ಬೆಂಗಳೂರು: ಪ್ರಣವಾಂಜಲಿ ಅಕಾಡೆಮಿ ಫಾರ್ ಪಫಾ೯ಮಿಂಗ್ ಆಟ್ಸ್೯ ವತಿಯಿಂದ ಅಕ್ಟೋಬರ್ 20, ಭಾನುವಾರ ಬೆಳಗ್ಗೆ 10 ಗಂಟೆಯಿಂದ ನಗರದ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ನೃತ್ಯ ಸಂಹಿತ-2024ರ ಶೀರ್ಷಿಕೆಯಲ್ಲಿ ವಿವಿಧ ಭರತನಾಟ್ಯ ಶಾಲೆಯ ಕಲಾವಿದರುಗಳಿಂದ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ವಿದುಷಿ ಶ್ವೇತಾ ವೆಂಕಟೇಶ್ (ಕಥಕ್ ನೃತ್ಯ), ವಿದುಷಿ ಎಂ.ಎಸ್. ವಿದ್ಯಾಲಕ್ಷ್ಮಿ (ಭರತನಾಟ್ಯ), ವಿದುಷಿ ರಶ್ಮಿ ಅಯ್ಯಂಗಾರ್ (ಭರತನಾಟ್ಯ), ವಿದುಷಿ ಭಾವನಾ (ಭರತನಾಟ್ಯ), ವಿದುಷಿ ಪ್ರತಿಭಾ ರಾಮಸ್ವಾಮಿ (ಭರತನಾಟ್ಯ). ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಂದ್ರಶೇಖರ್, ಡಾ|| ಗೀತಾ ಬಿ.ವಿ. ಮತ್ತು ಡಾ|| ಪೂರ್ಣಾ ಸುರೇಶ್ ಆಗಮಿಸಲಿದ್ದಾರೆ ಎಂದು ಪ್ರಣವಾಂಜಲಿ ಅಕಾಡೆಮಿ ಫಾರ್ ಪಫಾ೯ಮಿಂಗ್ ಆಟ್ಸ್೯ನ ನಿರ್ದೇಶಕಿ ವಿದುಷಿ ಪವಿತ್ರಾ ಪ್ರಶಾಂತ್ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ