕ್ಕ ಅವಮರ್ಯಾದಿ ಮಾಡ್ತಿರಿ' ಅಂತ ಕಾಕಾ ಬೈದ.

'ಹೌಂದು ಕಾಕಾ ಹೇಳೂದು ಖರೇ ಐತಿ, ಎಲ್ಲಿಯ ಅವರು, ಎಲ್ಲಿಯ ಇವರು?' ಅಂದಳು ರಾಣಿ

'ಇವೆಲ್ಲಾ ಬರೇ ಎಫ್ಐಆರ್ ಸಂತ್ರಸ್ತರು!' ಅಂತ ಡುಮ್ಯಾ ಜೋರಾಗಿ ನಕ್ಕ.

'ಏನ್ಲೇ ಡುಮ್ಯಾ, ಈ ಎಫ್ಐಆರ್ ಅಂದ್ರs ಏನು?' ರಾಂಗ್ ಕೇಳಿದ.


'ನಂಗೂ ಕ್ಲೀಯರಾಗಿ ಗೊತ್ತಿಲ್ಲ, ಅದು ಬಹುಶಃ 'ಫೈರ್ ಇನ್ ರೋಮ್ಯಾನ್ಸ್ ' ಅಂತ ಇರಬೇಕು' ಎಂದು ನಕ್ಕ ಡುಮ್ಯಾ

'ನಿನ್ನ ತಲಿ, ಏs ಹಂಗಲ್ಲಲೇ ಮಳ್ಳ ಅದು' ಫನ್ ಇನ್ ರೌಡಿ ಗ್ಯಾಂಗ್' ಅಂತಂದ ವ್ಯಂಗವಾಗಿ ಕಾಳ್ಯಾ

'ಏ ಇಬ್ರೂ ಕೂಡ್ಸಿ ಇದನ್ನ ಗಬ್ಬ ಎಬ್ಬಿಸಿ ಬಿಟ್ರಿ ನೋಡು' ಎಂದು ಬೈದ ರಾಂಗ್.

'ಈಗ್ಯಾಕಪಾ ಇದು?' ಡುಮ್ಯಾ ಕೇಳಿದ.

'ಅಲ್ಲಾ ಬರೇ ಎಲ್ಲಾ ಕಡೆ ಎಲ್ಲಾರ ಮ್ಯಾಲೂ ಎಫ್ಆಯ್ಆರ್ ಮಾಡ್ಯಾರು ಅಂತೇಳಿ  ರಾಜೀನಾಮೆ ಕೊಡ್ಸೂ ಕಾರ್ಯಕ್ರಮ ಚಾಲೂ ಆಗೇತಲಾ,ಅದ್ಕೆ ಕೇಳ್ದೆ' ಎಂದ ರಾಂಗ್.



'ಇದ್ರಾಗs ಯಾರೂ ರಿಸೈನ್ ಮಾಡಂಗಿಲ್ಲ, ನೀ ಏನು ಸಿಎಂ ಆಗೂ ಕನಸ ಕಾಣ್ಬ್ಯಾಡಾ' ಅಂತ ವ್ಯಂಗವಾಗಿ ನಕ್ಕ ಕಾಳ್ಯಾ

'ಅದರ ಸಲಾಗಿ ದೊಡ್ಡ ಕ್ಯೂನೇ ಐತಿ ಬಿಡು, ನಾ ಯಾಕ ಚಿಂತಿ ಮಾಡ್ಲಿ?' ಅಂದ ರಾಂಗ್, ಏನ್ ಖರೇ ಖರೇನೇ ತನಗೆ ಸಿಎಂ ಆಗೂ ಚಾನ್ಸ್ ಇದ್ದವರಗತ್ಲೆ.


'ಅದಿರ್ಲಿ, ಪೋಲೀಸ ಅಧಿಕಾರಿ ಅಂತ ಹೇಳಿಕೊಂಡು, ಒಬ್ಬಂವ ಏನಪಾಂತಂದ್ರs ಒಬ್ಬ ಸ್ವಾಮೀಜಿಗಿ, 'ನಿಮ್ಮ ಮ್ಯಾಲ ಕಂಪ್ಲೆಂಟ್ ಭಾಳ ಅದಾವು, ಅವುನ್ನ ಮುಚ್ಚಿ ಹಾಕಬೇಕಂದ್ರs ಒಂದು ಕೋಟಿ ಕೊಡ್ರಿ ಅಂತ ಬೆದರಿಸಿ ವಸೂಲಿ ಮಾಡ್ಯಾನಂತ!' ಅಂದ ಕಾಳ್ಯಾ

'ಅಂದ್ರs ಕೊಟ್ಟಂವಾ ಕೋಡಂಗಿ ಇಸ್ಗೊಂಡವಾ ಈರಭದ್ರ ಅಂದಂಗಾತು' ನಕ್ಕ ಡುಮ್ಯಾ

'ರೊಕ್ಕ ವಸೂಲಿ ಮಾಡಿದವರು ಈಗ ಕಂಬಿ ಹಿಂದ ಆದಾರಲೇ ಹುಚ್ಪ್ಯಾಲಿ' ನಕ್ಕ ರಾಂಗ್

'ಇನ್ನೊಂದ ಕೇಳಿ ಇಲ್ಲೋ, ಒಂದ ಆಸಾಮಿ ಮಾವನ ಮನ್ಯಾಗಿನ ಪಿತೃಪಕ್ಷದ ಊಟಕ್ಕ ಹೋಗಾಕ, 'ಇಲ್ಲಿ ಗಲಾಟೆ ಆಗೇದ ಜಲ್ದಿ ಬರ್ರಿ' ಅಂತ ಪೋಲೀಸ ಸಹಾಯವಾಣಿಗೆ ಫೋನ್ ಮಾಡಿ ಗಾಡಿ ತರಸ್ಕೊಂಡಾನಂತ!' ಅಂತ ಹೇಳಿದ ಡುಮ್ಯಾ

'ಅವ್ರು ಬಂದು ಏನಂದ್ರು?'


'ಎಲ್ಲಿ ಗದ್ಲ ಆಗೇತಿ ತೋರಸ ನಡಿ ಅಂದಾರು, ಇಂವಾ ಇದ್ರs... 'ಇಲ್ಲಾ ಮಾವನ ಮನ್ಯಾಗ ಹಿಂಗಿಂಗs ಐತಿ, ಯಾವುದು ಗಾಡಿ ಸಿಕ್ಕಿಲ್ಲ, ಅದ್ಕs ನಿಮಗ ಫೋನ್ ಮಾಡ್ದೆ, ನಡ್ರಿ ಹೋಗಾಮು ಅಂತ ಅಂದ್ನಂತ!' ಡುಮ್ಯಾ ಹೇಳ್ದ.

'ಅದಕ್ಕ ಅವ್ರು, ಏ ಮಳ್ಳ ಇನ್ನೊಂದ ಸಲ ಹೀಂಗ ಮಾಡಿದೇಂದ್ರs, ನಿನ್ನ' ಬ್ಯಾರೇ ಮಾವನ ಮನಿಗೆ 'ಕರಕೊಂಡ ಹೊಕ್ಕಿವಿ' ಅಂತ ಬೈದು ಕಳಸ್ಯಾರು.

'ಅಂದ್ರs ಈಗ ಎಫ್ಐಆರ್ ಆದವ್ರೆಲ್ಲಾ 'ಮಾವನ ಮನಿಗಿ' ಹೊಕ್ಕಾರಂದಂಗಾತು' ನಕ್ಕ ಕಾಳ್ಯಾ.



'ಅವರೆಲ್ಲಾರೂ ಕೂಡಿ, ಈಗ ಏನ ಹೋಟ ಹಾಕಿ ಆರ್ಸಿ ತಂದಾರಲಾ, ಅವ್ರನ್ನ 'ಮುಡಾ ಎಲೆಕ್ಸನ್ ಬಾಂಡ್ದ ಮಾವನ ಮನಿಗೆ 'ಕಳಿಸು ತಯಾರಿ ಮಾಡ್ಕೊಂಡಾರು' ಅಂತ ರಾಂಗ್ ಹೇಳಿದ ಕೂಡ್ಲೆನೇ, ಕಾಳ್ಯಾ ಡುಮ್ಯಾ ಟುಮ್ಯಾ..... ಗಪ್ಚುಪಾಗಿ ಕ್ವಾರ್ಟರ್ ಹುಡ್ಕೊಂಡು ಹೊಂಟರು.


- ಶ್ರೀನಿವಾಸ ಜಾಲವಾದಿ, ಸುರಪುರ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top