ಬೆಳ್ಮ ಆಶ್ರಮದಲ್ಲಿ ಕಣಚೂರು ಆಯುರ್ವೇದ ಆಸ್ಪತ್ರೆಯ ವತಿಯಿಂದ ವೈದ್ಯಕೀಯ ಶಿಬಿರ

Upayuktha
0


ಮಂಗಳೂರು: ಮಂಗಳೂರು ದೇರಳ‌ಕಟ್ಟೆ ಬಳಿಯ ನಾಟೆಕಲ್ಲಿನಲ್ಲಿರುವ ಕಣಚೂರು ಆಯುರ್ವೇದ ಆಸ್ಪತ್ರೆಯ ವತಿಯಿಂದ ಸ್ಥಳೀಯ ಬೆಳ್ಮ ಗ್ರಾಮದಲ್ಲಿರುವ ಸೇವಾಭಾವ ಚಾರಿಟೇಬಲ್ ಟ್ರಸ್ಟಿನ ಸೇವಾಶ್ರಮದಲ್ಲಿರುವ ವೃದ್ಧ ಆಶ್ರಮ ವಾಸಿಗಳಿಗೆ ಉಚಿತವಾದ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಅ.24 ರಂದು ನಡೆಸಲಾಯಿತು.


ಔಷಧಿ,ಶಸ್ತ್ರ ಕರ್ಮ, ಸ್ತ್ರೀರೋಗ, ಯೋಗ ಮತ್ತಿತರ ಎಂಟು ವಿಭಾಗಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ನುರಿತ ವೈದ್ಯರಾದ ಡಾ ಸೌಮ್ಯ ಕುಮಾರಿ, ಡಾ ಅತಿರಾ ರವಿ, ಡಾ.ಚರಣ್ ಎ. ಮತ್ತಿತರರೂ ಸುಭಿ ರಾಜ್, ಪ್ರೀತಿ ಶ್ರಾವ್ಯಾ ಮತ್ತಿತರ ಪರಿಚಾರಿಕೆಯರನ್ನೊಳಗೊಂಡಂತೆ ವೈದ್ಯಕೀಯ ನಿರ್ದೇಶಕ ಡಾ ಸುರೇಶ್ ನೆಗಳಗುಳಿ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ ಕಾರ್ತಿಕೇಯ ಪ್ರಸಾದ್ ಈ ಶಿಬಿರದಲ್ಲಿ ಭಾಗವಹಿಸಿದ್ದರು.


ಆಶ್ರಮವಾಸಿಗಳನ್ನು ಸಂಪೂರ್ಣ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಯಿತು.ಅಗತ್ಯ ಉಳ್ಳವರಿಗೆ ಆಸ್ಪತ್ರೆಯಲ್ಲಿ ಉಚಿತ ಒಳರೋಗಿ ವ್ಯವಸ್ಥೆಯನ್ನೂ ಒದಗಿಸಲಾಯಿತು. ಆಶ್ರಮದ ಮುಖ್ಯ ನಿರ್ವಹಣಾಧಿಕಾರಿ ಶ್ರೀ ಬಾಲಕೃಷ್ಣ ಅವರು ಸಕಲ ಸಹಕಾರ ಸಹಿತ ಸಾರಥ್ಯ ವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top