ಶ್ರೀಕೃಷ್ಣ ಪರಮಾತ್ಮ ಗೋವುಗಳನ್ನು ಕರುಗಳನ್ನೆಲ್ಲ ಮೇಯಿಸುವದಕ್ಕೆ ಕರೆದುಕೊಂಡು ಹೋಗಿದ್ದಾನೆ. ಪ್ರತಿದಿನ ಬಲರಾಮನನ್ನು ಮುಂದೆ ಮಾಡಿಕೊಂಡು ಗೋಪಾಲಕರೊಂದಿಗೆ ಗೋವುಗಳ ರಕ್ಷಣೆಗೆ ಹೋಗುತ್ತಿರುತ್ತಾನೆ ಆದರೆ ಈ ದಿನ ಮಾತ್ರ ಕೃಷ್ಣ ಒಬ್ಬನೇ ಬಂದಿದ್ದಾನೆ. ನೀರಡಿಕೆ ಆಗಿದೆ ಯಮುನೆಯ ಒಂದು ಭಾಗದೊಳಗೆ ಇರುವ ನೀರು ಕುಡಿದಾಗ ಗೋವುಗಳು ಗೋಪಾಲಕರು ಮೃತರಾಗಿದ್ದಾರೆ ಪರಮಾತ್ಮ ಅವರನ್ನು ಜೀವಂತ ಮಾಡಿದ್ದಾನೆ. ಶ್ರೀಕೃಷ್ಣ ಪರಮಾತ್ಮ ಮೊದಲು ವಿಷದ ಬಾಧೆಗೆ ಒಳಗಾದವರನ್ನು ಬದುಕಿಸಿದ ನಂತರ ಇದಕ್ಕೆ ಕಾರಣವಾದವರನ್ನು ಹುಡುಕಲು ಹೊರಟ. ಅಮೃತದ ಧಾರೆಯನ್ನು ಸುರಿಸುವ ಕೃಪಾದೃಷ್ಟಿಯಿಂದ ಎಲ್ಲರನ್ನು ಕಾಪಾಡುತ್ತದೆ. ಇದು ಪರಮಾತ್ಮನ ಅದ್ಭುತ ಕಾರುಣ್ಯ ಕೃಪಾದೃಷ್ಟಿಯನ್ನು ನೀಡುತ್ತಾನೆ.
ಸತ್ತವರನ್ನು ಬದುಕಿಸುವ ಸಾಮರ್ಥ್ಯ, ಹುಟ್ಟು ಸಾವು ಬದುಕು ಪರಮಾತ್ಮನ ಅಧೀನ ಎಂದು ತಿಳಿಸಲು ಅವನಲ್ಲಿ ವಿಶೇಷ ಭಕ್ತಿ ಮಾಡಲಿ ಎಂಬ ಕಾರುಣ್ಯದಿಂದ ಅವರನ್ನು ರಕ್ಷಿಸುತ್ತಾನೆ. ಜೀವನದಲ್ಲಿ ಸುಖದುಃಖ ಎಲ್ಲವೂ ಭಗವಂತನ ಕಾರುಣ್ಯ ಎಂದು ತಿಳಿಯಬೇಕು. ಸುಖವಾಗಲಿ ದುಃಖವಾಗಲಿ ಸಖ ನೀನಾಗಿರು ಪಾಂಡುರಂಗ ಎಂದು ದಾಸರು ಹಾಡಿದ್ದಾರೆ ಅದನ್ನು ಅನುಸಂಧಾನ ಮಾಡಬೇಕು.
ರುದ್ರದೇವರ ವರದಿಂದ ಮಂದರ ಪರ್ವತವನ್ನು ಎತ್ತಲಿಕ್ಕೆ ಆಗುವುದಿಲ್ಲ. ಇಂದ್ರಾದಿ ದೇವತೆಗಳಿಗೂ ಪರ್ವತ ಎತ್ತಲು ಆಗಲಿಲ್ಲ. ಪರಮಾತ್ಮ ಗರುಡದೇವರಿಗೆ ಆಜ್ಞೆ ಮಾಡುತ್ತಾನೆ. ಅವರ ಮೇಲೆ ಸ್ವಯಂ ಪರಮಾತ್ಮನೇ ಎತ್ತಿ ಕೊಟ್ಟಿದ್ದಾನೆ. ಈ ಸಮಯದಲ್ಲಿ ದೇವಾದಿದೇವತೆಗಳಿಗೆ ತನ್ನ ಕೃಪಾದೃಷ್ಟಿಯಿಂದ ದೇವತೆಗಳಿಗೆ ಆದ ಗಾಯವನ್ನು ಗುಣಪಡಿಸದಂತೆ ಇಲ್ಲಿ ವಿಷದಿಂದ ಪೀಡಿತರಾದವರನ್ನು ಬದುಕಿಸಿದ್ದಾನೆ. ಪರಮಾತ್ಮನ ದೃಷ್ಟಿಯಲ್ಲಿ ಅಮೃತವಿದೆ. ಭಕ್ತರು ಅಜ್ಞಾನದಿಂದ ತಪ್ಪು ತಿಳಿಯಬಾರದು ಎಂದು ಅಮೃತವಿಲ್ಲದೇ ಇದ್ದರೂ ಪರಮಾತ್ಮನ ಅನುಗ್ರಹದಿಂದ ಬದುಕುತ್ತಾರೆ ಎಂದು ತೋರಿಸಿದ್ದಾನೆ. ಇಲ್ಲಿ ಶೀಕೃಷ್ಣ ಪರಮಾತ್ಮನ ಕೃಪಾ ದೃಷ್ಟಿಯಿಂದ ಬದುಕಿದ್ದೇವೆ ಎಂದು ಗೋಪಾಲಕರು ತಿಳಿದಿದ್ದಾರೆ ಎಂದು ಭಾಗವತ ಹೇಳುತ್ತದೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ