ಮಂಗಳೂರು: ಹುಟ್ಟಿನ ಮಾನದಂಡದಿಂದ ಜನರನ್ನು ಒಂದು ಶ್ರೇಣಿಕೃತ ವ್ಯವಸ್ಥೆಯ ನಿರ್ದಿಷ್ಟ ಸ್ಥಾನಗಳಲ್ಲಿ ಕೂರಿಸುವ ಹಾಗೂ ಆ ವ್ಯವಸ್ಥೆಯು ದುರ್ಬಲಗೊಳ್ಳದಂತೆ ನೋಡಿಕೊಳ್ಳುವ ಸಾಂಸ್ಥಿಕ ಪ್ರಯತ್ನದಿಂದ ಭರತ ಖಂಡದಲ್ಲಿ ರೂಪುಗೊಂಡಿರುವ ಪ್ರಜ್ಞೆಯೇ ಬ್ರಾಹ್ಮಣ್ಯ. ಆತ್ಮ ಚೈತನ್ಯದ ಶಕ್ತಿಯನ್ನು ಅರಿತುಕೊಳ್ಳುವವನೇ ಬ್ರಾಹ್ಮಣ ಎಂದು ಅದ್ಯಪಾಡಿ, ಶ್ರೀ ಆದಿನಾಥೇಶ್ವರ ದೇವಸ್ಥಾನ ಇಲ್ಲಿನ ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ್ ಭಟ್ ನುಡಿದರು.
ಅವರು ವಿಪ್ರವೇದಿಕೆ ಕೋಡಿಕಲ್ ವತಿಯಿಂದ ಬೆನಕ ಸಭಾಭವನ ಇಲ್ಲಿ ಹಮ್ಮಿಕೊಂಡಿರುವ ಬ್ರಾಹ್ಮಣ- ಅನುಷ್ಠಾನ ವಿಷಯದಲ್ಲಿ ಉಪನ್ಯಾಸ ನೀಡಿದರು. ಬ್ರಾಹ್ಮಣರು ಇತರರಿಗೆ ಮಾದರಿಯಾಗಿ ಜೀವನ ನಡೆಸಲು ಸತ್ಯವಂದನಾದಿ ಕ್ರಿಯೆಗಳನ್ನು ನಿತ್ಯ ಮಾಡಿ ಆಧ್ಯಾತ್ಮಿಕ ಜ್ಞಾನವನ್ನು ಪಡೆಯಬೇಕು ಎಂದರು
ವೇದಿಕೆಯ ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳಾಡಿದರು. ಕಾರ್ಯದರ್ಶಿ ದುರ್ಗಾದಾಸ್ ಕಟೀಲು ವಂದಿಸಿದರು. ಕೋಶಾಧಿಕಾರಿ ಕಿಶೋರ್ ಕೃಷ್ಣ, ವೇ.ಮೂ. ವರ್ಕಾಡಿ ಸುಬ್ರಮಣ್ಯ ಮಯ್ಯ, ವಿಕಟಪೂರ್ವ ಅಧ್ಯಕ್ಷೆ ವಿದ್ಯಾ ಗಣೇಶ್, ಗಿರೀಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸ ನೀಡಿದ ವೇದಮೂರ್ತಿ ಮಹೇಶ್ ಭಟ್ ಇವರನ್ನು ಗೌರವಿಸಲಾಯಿತು ಕೊನೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಹಮ್ಮಿಕೊಳ್ಳಲಿರುವ ಕೋಟಿ ಜಪ ಗಾಯತ್ರಿ ಯಜ್ಞದ ಬಗ್ಗೆ ಮಾಹಿತಿ ನೀಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ