ದಸರಾ- ರಾಜ್ಯದ ಪರಂಪರೆ ಬಿಂಬಿಸುವ ನಾಡ ಹಬ್ಬ

Upayuktha
0


ಮ್ಮ ದೇಶದಲ್ಲಿ ವಿವಿಧ ಸಂಸ್ಕೃತಿ, ಸಂಪ್ರದಾಯ ಹೊಂದಿದ ದೇಶ, ಅನೇಕ  ಹಬ್ಬಗಳನ್ನು ಸಂಪ್ರದಾಯಗಳನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವುದು ನಮ್ಮ ದೇಶದ ಹೆಮ್ಮೆ.


ದಸರಾ ಹಬ್ಬದಲ್ಲಿ ವಿವಿಧ ರೀತಿಯ ಆಚರಣೆಗಳು ಚಾಲ್ತಿಯಲ್ಲಿವೆ. ಶ್ರೀನಿವಾಸ ದೇವರು ಪದ್ಮಾವತಿ ದೇವಿಯನ್ನು ವೈಶಾಖ ಮಾಸದಲ್ಲಿ ಮದುವೆಯಾಗಿರುತ್ತಾನೆ, ಆದರೆ ಆಗಲೇ ಬೆಟ್ಟ ಹತ್ತುವುದು  ಸರಿಯಲ್ಲ ಎಂದು ಹೇಳಿದ ಋಷಿಗಳ ಅಪ್ಪಣೆಯ ಮೇರೆಗೆ ಕೆಲವು ತಿಂಗಳು ಕೆಳಗಡೆ ಇದ್ದು ಆಮೇಲೆ ತಿರುಮಲ ಕ್ಕೆ ಬರುತ್ತಾನೆ. ಹೀಗೇ ಶ್ರೀನಿವಾಸ ಪದ್ಮಾವತಿ, ನವ ವಧು ವರರನ್ನು ಅತ್ಯಂತ ಅದರ, ವೈಭವದಿಂದ ಬರಮಾಡಿಕೊಂಡ ಬ್ರಹ್ಮದೇವರು ಶ್ರೀ ಶ್ರೀನಿವಾಸನನ್ನು ಅನೇಕ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾನೆ. ಗಜವಾಹನ, ಅಶ್ವ ವಾಹನ, ಹಂಸ ವಾಹನ, ಗರುಡ ವಾಹನ, ಹನುಮಂತ ವಾಹನ, ಹೀಗೇ ಅನೇಕ ವಾಹನಗಳಲಿ ಮೆರೆಸುತ್ತಾನೆ. ಬ್ರಹ್ಮದೇವರೇ ಮಾಡಿದ ಉತ್ಸವವಾದ್ದರಿಂದ ಬ್ರಹ್ಮೋತ್ಸವ ಎಂದು ಪ್ರಸಿದ್ಧವಾಯಿತು. ಹೀಗೇ ಇಂದಿಗೂ ತಿರುಮಲದಲ್ಲಿ 10 ದಿನಗಳು ಸ್ವಾಮಿಯನ್ನು ವಿವಿಧ ವಾಹನಗಳಲ್ಲಿ ಕೂಡಿಸಿ ಮೆರೆಸುತ್ತಾರೆ.  ಬ್ರಹ್ಮ ದೇವರೇ ನಡೆಸಿದ ಉತ್ಸವವಾದ್ದರಿಂದ ಇದನ್ನು ಬ್ರಹ್ಮೋತ್ಸವ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಬಹಳ ಮನೆಗಳಲ್ಲಿ ಶ್ರೀ ವೆಂಕಟೇಶನನ್ನೇ ಕುಲದೇವತೆ ಎಂದು ಪೂಜಿಸುವ ಜನರು ಇದ್ದಾರೆ. ಅ ಎಲ್ಲರೂ 10 ದಿನದ ಅಥವಾ 5, 3, ದಿನಗಳು ಒಂದು ತುಪ್ಪದ, ಒಂದು ಎಣ್ಣೆಯ ನಂದಾದೀಪಗಳನ್ನಿಟ್ಟು ಪೂಜೆ ನೈವೇದ್ಯ ಮಾಡುತ್ತಾರೆ.


ಪಾಂಡವರು ತಮ್ಮ ಅಜ್ಞಾತವಾಸ ಕಾಲದಲ್ಲಿ ತಮ್ಮ ಆಯುಧಗಳನ್ನು ಶಮೀ ವೃಕ್ಷದಲ್ಲಿ (ಬನ್ನಿ ಗಿಡ) ಇಟ್ಟು ರಕ್ಷಿಸಲು ಬಿನ್ನವಿಸಿದ್ದರು. ಅ ಶಮೀ ವೃಕ್ಷ ಅವರ ಆಯುಧಗಳನ್ನು ಕಾಪಾಡಿತ್ತು. ಅದರ ದ್ಯೋತಕವಾಗಿಯೂ, ಮತ್ತು ಬನ್ನಿ ಗಿಡದಲ್ಲಿ ಲಕ್ಷ್ಮಿ ಸನ್ನಿಹಿತಾಳಗಿರುತ್ತಾಳೆ ಎಂಬ ಕಾರಣ ಕ್ಕೆ ಬನ್ನಿ ಗಿಡವನ್ನು ಪೂಜಿಸುವ ಕ್ರಮ ಇದೆ. ಆಯುಧಗಳನ್ನು, ಪೂಜಿಸುವ ಪದ್ಧತಿ ಇದೆ. ಅಂದರೆ ನಾವು ದಿನ ಉಪಯೋಗಿಸುವ ಚಾಕು ಕತ್ತರಿ ಮುಂತಾದವುಗಳನ್ನು ಪೂಜಿಸುತ್ತಾರೆ. ನಂತರ ಬನ್ನಿಯನ್ನು ಎಲ್ಲರೂ ವಿನಿಮಯ ಮಾಡಿಕೊಂಡು ಬನ್ನಿಯಂತೆ ನಿಮ್ಮ ಬಾಳು ಬಂಗಾರವಾಗಲಿ ಎಂದು ಹಾರೈಸುತ್ತಾರೆ. 


ಮೈಸೂರು ದಸರಾ ವಿಶೇಷ:


ಮೈಸೂರ ದಸರಾ ತುಂಬಾ ಪ್ರಸಿದ್ಧಿ ಪಡೆದಿದೆ. ಪುರಾಣಗಳ ಪ್ರಕಾರ ಮಹಿಷ ಎಂಬ ರಾಕ್ಷಸನನ್ನು ದೇವಿ ದುರ್ಗಾ ಸಂಹಾರ ಮಾಡಿ ಮಹಿಷಾಸುರ ಮರ್ದಿನಿ ಎನಿಸಿಕೊಳ್ಳುತ್ತಾಳೆ. ಈ ನವ ದಿನಗಳಲ್ಲಿ ದೇವಿಯ ಪೂಜೆ ಆರಾಧನೆ ನಡೆಯುತ್ತದೆ. 


ಮೈಸೂರು ಅರಮನೆಯಲ್ಲಿ ಹಿಂದಿನ ರಾಜರ ದರ್ಬಾರ್ ಹೇಗೇ ನಡೆಯುತ್ತಿತ್ತೋ ಹಾಗೇ ರಾಜರ ದರ್ಬಾರ್ ನಡೆಯುತ್ತದೆ. ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯ ಮೇಲೆ ಕೂಡಿಸಿ ಮೆರೆಸುತ್ತಾರೆ. ರಾತ್ರಿ ಅರಮನೆ ವಿದ್ಯುದೀಪಗಳಿಂದ ಕಂಗೊಳಿಸುತ್ತದೆ. ದಸರಾ ನಿಮಿತ್ತವಾಗಿ ಅನೇಕ ಬಗೆಯ ಕ್ರೀಡೆಗಳು ಆಯೋಜನೆಗೊಳ್ಳುತ್ತವೆ.


ನಂತರ 18ನೇ ಶತಮಾನದಲ್ಲಿ ಚಾಲ್ತಿಗೆ ಬಂದ ಈ ಬೊಂಬೆ ಹಬ್ಬ ಎಂದು ಕರೆಸಿಕೊಳ್ಳುವ ಹಬ್ಬದ ಆಚರಣೆ ನಡೆಯುತ್ತದೆ. ಮೊದಲ ಭಾಗದಲ್ಲಿ ಪಟ್ಟದ ಬೊಂಬೆ, ಕಲಶ ಗಣಪತಿ, ಮನೆದೇವರು ದೀಪಗಳನ್ನಿಟ್ಟು, ನಂತರ 2 ನೇ ಅಂತಸ್ತಿನಲ್ಲಿ, ಅಷ್ಟ ಲಕ್ಷ್ಮಿಯರು, ದಶವತಾರದ ಬೊಂಬೆಗಳು ಸೀತಾ ಕಲ್ಯಾಣ, ನಂತರದ ಅಂತಸ್ತಿನಲ್ಲಿ ವೈಕುಂಠದ ಬೊಂಬೆಗಳು ನಾರದ, ಶೇಷಶಯನ ಮತ್ತು ಕೈಲಾಸದ ಚಿತ್ರಣ ಬರುವಂತೆ, ಶಿವ ಪಾರ್ವತಿ ನಂದಿ, ಗಣಪ, ಸ್ಕಂದ, ಹೀಗೇ ಇಟ್ಟು, ನಂತರದಲ್ಲಿ ಋಷಿಮುನಿಗಳು ಎಲ್ಲಕ್ಕೂ ಮಧ್ಯದಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹ ಎಲ್ಲಕ್ಕಿಂತ ಮೇಲೆ ಇರುವಂತೆ ನೋಡಿಕೊಳ್ಳು ತ್ತಾರೆ. ಸಮಸ್ತ ಸೃಷ್ಟಿಯ ಮೂಲ ಒಂದೇ ವಸ್ತು, ಅ ವಸ್ತುವಿನಿಂದಲೇ, ಎಲ್ಲವೂ ಒಂದೇ ದೃಷ್ಟಿಯಲ್ಲಿ ನೋಡಬೇಕು ಎಂಬುದೇ ಬೊಂಬೆಗಳಿಂದ ತಿಳಿವ ಸಂದೇಶ.


9 ದಿನವೂ ಪೂಜೆ ನೈವೇದ್ಯ ಮಾಡಿ, ಒಂದು ದಿನ ಮುತ್ತೈದೆಯರನ್ನು ಕರೆದು ಬಾಗಿನ ಕೊಟ್ಟು, ಪಾನಕ ಕೋಸಂಬರಿಯನ್ನು ಪ್ರಸಾದವಾಗಿ ಕೊಡುತ್ತಾರೆ. ರಾಜರು ವೈಭವದಿಂದ ರಾಜ್ಯದಲ್ಲಿ ದಸರಾ ಆಚರಿಸುವಾಗ ಪ್ರಜೆಗಳೂ ತಮ್ಮ ಮನೆಯಲ್ಲಿ ದಸರಾ ವೈಭವದಿಂದ ಆಚರಣೆ ಮಾಡುತ್ತಿದ್ದರು. ಈ ಸಂಪ್ರದಾಯಗಳು ಇಂದಿಗೂ ಇವೆ. ಪ್ರತಿ ವರ್ಷ ಹಳೆಯ ಬೊಂಬೆಗಳ ಜೊತೆಗೆ ಎರಡು ಹೊಸ ಬೊಂಬೆ ಸೇರಿಸಿ ಇಟ್ಟು ಪೂಜಿಸುತ್ತಾರೆ. ಮಗಳು ಮದುವೆಯಾಗಿ ಹೋಗುವಾಗ, ಅವಳೂ ತನ್ನ ಮನೆಯಲ್ಲಿ ಬೊಂಬೆ ಹಬ್ಬ ಆಚರಣೆ ಮಾಡಲಿ ಎಂಬ ಉದ್ದೇಶದಿಂದ ಪಟ್ಟದ ಬೊಂಬೆಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ದಸರಾ ಹಬ್ಬ ವೈಭವೋಪೇತವಾಗಿ ನೆರವೇರುತ್ತದೆ.


ಹೀಗೆ ನಮ್ಮ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಆಚರಣೆಗಳು ನಡೆದುಕೊಂಡು ಬಂದು ನಮ್ಮ ದೇಶಕ್ಕೆ ಮೆರುಗು ನೀಡಿವೆ.




-ರೇಖಾ ಮುತಾಲಿಕ್, ಬಾಗಲಕೋಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top