ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಸಿಂಡಿಕೇಟ್‌ಗೆ ನಾಮಕರಣ: ಸರ್ಕಾರಕ್ಕೆ ಒತ್ತಾಯ

Upayuktha
0


ಬಳ್ಳಾರಿ:
ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸಿಂಡಿಕೇಟ್ ಸದಸ್ಯರ ನಿಯೋಗ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳ ಪರವಾಗಿ ಕುಲಸಚಿವರಾದ ರುದ್ರೇಶ್ ಇವರನ್ನು ಭೇಟಿಯಾಗಿ ಕರ್ನಾಟಕ ರಾಜ್ಯದ ರಾಜ್ಯಪಾಲರು ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಅವರ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು. 


ಸರ್ಕಾರ ಇತ್ತೀಚೆಗೆ ಬಳ್ಳಾರಿಯ ವಿಶ್ವವಿದ್ಯಾಲಯಕ್ಕೆ ಆರು ಜನ ಸಿಂಡಿಕೇಟ್  ಸದಸ್ಯರನ್ನು ನಾಮಕರಣ ಮಾಡಿದ್ದು ಅದರಲ್ಲಿ ಐದು ಜನರು ಬಳ್ಳಾರಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಹೊರ ಜಿಲ್ಲೆಯವರಾಗಿ ದ್ದಾರೆ ಅಖಂಡ ಬಳ್ಳಾರಿ ಜಿಲ್ಲೆಯ ಒಬ್ಬ ವ್ಯಕ್ತಿ ಸಿಂಡಿಕೇಟ್‌ಗೆ ನಾಮಕರಣ ಆಗಿದ್ದು ಇನ್ನುಳಿದ 5 ಸದಸ್ಯರನ್ನು ತಕ್ಷಣ ಸರ್ಕಾರ ಬದಲಾವಣೆ ಮಾಡಿ ಅಖಂಡ ಬಳ್ಳಾರಿ ಜಿಲ್ಲೆಯವರಲ್ಲಿ ಅರ್ಹರನ್ನು ನಾಮಕರಣ ಮಾಡುವಂತೆ ನಿಯೋಗ ಒತ್ತಾಯ ಮಾಡಿತು. 


ಈ ಹಿಂದೆ ಬಳ್ಳಾರಿ ಜಿಲ್ಲೆ ಮೈಸೂರು ವಿಶ್ವವಿದ್ಯಾಲಯ ನಂತರ ಕರ್ನಾಟಕ ವಿಶ್ವವಿದ್ಯಾಲಯ ಆನಂತರ ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿದ್ದು ಪ್ರಸ್ತುತ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಕಾರ್ಯ ನಿರ್ವಹಿಸುತ್ತಿದ್ದು ವಿಶ್ವವಿದ್ಯಾಲಯದ ಆಡಳಿತದಲ್ಲಿ ಸ್ಥಳೀಯರೇ ಇದ್ದರೆ ವಿಶ್ವವಿದ್ಯಾಲಯದ ಅಭಿವೃದ್ಧಿ ಸಾಧ್ಯವೆಂದು ಮನವರಿಕೆ ಮಾಡಿಕೊಡಲಾಯಿತು. 


ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಟ್ಟು 79 ಕಾಲೇಜುಗಳು ಬರುತ್ತಿದ್ದು ಬಳ್ಳಾರಿ ನಗರ ಒಂದರಲ್ಲಿ 19 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ, ಪರಿಸ್ಥಿತಿ ಹೀಗಿದ್ದರೂ ಬಳ್ಳಾರಿ ನಗರದಿಂದಾಗಲಿ ಜಿಲ್ಲೆಯಿಂದ ಹೆಚ್ಚು ಜನ ಸಿಂಡಿಕೇಟ್ ಸದಸ್ಯರು ನೇಮಕ ಆಗದೆ ಇರುವುದು ವಿಷಾದನೀಯ, ಕಾರಣ ಕೂಡಲೇ ಸರ್ಕಾರ ನೇಮಕವಾಗಿರುವ ವಿಶ್ವವಿದ್ಯಾಲಯದ ವ್ಯಾಪ್ತಿಯ ಹೊರ ಜಿಲ್ಲೆಯವರನ್ನು ಅವರ ವ್ಯಾಪ್ತಿ ಯಲ್ಲಿ ಬರುವ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರ ಮುಂದುವರಿಸಬಹುದಾಗಿದೆ ಎಂದು ತಿಳಿಸಲಾಯಿತು. 


ನಿಯೋಗದಲ್ಲಿ ಮಾಜಿ ಸನೆಟ್ ಹಾಗೂ ಸಿಂಡಿಕೇಟ್ ಸದಸ್ಯರುಗಳಾದ ಕೆ ಎಂ ಮಹೇಶ್ವರ ಸ್ವಾಮಿ, ಹೆಚ್ ಜಯಪ್ರಕಾಶ್ ಗೌಡ, ಕೆ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ ಗೌಡ, ವಿ ಎಸ್ ಪ್ರಭಯ್ಯ, ನಿಷ್ಠಿ ರುದ್ರಪ್ಪ, ಸಿ ಮಂಜುನಾಥ ಹಾಗೂ ಜಿಲ್ಲಾ ಕಸಪ ದ ಬಸವರಾಜ್ ಗದಗಿನ್ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top