ನೋಡಿ ನೀವು ಕುಂಡಿಕೆಯ ಉಕ್ಕುವಳು
ಜುಳು ಜುಳನೇ ಕಾವೇರಿ ಹರಿಯುವಳು
ಲೋಕ ಸೇವೆಗೆಂದು ಲೋಪಮುದ್ರೆಯಾಗಿ
ಕಾವೇರಿ ತಾನಾಗಿ ತುಳುಕುವಳೂ
ಈ ನಾಡ ಸಿರಿಗೆ ಅಮ್ಮ ಎನಿಸಿಹಳು||ಪ||
ಕರ್ಣಾಟ ರಾಜ್ಯದ ಕೊಡಗಿನ ಸೀಮೆ
ಸಿರಿನಾಡಿನ ಬೆಟ್ಟದಡಿ ಪಾದದ ನಾಮೆ
ಸಿರಿಯ ಸಂಪೋಷಿಣಿ ತಿರೆಜನ ಕಾಯೆ ನೀ
ಕುಂಡಿಕೆಯ ತೀರ್ಥಕೀಗ ಕುಂಕುಮಾರ್ಚನೆ ||1||
ನಂಬಿರುವ ಜೀವದ
ದಾಹಕಾಗಿ
ಬೆಂಬಿಡದೆ ಸುರಿವಳು ಧಾರೆಯಾಗಿ
ತುಂಬುವಳು ಜಲದಿಂದ ಕನ್ನಂಬಾಡಿಯಾಗಿ
ಕರುನಾಡ ರೈತರ ಸಿರಿದೇವಿಯಾಗಿ||2||
ಉಕ್ಕುತಿಹ ಕಾಲುವೆಗೆ ಉಸಿರಂತೆ
ಬೀಸುತಿಹ ಗಾಳಿಯಲೆಗೆ ತಲೆಬಾಗಿ
ನಿಂತ ಹಸಿರು ಪೈರುಗಳಿಗೆ ವರವಾಗಿ
ಕಾವೇರಿ ನೀಡುವಳು ಜಲ ರಾಶಿ||3||
- ವೈಲೇಶ ಪಿ.ಎಸ್. ಕೊಡಗು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ