ನಿಮಗೆ ತಿಳಿದಿರಲಿ: ಬಿಳಿ ವಿಷ 'ಮೈದಾ' ತಯಾರಾಗೋದು ಹೇಗೆ ಗೊತ್ತೇ...?

Upayuktha
0


ಗೋದಿಯ ಉಮಿ, ದೂಳು, ನಾರು, ಭಕ್ಷ್ಯಯೋಗ್ಯ ಸಕಲ ವಸ್ತುಗಳನ್ನೂ ಪ್ರತ್ಯೇಕಿಸಿ ತೆಗೆದು ಬಾಕಿ ಉಳಿಯುವ ತರಿಗಳನ್ನೂ ಹುಡಿಯನ್ನೂ ಬೇರ್ಪಡಿಸಲಾಗುತ್ತದೆ. ಇವೆರಡನ್ನೂ ರಾಸಾಯನಿಕ- ಬೆನ್ಸೋಯಿಕ್ ಪೆರೋಕ್ಸೈಡ್- ಉಪಯೋಗಿಸಿ ಬ್ಲೀಚ್ ಮಾಡಲಾಗುತ್ತದೆ. ತರಿಯು ರವಾಸಜ್ಜಿಗೆ ಎಂಬ ಹೆಸರಿನಲ್ಲಿ ಮಾರ್ಕೆಟಿಗೆ ತಲಪುತ್ತದೆ. ಹುಡಿಯನ್ನು ಮತ್ತೊಮ್ಮೆ ALLOXEN ಎಂಬ ಭಯಂಕರ ರಾಸಾಯನಿಕ ಸೇರಿಸಿ ಮೆತ್ತಗೆ ನಯಾ ಪೌಡರ್ ಮಾಡಿ ಪುನಃ ಪ್ರಿಸರ್ವೇಟಿವ್ ಬೆರಕೆ ಮಾಡಲಾಗುತ್ತದೆ. ಇದುವೇ ಮಾನವ ಕುಲಕ್ಕೆ ವಿನಾಶಕಾರೀ ರೋಗಗಳನ್ನು ತಂದೊಡ್ಡುತ್ತಾ ಇರುವ "ಮೈದಾ" ಎಂಬ ರಾಕ್ಷಸ..!


ಬಿಳುಚಿದ ಆಹಾರ ವಸ್ತುಗಳಲ್ಲಿ ಭಾರತೀಯರಿಗೆ ಬಂದ ಪ್ರಿಯತೆಯೂ ಪರದೇಶಿಗಳ (ಪರ್ದೇಶಿ) ವ್ಯಾಪಾರ ಬುದ್ದಿಯೂ ಎರಡೂ ಸೇರಿದಾಗ "ಮೈದಾ" ಎಂಬ ಅತ್ಯಂತ ಅಪಾಯಕಾರೀ ವಸ್ತು ಉಂಟಾಯಿತು. ಮಾತ್ರವಲ್ಲ ಅದನ್ನು ಭಾರತೀಯರಿಗೆ ತಿನಿಸುವುದರಲ್ಲೂ ಅವರು ಯಶಸ್ವಿಯಾದರು. ಹಿಂದೆ ವಿದೇಶಗಳಿಂದ ಆಮದು ಆಗುತ್ತಿದ್ದ ಆ ವಿಷದ ಪುಡಿ ಮೈದಾ ಈಗ ಇಲ್ಲೇ ತಯಾರಾಗುತ್ತ ಇವೆ. ಬೇಕರಿ ತಿಂಡಿಗಳ ಮೂಲ ವಸ್ತು ಇದೇ ಮೈದಾ..!! ರಬ್ಬರ್ ದೋಸೆ "ಪರೋಟಾ" ಇದುವೇ.


ಸಂಶೋಧನಾ ವರದಿಯೊಂದರ ನಿಗಮನ ಪರಿಣಾಮ ಇಂತಿದೆ: ಪರೋಟಾವನ್ನು ಕರಗಿಸುವ ಶಕ್ತಿ ಶರೀರದಲ್ಲಿ ಇಲ್ಲ. ಬಸವಳಿದು ಬಿದ್ದು ಮರಣ ಹೊಂದುವ ಮಂದಿಗಳಲ್ಲಿ ಹೆಚ್ಚಿನ ಶತಮಾನ ಪರೋಟಾ ಸ್ನೇಹಿಗಳಂತೆ..!


- ಬಳ್ಳಮೂಲೆ ಗೋವಿಂದ ಭಟ್

(ಲೇಖಕರು ನಿವೃತ್ತ ಶಿಕ್ಷಕರು, ನಾಟಿ-ಆಯುರ್ವೇದ ಔಷಧಗಳ ತಜ್ಞರು)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top