2. ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಪ್ರತಿಯೊಂದು ದೇವತೆ ಎಂದರೆ ಒಂದು ವಿಶಿಷ್ಟ ತತ್ತ್ವವಾಗಿದೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ’, ಈ ಸಿದ್ಧಾಂತಕ್ಕನುಸಾರ ಮೂರ್ತಿವಿಜ್ಞಾನದಂತೆ ಮೂರ್ತಿಯನ್ನು ತಯಾರಿಸಿದರೆ ಆ ಮೂರ್ತಿಯಲ್ಲಿ ಆ ದೇವತೆಯ ತತ್ತ್ವವು ಆಕರ್ಷಿಸುತ್ತದೆ.
‘ಶ್ರೀ ಗಣಪತಿ ಅಥರ್ವಶೀರ್ಷ’ದಲ್ಲಿ ವರ್ಣಿಸಿದ ಶ್ರೀ ಗಣೇಶನ ಮೂರ್ತಿ ವಿಜ್ಞಾನ
‘ಶ್ರೀ ಗಣಪತಿ ಅಥರ್ವಶೀರ್ಷ’ದಲ್ಲಿ ಗಣೇಶನ ರೂಪವನ್ನು ಮುಂದಿನಂತೆ ಕೊಡಲಾಗಿದೆ. : ‘ಏಕದಂತಂ ಚತುರ್ಹಸ್ತಂ|’ ಅಂದರೆ ‘ಏಕದಂತ, ಚತುರ್ಭುಜ, ಪಾಶ ಮತ್ತು ಅಂಕುಶವನ್ನು ಧರಿಸಿರುವವನು, ಒಂದು ಕೈಯಲ್ಲಿ (ಮುರಿದ) ದಂತವನ್ನು ಧರಿಸುವವನು ಮತ್ತು ಇನ್ನೊಂದು ಕೈಯು ವರದಮುದ್ರೆ ಯಲ್ಲಿರುವವನು, ಮೂಷಕ ಚಿಹ್ನೆ ಇರುವ ಧ್ವಜವಿರುವವನು, ರಕ್ತ ವರ್ಣ, ಲಂಬೋದರ, ಮೊರದಂತೆ ಕಿವಿಗಳಿರುವವನು, ಕೆಂಪು ವಸ್ತ್ರಗಳನ್ನು ಉಟ್ಟುಕೊಂಡಿರುವವನು, ಮೈಗೆ ರಕ್ತಚಂದನದ ಲೇಪನವನ್ನು ಹಚ್ಚಿಕೊಂಡವನು ಮತ್ತು ಕೆಂಪು ಪುಷ್ಪಗಳಿಂದ ಪೂಜಿಸಲ್ಪಡುವವನು.’
ಟಿಪ್ಪಣಿ: ಅಥರ್ವಶೀರ್ಷದಲ್ಲಿ ಶ್ರೀ ಗಣೇಶನು ಒಂದು ಕೈಯಲ್ಲಿ (ಮುರಿದ) ದಂತವನ್ನು ಧರಿಸಿರುವವ ನಾಗಿದ್ದಾನೆ, ಎಂದು ಅವನ ರೂಪವನ್ನು ಹೇಳಲಾಗಿದೆ. ಶ್ರೀ ಗಣೇಶನು ಮುಖ್ಯವಾಗಿ ಜ್ಞಾನದ ದೇವತೆಯಾಗಿದ್ದಾನೆ. ‘ಮೋದಕ’ವು ಜ್ಞಾನದ ಪ್ರತೀಕವಾಗಿದೆ. ಈ ಕಾರಣದಿಂದಾಗಿ ಶ್ರೀ ಗಣೇಶನ ಕೈಯಲ್ಲಿ ಮುರಿದ ಹಲ್ಲಿನ ಬದಲಿಗೆ ಮೋದಕವನ್ನು ತೋರಿಸುವ ಪದ್ಧತಿಯು ಪ್ರಚಲಿತವಾಗಿರಬೇಕು.
(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು’)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ