ಕರ್ನಾಟಕದ ನಾಲ್ಕು ಜೆಸ್ವಿಟ್ ಉಪಯಾಜಕರಿಗೆ ಮಂಗಳೂರಿನಲ್ಲಿ ಗುರುದೀಕ್ಷೆ

Upayuktha
0

 


ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹರವರು, ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ನಾಲ್ಕು ಉಪಯಾಜಕರುಗಳಿಗೆ ಯಾಜಕ ದೀಕ್ಷೆಯನ್ನು ಮಂಗಳೂರಿನ ಫಾತಿಮಾ ಧ್ಯಾನ ಮಂದಿರದಲ್ಲಿ ಅಕ್ಟೋಬರ್ 12 ರಂದು ನೀಡಿದರು. 


ಗುರುದೀಕ್ಷೆ ಪಡೆದ ಉಪಯಾಜಕರು: ವಂ. ಮ್ಯಾಕ್ಸಿಮ್ ಮಾರ್ಟಿನ್ ಡಿ’ಸೋಜ, ವಂ. ಜೋಸ್ವಿನ್ ಪಿರೇರಾ, ವಂ. ಕಿರಣ್ ಲೀಮಾ, ಹಾಗೂ ವಂ. ವಿಲ್ಸನ್ ಸಲ್ಡಾನ್ಹಾ. ತಮ್ಮ ಪ್ರಭೊಧನೆಯಲ್ಲಿ ಓರ್ವ ಯಾಜಕನು ಕ್ರಿಸ್ತನ ರಾಯಭಾರಿಗಾಗಿ ತಮ್ಮ ಜೀವನದಲ್ಲಿ ಕ್ರಿಸ್ತನು ಸಾರಿದ ಮೌಲ್ಯಗಳನ್ನು ಪ್ರತಿಬಿಂಬಿಸಲು ಕರೆನೀಡಿದರು. “ದೇವರಿಂದ ಅಭಿಷಿಕ್ತನಾದವನ ಬಲವೇ ದೇವರ ಸಾನಿಧ್ಯ. ನಾವು ಕ್ರಿಸ್ತನಂತಾಗಲು ಕ್ರಿಸ್ತನ ಜೀವನ ಮತ್ತು ಕಾಯಕವನ್ನು ಅನುಸರಿಸುವ ಯಾಜಕರಾಗಬೇಕು” ಎಂದು ಕರೆನೀಡಿದರು. 


ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ವಂದನೀಯ ಸ್ವಾಮಿ ಡಯನೀಶಿಯಸ್ ವಾಸ್, ಫಾತಿಮಾ ಧ್ಯಾನ ಮಂದಿರದ ಮುಖ್ಯಗುರುಗಳಾದ ವಂದನೀಯ ಸ್ವಾಮಿ ಅನಿಲ್ ಡಿ’ಮೆಲ್ಲೊ ಹಾಗೂ ನೂರಕ್ಕೂ ಹೆಚ್ಚು ಗುರುಗಳು ಹಾಗೂ ಕನ್ಯಾಸ್ತ್ರೀಯರು ಹಾಜರಿದ್ದರು. ವಂದನೀಯ ಸ್ವಾಮಿ ವಿಶ್ವಾಸ್ ಮಿಸ್ಕಿತ್‌ರವರು ಬಲಿಪೂಜೆಯ ನಿರ್ವಹಣೆಯನ್ನು ನೋಡಿಕೊಂಡರು. ವಂದನೀಯ ಸ್ವಾಮಿ ಲೆಸ್ಟನ್ ಲೋಬೊರವರು ಕಾರ್ಯಕ್ರಮದ ಮೇಲ್ವಿಚಾರಣೆ ನೋಡಿಕೊಂಡರು.   



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top