ಈಗ ಅಂಚೆಯ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಚಿಕ್ಕವರಿದ್ದಾಗ ನಾನು ಮತ್ತು ನನ್ನ ಅಣ್ಣ ಪೋಸ್ಟ್ ಮ್ಯಾನ್ ಬಂದ ಕೂಡಲೇ "ಬಿಸಿಲಲ್ಲಿ ನೀನು ಮನೆಯಲ್ಲಿ ನಾವು. ಕಾಗದ ಬಂತು ಕಾಗದವು" ಎಂದು ಹಾಡುತ್ತಿದ್ದೆವು. ನಮ್ಮ ಜೀವನದಲ್ಲಿ ಅಂಚೆಯು ಹಾಸು ಹೊಕ್ಕಾಗಿದೆ ಎನ್ನಬಹುದು.
ನಾನು ಧಾರವಾಡದಲ್ಲಿ ಸ್ನಾತಕೋತ್ತರ ಪರೀಕ್ಷೆಗೆಂದು ಹಾಸ್ಟೆಲ್ನಲ್ಲಿ ಇದ್ದಾಗ ಪೋಸ್ಟ್ ಮ್ಯಾನ್ ಬಂದ ಕೂಡಲೇ ಮನೀ ಆರ್ಡರ್ ಬಂತಾ ಎಂದು ಕೇಳಿ ಬಯ್ಯಿಸಿಕೊಂಡ ನೆನಪಿದೆ. "ನಿಮ್ಮ ದುಡ್ಡು ಬಂದ ಕೂಡಲೇ ಕೊಡ್ತೇವೆ. ಬರಲಾರದೆ ಎಲ್ಲಿಂದ ಕೊಡ್ಲಿ" ಎಂದು ಬಯ್ಯಿಸಿಕೊಂಡ ನೆನಪಿದೆ.
ಈಗಲೂ ಹಳ್ಳಿಗಳಲ್ಲಿ ಪೋಸ್ಟ್ ಮ್ಯಾನ್ ಬಂದ ಕೂಡಲೇ ನಮ್ಮ ಪತ್ರ ಬಂದೈತ್ ಏನ್ರಿ ಎಂದು ಕೇಳುವವರಿದ್ದಾರೆ.
ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ಮಂಗಳ ಕಾರ್ಯಗಳು ಇದ್ದಾಗ ನಮ್ಮ ಅಜ್ಜಿ ಪೋಸ್ಟ್ ಮ್ಯಾನ್‌ಗೆ ಮಂಗಳ ಕಾರ್ಯ ಮುಗಿಯುವ ತನಕ ಪತ್ರ ಕೂಡ ಬೇಡವೆಂದು ಹೇಳುತ್ತಿದ್ದರು.
ಅವರ ಇಂಗಿತವನ್ನು ಅರಿತುಕೊಂಡ ಪೋಸ್ಟ್ ಮ್ಯಾನ್ ಮ್ಯಾನ್ ಮಂಗಳ ಕಾರ್ಯ ಮುಗಿದ ಮೇಲೆ ಎಲ್ಲ ಪತ್ರಗಳನ್ನು ತಂದು ಕೊಟ್ಟು ಚಹಾ ಕುಡಿದು ಹೋಗುತ್ತಿದ್ದ ನೆನಪಿದೆ.
ಈಗಿನ ಆಧುನಿಕ ಭರಾಟೆಯ ಕೊರಿಯರ್ ಗಳ ಮಧ್ಯೆ ಈಗಲೂ ಅಂಚೆಯ ಅಣ್ಣ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾನೆ. ಈಗಿನ online Applications ನಡುವೆ ಅಂಚೆಗೆ ಬಂದು ಅರ್ಜಿ ಸಲ್ಲಿಸುವವರು ಇದ್ದ್ದಾರೆ. ಹಳ್ಳಿಗಳಲ್ಲಿ ಮನೆಗೆ ಬಂದು ಪತ್ರದಲ್ಲಿ ಬರೆದಿದ್ದನ್ನು ಓದಿ ಹೇಳುವ ಪೋಸ್ಟ್ ಮನ್ ಜೀವನದ ಒಂದು ಮುಖ್ಯ ಭಾಗವಾಗಿದ್ದಾನೆ.
ಹಳ್ಳಿಗಳಲ್ಲಿ ಆಗಿನ ಕಾಲದಲ್ಲಿ ಟೆಲಿಗ್ರಾಂ ಬಂತೆಂದರೆ ಹೆದರುತ್ತಿದ್ದ ಜನರಿಗೆ ಓದಿ ಹೇಳಿ ಅವರ ಟೆನ್ಷನ್ ಕಡಿಮೆ ಮಾಡುತ್ತಿದ್ದ ಅಂಚೆಯ ಅಣ್ಣ ಅಚ್ಚು ಮೆಚ್ಚಿನ ವ್ಯಕ್ತಿ. ಬನ್ನಿ ಮತ್ತೊಮ್ಮೆ ಅಂಚೆಯ ನೆನಪು ಮಾಡಿಕೊಂಡು ಅವರ ಕೆಲಸಕ್ಕೆ ಸೆಲ್ಯೂಟ್ ಹೇಳೋಣ.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ