ಗೋವಿಂದದಾಸ ಕಾಲೇಜಿನಲ್ಲಿ ಮಾನವ ಹಕ್ಕುಗಳು ಸರಣಿ ಉಪನ್ಯಾಸ

Upayuktha
0



ಸುರತ್ಕಲ್‌: ಮಾನವ ಹಕ್ಕುಗಳು ಸರ್ವವ್ಯಾಪಿಯಾಗಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಅನುಭವಿಸಬಹುದಾದ ಹಕ್ಕುಗಳು. ಈ ಹಕ್ಕುಗಳ ರಕ್ಷಣೆಯಲ್ಲಿ ಸರಕಾರ, ಸಮಾಜ ಮತ್ತು ನಾಗರಿಕರು ಜೊತೆಯಾಗಿ ಕೆಲಸ ಮಾಡಬೇಕು. ಯುವ ಸಮುದಾಯಕ್ಕೆ ಪಾರದರ್ಶಕ ಉತ್ತರದಾಯಿತ್ವದ ಆಡಳಿತವನ್ನು ರೂಪಿಸುವ ಮಹತ್ವದ ಹೊಣೆಗಾರಿಕೆಯಿದೆ. ಮೂಲಭೂತ ಹಕ್ಕುಗಳು ಸಂವಿಧಾನದ ಮೂಲ ಆದ್ಯತೆಗಳಾಗಿದ್ದು ಅವುಗಳ ಉಲ್ಲಂಘನೆ ಕಾನೂನು ಬದ್ಧಅಪರಾಧ ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ನುಡಿದರು.


ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ)ದ ಆಡಳಿತಕ್ಕೊಳಪಟ್ಟ ಗೋವಿಂದದಾಸ ಕಾಲೇಜು, ಸುರತ್ಕಲ್‌ನ ಮಾನವ ಹಕ್ಕುಗಳ ವೇದಿಕೆ, ಮಾನವಿಕ ವಿಭಾಗ, ಗ್ರಾಹಕ ಹಕ್ಕುಗಳ ವೇದಿಕೆ ಮತ್ತು ಮಹಿಳಾ ವೇದಿಕೆ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶಗಳ ಸಹಭಾಗಿತ್ವದಲ್ಲಿ ಆಯೋಜಿಸಿರುವ ಮಾನವ ಹಕ್ಕುಗಳು -  ಇಶ್ಯೂಸ್‌ ಆ್ಯಂಡ್‌ ಕನ್ಸರ್ನ್ ಕುರಿತಂತೆ ಸರಣಿ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಉತ್ತಮ ಆಡಳಿತದ ಪಾತ್ರದ ಕುರಿತಂತೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. 


ಮುಖ್ಯ ಅತಿಥಿ ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಅಧ್ಯಕ್ಷ ಜಯಚಂದ್ರ ಹತ್ವಾರ್ ಹೆಚ್. ಮಾತನಾಡಿಮಾನವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು ಜ್ಞಾನವನ್ನು ಹೊಂದಿರುವುದು ಅಗತ್ಯವಾಗಿದೆ. ಮಾನವ ಹಕ್ಕುಗಳು ವಿಶ್ವದಾದ್ಯಂತ ವಾಸಿಸುತ್ತಿರುವ ಜನರ ಮೂಲಭೂತ ಹಕ್ಕುಗಳಾಗಿವೆೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಕೃಷ್ಣಮೂರ್ತಿ ಪಿ.ಮಾತನಾಡಿ ಪ್ರತಿಯೊಬ್ಬರು ಗೌರವಯುತವಾಗಿ ಬದುಕಲು ಮಾನವ ಹಕ್ಕುಗಳು ಅಗತ್ಯವಾಗಿದೆ ಎಂದರು.


ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ಗೋಪಾಲ ಎಂ.ಗೋಖಲೆ ಸ್ವಾಗತಿಸಿದರು.ಕಾರ್ಯಕ್ರಮ ಸಂಯೋಜಕಿ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಆಶಾಲತ ಪಿ.ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಶರ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಮಾನವಿಕ ವಿಭಾಗದ ಮುಖ್ಯಸ್ಥ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಪ್ರೊ. ಹರೀಶಆಚಾರ್ಯ ಪಿ. ವಂದಿಸಿದರು.


ಹಿಂದು ವಿದ್ಯಾದಾಯಿನೀ ಸಂಘದಜೊತೆ ಕಾರ್ಯದರ್ಶಿ ಎಂ. ಜಿ. ರಾಮಚಂದ್ರ, ಸದಸ್ಯ ಪ್ರಸಿದ್ಧ ಪಿ., ಆಡಳಿತಾಧಿಕಾರಿ ಮೃದುಲಾ, ಉಪಪ್ರಾಚಾರ್ಯ ಪ್ರೊ. ನೀಲಪ್ಪ ವಿ.,ಐಶೆ ಸಂಯೋಜಕ ಪ್ರೊ. ವಾಮನ ಕಾಮತ್, ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ., ಗ್ರಾಹಕ ಹಕ್ಕುಗಳ ಸಂಘದ ಸಂಯೋಜಕಿ ದಯಾ ಸುವರ್ಣ, ಮಹಿಳಾ ವೇದಿಕೆಯ ಸಂಯೋಜಕಿ ಶ್ರೀದೇವಿ, ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್, ಸಲಹೆಗಾರ ಗಂಗಾಧರ ಪೂಜಾರಿ, ಗೋವಿಂದ ದಾಸ ಅಲ್ಯುಮ್ನಿ ಅಸೋಸಿಯೇಶನ್ ನ ಸದಸ್ಯರಾದ ಸುಂದರ ಸಾಲ್ಯಾನ್, ಗೀತಾ ಸುರತ್ಕಲ್, ಜಗದೀಶ್ ಪಣಂಬೂರು, ಸರ್ವಜ್ಞ ಐಎಎಸ್‌ ಅಕಾಡೆಮಿಯ ಸುರೇಶ್, ವಿದ್ಯಾರ್ಥಿ ಸಂಯೋಜಕರಾದ ಧನ್ವಿನ್, ಶಮಾ ಫರ್ಹಾನ ಸ್ಮಿತಾ ಮತ್ತಿತರರು ಉಪಸ್ಥಿತರಿದ್ದರು. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top