ಪೋಸ್ಟ್ ಪಾರ್ಟಮ್ ಡಿಪ್ರೆಶನ್- ಬಾಣಂತಿ ಸನ್ನಿ- ನಿವಾರಣೆ ಹೇಗೆ...?

Upayuktha
0


-ಡಾ. ರೂಪಾ ರಾವ್

ರಪಂಜರ ಕಲ್ಪನಾ ಯಾರಿಗೆ ಗೊತ್ತಿಲ್ಲ. ಬಹುಶಃ ಪ್ರಸವ ನಂತರ ಖಿನ್ನತೆಯನ್ನು ತೋರಿಸಿದ ಮೊದಲ ಕನ್ನಡ ಸಿನಿಮಾ ಅದೆನಿಸುತ್ತದೆ.

ವಿಪರ್ಯಾಸ ಎಂದರೆ‌ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಹೆಚ್ಚು ಮಾತಾಡುತ್ತಿರುವ ಈ ವೇಳೆಯಲ್ಲಿಯೇ ಈ ಪೋಸ್ಟ್ ಪಾರ್ಟಮ್ ಖಿನ್ನತೆ ಇನ್ನೂ ಹೆಚ್ಚಿನ ಜನರಿಗೆ ಅರ್ಥವಾಗಿಲ್ಲ 


ಏನಿದು ಪೋಸ್ಟ್ ಪಾರ್ಟಮ್ ಡಿಪ್ರೆಶನ್?

ಹೆರಿಗೆಯಾದ ನಂತರ ಉಂಟಾಗುವ ಡಿಪ್ರೆಶನ್ 

ಹೆರಿಗೆ ಹೆಣ್ಣಿಗೆ‌ ಪುನರ್ಜನ್ಮ ಅಂತಲೇ ಹೇಳಬಹುದು. ಈ ಸಮಯದಲ್ಲಿ ಆಕೆಯ ಹಾರ್ಮೋನ್ಗಳಲ್ಲಿ, ದೈಹಿಕ ರಚನೆಯಲ್ಲಿ, ಮಾನಸಿಕ ಸ್ಥಿತಿಯಲ್ಲಿ, ಹಾಗೂ ಭಾವನೆಗಳಲ್ಲಿ ಹತ್ತು ಹಲವಾರು ಬದಲಾವಣೆಗಳನ್ನು ತರಬಹುದು. 

ಒಂದು ಅಧ್ಯಯನದ ಪ್ರಕಾರ ಶೇಕಡಾ 84 ರಷ್ಟು ಬಾಣಂತಿಯರು ಒಂದಲ್ಲ ಒಂದು ರೀತಿಯ ಮನಸ್ಥಿತಿಯ ಬದಲಾವಣೆಗಳು ಏರಿಳಿತಗಳನ್ನು ಹೊಂದುತ್ತಾರೆ. ಇವರಲ್ಲಿ 59%.8  ತಕ್ಷಣದ ಸಾಮಾನ್ಯ ಬದಲಾವಣೆಯ ಸ್ಥಿತಿ ಹೊಂದುತ್ತಾರಾದರೆ ಇಪ್ಪತ್ತು ಪರ್ಸೆಂಟ್ ಪೋಸ್ಟ್ ಪಾರ್ಟಮ್ ಡಿಪ್ರೆಶನ್‌ಗೆ  ತುತ್ತಾಗಬಹುದು. 02ಪರ್ಸೆಂಟ್ ಬಾಣಂತಿ ಸನ್ನಿ ಅಥವಾ ಪೋಸ್ಟ್ ಪಾರ್ಟಮ್ ಸೈಕೋಸಿಸ್‌ಗೆ ಬಲಿಯಾಗಬಹುದು. ಶರಪಂಜರದ ಕಲ್ಪನಾ ಇದೇ ಸ್ಥಿತಿ ಹೊಂದಿದ್ದು.


ಈ ಸ್ಥಿತಿಗಳು‌24 ಘಂಟೆಗಳವರೆಗೆ ಇದ್ದರೆ, ಇನ್ನು ಕೆಲವು 7ದಿನಗಳಲ್ಲಿ ಇನ್ನು ಕೆಲವು 7 ವಾರಗಳ ನಂತರವೂ‌ ಕಾಡುತ್ತದೆ. ಇದೇ ಅಪಾಯಕಾರಿಯಾದ ಘಟ್ಟ.

ಈ ಪಿಪಿಡಿ ಲಕ್ಷಣಗಳು 

ದುಃಖ, ಆತಂಕ.

ಯಾವುದರಲ್ಲಿಯ ಸರಿಯಾಗಿ ಗಮನ ಕೊಡಲಾಗದ ಸ್ಥಿತಿ.

ಹತಾಶೆಯ ಭಾವನೆ

ಕಾರಣವೇ ಇಲ್ಲದೇ ಅಳುವುದು

ಶಕ್ತಿಯೇ ಇಲ್ಲದಂತೆ‌ ಸುಸ್ತಾಗಿ ಕೂತಿರುವುದು 

ಸ್ನೇಹಿತರು ಮತ್ತು ಕುಟುಂಬದಿಂದ ಪ್ರತ್ಯೇಕವಾಗಿ ಕೂರುವುದು

ನಿದ್ರಿಸಲಾಗದ ಸ್ಥಿತಿ ಅಥವಾ ಹೆಚ್ಚು ನಿದ್ರಿಸುವುದು

ಮಗುವಿನ ಜವಾಬ್ದಾರಿ ತೆಗೆದುಕೊಳ್ಳಲು ನಿರಾಕರಿಸುವುದು.

ಅನಗತ್ಯವಾಗಿ ಕಿರುಚುವುದು.

ಅನಗತ್ಯ ಶಂಕೆ, ಭಯ ಆಂಕ್ಸೈಟಿ.

ಹಿಂದೆ ನಿರ್ವಹಿಸುತ್ತಿದ್ದ ಕೆಲಸಗಳನ್ನ ಈಗ ಮಾಡಲಾಗದ ಸ್ಥಿತಿ.


ಪಿಪಿಡಿಗೆ‌ ಕಾರಣವೇನು?

ಈ ಹಿಂದೆ ಡಿಪ್ರೆಶನ್‌ಗೆ ಒಳಗಾಗಿದ್ದಲ್ಲಿ 

ಗರ್ಭಿಣಿಯಾಗಿದ್ದಾಗ‌ ಅಥವಾ ಮಗು ಹುಟ್ಟಿದಾಗ ಸರಿಯಾದ ಸಹಾಯ, ಅನುಭೂತಿ, ಪ್ರೀತಿ ಸಿಗದೇ ಇದ್ದಾಗ.

ನಿದ್ರಾಹೀನತೆ

ಹಾರ್ಮೋನ್ ಬದಲಾವಣೆಗಳು.

ಹೆರಿಗೆಯ ಸಮಯದಲ್ಲಿ ಯಾವುದಾದರೂ ಸಂಕೀರ್ಣ ಸ್ಥಿತಿ


ಇದಕ್ಕೆ ಪರಿಹಾರ

ಮೊದಲು ಮನೆಯವರು ಈ ಸ್ಥಿತಿಯನ್ನು ಆಡಿಕೊಳ್ಳಬಾರದು.

ಅವಳು ಆಕ್ಟಿಂಗ್‌ ಮಾಡ್ತಾಳೆ ಎಂದ ಗಂಡಂದಿರನ್ನು ನೋಡಿರುವೆ. ಮಗು ಹುಟ್ಟಿದರೂ ಇನ್ನೂ ಜವಾಬ್ದಾರಿ ಬಂದಿಲ್ಲ‌ ಎಂದು‌ ಮೂದಲಿಸುವ ಜನರೂ ಇದ್ದಾರೆ. 

ಕುಟುಂಬದ‌ ತಕ್ಷಣ ಪ್ರೀತಿ, ಅನುಭೂತಿ, ಹಾಗೂ ಬೆಂಬಲ ಮೊದಲ ಅಗತ್ಯ.

ಸಾಧ್ಯವಾದಷ್ಟು ಖುಷಿಯ ವಾತಾವರಣ ಕೊಡಿ. 


ಆದಷ್ಟು ಬೇಗ ಮಾನಸಿಕ ತಜ್ಞರನ್ನು ಕಾಣುವುದು, ತೀವ್ರವಾದ ಸ್ಥಿತಿ ಇದ್ದಲ್ಲಿ ಗೈನಕಾಲಜಿಸ್ಟ್ ಅನ್ನು ಸಂಪರ್ಕಿಸಬಹುದು. ಅವರು ಅಗತ್ಯವಿದ್ದಲ್ಲಿ ಮೆಡಿಕೇಶನ್ ನೀಡುವರು.


ಹೆಣ್ಣು ಸೃಷ್ಟಿಸುವ ಪ್ರಕ್ರಿಯೆಯಲ್ಲಿ ತನ್ನ ಪ್ರಾಣ, ದೇಹ‌, ಮನಸು ಎಲ್ಲವನ್ನೂ ಪಣಕಿಟ್ಟಿರುತ್ತಾಳೆ. ಅವಳಿಗೆ ಇಂತಹ ವೇಳೆಯಲ್ಲಿ ಗಂಡಿನ /ಗಂಡನ ಹಾಗೂ ತಾಯಿ/ತಾಯಿಯಂತಹ‌ ಹೃದಯದವರ ಅವಶ್ಯಕತೆ ತುಂಬಾ ಇದೆ. ಅವಳಿಗೆ ಆ ಆದರ, ಪ್ರೀತಿ, ವಾತ್ಸಲ್ಯ ಹಾಗೂ ನಿಮ್ಮ ಕಿವಿ ಕೊಡಿ.  ಅರ್ಧಕ್ಕರ್ಧ ಅವಳ ಮಾನಸಿಕ ಖಾಯಿಲೆಗಳು ದೂರವಾಗುತ್ತದೆ.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top