ಪಟ್ಲ ಯಕ್ಷಾಶ್ರಯ ಯೋಜನೆಯಡಿ 31ನೇ ಮನೆ- ಫಲಾನುಭವಿಗೆ ಹಸ್ತಾಂತರ

Upayuktha
0


ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿಯವರ ಕನಸಿನ 'ಪಟ್ಲ ಯಕ್ಷಾಶ್ರಯ' ಯೋಜನೆಯ 31ನೇ ಮನೆಯ ಕೀಲಿಕೈಯನ್ನು ಫಲಾನುಭವಿಗಳಾದ ಶ್ರೀ ಧರ್ಮಸ್ಥಳದ ಮೇಳದ ಚೆಂಡೆ ವಾದಕ ಚಂದ್ರಶೇಖರವರಿಗೆ ಹಸ್ತಾಂತರಿಸಲಾಯಿತು.


ಕೊಡುಗೈ ದಾನಿ ಖ್ಯಾತ ಉದ್ಯಮಿ ರಘುನಾಥ ಸೋಮಯಾಜಿಯವರ ಕೊಡುಗೆಯ ಈ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಕಲಾಪೋಷಕರಾದ ಆರ್.ಕೆ. ಭಟ್ ಬೆಂಗಳೂರು, ಟ್ರಸ್ಟಿನ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ, ಟ್ರಸ್ಟಿನ ಸರಪಾಡಿ ಘಟಕದ ಸಂಚಾಲಕ ಸರಪಾಡಿ ಅಶೋಕ್ ಶೆಟ್ಟಿ, ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಗೌರವಾಧ್ಯಕ್ಷ ಜಗನ್ನಾಥ ಚೌಟ, ಶ್ರೀಕಾಂತ್ ಅರಳ ಇನ್ನಿತರರು ಭಾಗವಹಿಸಿದರು. ಸರಪಾಡಿ ಘಟಕದ ಕಾರ್ಯದರ್ಶಿ ಧನಂಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top