ದಾಸರು ವೆಂಕಟೇಶ ದೇವರ ಮುಂದೆ ನಿಂತು ಭಕ್ತರು ಶ್ರೀಗಂಧ ಆಗಿದ್ದರೆ, ನಿನ್ನ ಸ್ಪರ್ಶ ಮಾಡುವ ಭಾಗ್ಯ ನನಗಿತ್ತು, ತುಳಸಿ ಆಗಿದ್ದರೆ, ಹೂವು ಆಗಿದ್ದರೆ ಎಂದು ಪ್ರಾರ್ಥನೆ ಮಾಡುತ್ತಾರೆ. ನಿನ್ನ ಅಂಗದ ಸಂಗ ಆಗುವ ಭಾಗ್ಯ ನನಗೆ ದೊರೆಯುತ್ತಿತ್ತು ಎಂದು ಪ್ರಾರ್ಥಿಸುತ್ತಾನೆ. ಇದರಂತೆ ಉಲೂಖಲ (ಒರಳಿನ) ಅಭಿಮಾನಿ ದೇವತೆಗಳು ಇರುತ್ತಾರಲ್ಲ ಅವರಿಗೆ ಶ್ರೀ ಕೃಷ್ಣ ಪರಮಾತ್ಮನ ಉದರದ ಸ್ಪರ್ಶಕ್ಕೂ ಸೌಭಾಗ್ಯ ಸಿಗಲಿ ಎಂದು ಕಟ್ಟಿದ್ದಾಳೆ ಎಂದು ಎನಿಸುತ್ತದೆ. ಆ ಅನುಸಂಧಾನ ಬಂದರೆ ಇದು ಭಕ್ತಿ ಪಾಶ ಪರಮಾತ್ಮನಿಗೂ ಭಕ್ತನಿಗೂ ಕಟ್ಟಿದ ಪಾಶದಂತ ಅಂಬರೀಷ ಮಹಾರಾಜನ ದೂರ್ವಾಸರು ವಿರೋಧ ಮಾಡಿದರೆ ಪರಮಾತ್ಮ ಜಗತ್ತಿಗೆ ತೋರಿಸಿಕೊಟ್ಟಿದ್ದು ಯಾರಿಗೆ ವಿರೋಧ ಮಾಡಿದ್ದೀರೋ ಅಲ್ಲಿಯೇ ಹೋಗಿ ಬಂದು ತೋರಿಸಿದಂತೆ ನಲಕೂಬ ಮಣಿಗ್ರೀವರ ಉದ್ದಾರ ಮಾಡಿದ್ದಾನೆ. ಹಗ್ಗ ಬೇರೆ ದಾರ ಬೇರೆ ಬಹಳಷ್ಟು ದಾರಗಳು ಸೇರಿಸಿ ಹಗ್ಗವಾಗುತ್ತದೆ. ಭಗವಂತನಲ್ಲಿ ಭಕ್ತಿ ಹೇಗೆ ಮಾಡಬೇಕೆಂದರೆ ಭಗವಂತನ ಜ್ಞಾನದ ಎಳೆ ಎಳೆಯ ಉಪಕಾರ ಸ್ಮರಣೆ ಮಾಡಬೇಕು ಪರಮಾತ್ಮನ ಉಪಕಾರ ಅಗಣಿತವಾಗಿದೆ. ಭಗವಂತನ ಜ್ಞಾನದಲ್ಲಿ ನಾನು ಇದ್ದೇನೆ ನನ್ನವರು ಇದ್ದಾರೆ ಎಲ್ಲವನ್ನೂ ತಿಳಿದು ಭಗವಂತ ನಮ್ಮ ಮೇಲೆ ತೋರಿಸುವ ಕರುಣೆ, ಉಪಕಾರ ಎಲ್ಲವನ್ನೂ ಸ್ಮರಣೆ ಮಾಡಬೇಕು ಅವನ ಪ್ರತಿಯೊಂದು ಗುಣ, ಕ್ರಿಯೆ, ಉಪಕಾರಗಳನ್ನು ಪ್ರತ್ಯೇಕವಾಗಿ ಭಕ್ತಿ ಮಾಡಬೇಕು ಎಲ್ಲ ಪ್ರೀತಿದಾರಗಳನ್ನು ಸೇರಿಸಿ ಪ್ರೀತಿಯ ಹಗ್ಗವನ್ನು ಮಾಡಿ ಅವನನ್ನು ನಮ್ಮ ಭಕ್ತಿಯಿಂದ ಕಟ್ಟಬೇಕು.
ಗುರುಗಳ ಮೂಲಕವೇ ಪರಮಾತ್ಮನ ಬಳಿ ಹೋಗಬೇಕು ಎಂದು ತೋರಿಸಿದ್ದಾರೆ. ನಾರದರು ಶಾಪ ಕೊಟ್ಟಿದ್ದು ಕೂಡ ಅನುಗ್ರಹ ಮಾಡಲಿಕ್ಕೆ ಎಂದೇ ಹೇಳುತ್ತಾರೆ. ಶುಕಾಚಾರ್ಯರು ಹೇಳುತ್ತಾರೆ ವೇದವ್ಯಾಸ ದೇವರು ತಿಳಿಸುತ್ತಾರೆ. ಶಾಪ ಕೊಟ್ಟಿದ್ದು ಅನುಗ್ರಹ ಮಾಡುವದಕ್ಕಾಗಿಯೇ ಅವರು ವಿಷ್ಣು ಭಕ್ತರು ಎಂದು ವಿವಸ್ತ್ರರಾದ ನೀವು ದೇವರ್ಷಿಯಾದ ನಾನು ಬಂದ ಮೇಲೆ ಕೂಡ ತಕ್ಕ ಗೌರವ ಸೂಚಿಸದೇ ಉನ್ಮತ್ತರಾದದ್ದು ಈ ದೇಹದ ಮೇಲಿನ ಅಭಿಮಾನದಿಂದ ಆ ದೈಹಿಕವಾದ ಸುಖವನ್ನು ಪಡಬೇಕೆಂಬ ದುರಾಸೆ ಯಾಕೆ ಇಷ್ಟು ಅಭಿಮಾನವನ್ನು ದೇಹದಮೇಲೆ ಮಾಡುತ್ತೀದ್ದಿರಿ ಈ ದೇಹ ಯಾರದ್ದು ಎಂದು ತಿಳಿಯಿರಿ. ದೇಹಕ್ಕೆ ಸಂಸ್ಕಾರವಾಗದೆ ಹೋದರೆ ಹುಳಗಳು ತಿಂದು ಹುಳವಾಗಿ ಬೀಳುತ್ತದೆ, ಬೇರೆ ಪ್ರಾಣಿಗಳು ತಿಂದರೆ ಅವುಗಳ ಮಲವಾಗಿ ಬೀಳುತ್ತದೆ ಸಂಸ್ಕಾರ ಮಾಡಿದರೆ ಭಸ್ಮ ಆಗುತ್ತದೆ ಹೂಳಿದರೆ ಮಣ್ಣಾಗುತ್ತದೆ. ಇಂತಹ ಈ ದೇಹದ ಮೇಲೆ ಅಭಿಮಾನ ಬೇಡ ಎಂದು ಹೇಳುತ್ತಾರೆ. ದೇಹ ಅನ್ನದಾತನದು, ಪಾಲಕರ ಪೋಷಕರ ಉಪಕಾರಕರ ಅಭಿಮಾನ ಅವರಿಗೆ ಇದೆ. ತಾಯಿ, ತಂದೆ, ತಂದೆಯ ತಂದೆ, ತಂದೆಯ ತಾಯಿ, ತಾಯಿಯ ತಂದೆ, ತಾಯಿಯ ತಂದೆ ಎಲ್ಲ ಬಂಧುಗಳು ನಾನಾ ವಿಧವಾದ ಮೃಗಗಳು ದೇಹವನ್ನು ತಿನ್ನುವ ಅಭಿಮಾನ ಇದೆ. ಇಂತಹ ಹೊಲಸು ದೇಹದ ಅಭಿಮಾನದೊಳಗೆ ಮುಳುಗಿದ್ದೀರಲ್ಲ ಎದ್ದೇಳಿ ಎಂದು ನಲಕೂಬ ಮಣಿಗ್ರೀವರಿಗೆ ಉಪದೇಶ ಮಾಡುತ್ತಲಿದ್ದಾರೆ. ಅದಕ್ಕಾಗಿಯೇ ಭಾಗವತದಲ್ಲಿ ಆಚಾರ್ಯರು ಹೇಳುತ್ತಾರೆ ಅವರಿಗೆ ಅನುಗ್ರಹ ಮಾಡಲೆಂದೇ ಶಾಪವನ್ನು ನೀಡಿದ್ದಾರೆ ಎಂದು ಕುಬೇರ ಮಕ್ಕಳು, ಕುಬೇರ ನಮ್ಮೆಲ್ಲರ ದೇಹಕ್ಕೆ ಅಭಿಮಾನಿ ದೇವತೆ. ದೇಹದಂತಹ ಸಂಪತ್ತು ಮತ್ತೊಂದಿಲ್ಲ, ದೇಹವನ್ನು ಉತ್ತಮ ಕಾರ್ಯಗಳಿಗೆ ಬಳಸಿದರೆ ಇದರ ಸಮ ಮತ್ತೊಂದಿಲ್ಲ ಎಂದು ಹೇಳುತ್ತಾರೆ.
ಯಾರೂ ದೇಹದ ಅಂಗವನ್ನು ಯಾರಿಗೂ ಕೊಡಲು ಸಾಧ್ಯವಿಲ್ಲ ಎನ್ನುವಾಗ ಇದೇ ದೇಹದಿಂದ ಮೋಕ್ಷ ಪಡೆಯಬಹುದು ಗುರುಗಳ ಸೇವೆ ಸತ್ಕಾರ್ಯಗಳನ್ನು ಮಾಡಬಹುದು, ದೇವರ ಸೇವೆಯನ್ನು ಮಾಡಿದರೆ ಮೋಕ್ಷ ಪಡೆಯಬಹುದು ಇಂತಹ ದೇಹಾಭಿಮಾನಿ ದೇಔತೆ ಕುಬೇರ ಆ ಕುಬೇರನ ಮಕ್ಕಳು ನಲಕೂಬ ಮಣಿಗ್ರೀವರು ಇಂತವರಿಗೆ ನಾರದರು ಉಪದೇಶ ಮಾಡುತ್ತಾರೆ ಎಂದರೆ ನಮ್ಮ ಸಾಧನೆ ಹೇಗೆ ಇರುತ್ತದೆ ಅದರಂತೆ ನಮಗೆ ಉತ್ತಮ ಗತಿಯಾಗುತ್ತದೆ. ಅಹಂಕಾರ ಮದ ಶ್ರೀಮಂತಿಕೆ ಹೋದರೆ ಸರಿಯಾದ ಬುದ್ಧಿ ಬರುತ್ತದೆ ಎಂದು ಗಿಡವಾಗಿ ಹುಟ್ಟಿ ಎಂದು ಶಾಪ ಕೊಡುತ್ತಾರೆ. ಬಟ್ಟೆ ಇಲ್ಲದೇ ಇರುವ ಆಸೆ ಇರುವ ಕಾಋಣ ವಿವಸ್ತ್ರರಾಗಿ ಗಿಡವಾಗಿ ಇರಬೇಕೆಂದು ಶಾಪ ಕೊಟ್ಟರು ಗಿಡಗಳಾದಾಗ ಐಶ್ವರ್ಯವಿಲ್ಲದೇ ಇರೀ ಎಂದು ಶಾಪ ಕೊಟ್ಟಿದ್ದಾರೆ. ಈ ಬುದ್ಧಿವಾದ ಹೇಳಿ ಅವರಿಗೆ ಶಾಪ ಕೊಟ್ಟಿದ್ದಾರೆ. ನೀವು ಅನುಭವಿಸುವ ಕಷ್ಟವೆಲ್ಲವನ್ನು ತಪಸ್ಸು ಎಂದು ಸ್ವೀಕರಿಸಿ ಎಂದು ಹೇಳಿದ್ದಾರೆ.
ಬ್ರಹದಾರಣ್ಯಕ ಭಾಷ್ಯಗಳು ಹೇಳುತ್ತವೆ. ಆದಿ ವ್ಯಾದಿಗಳು ತಪವೆಂದು ಅರ್ಪಣೆ ಮಾಢಬೇಕು ಎಂದು ಹೇಳುತ್ತಾರೆ. ಈ ಜನ್ಮದ ರೋಗಗಳೇ ಎಂದಿಲಲ ಹಿಂದಿನ ಜನ್ಮದಲ್ಲಿ ಈ ಜನ್ಮದಲ್ಲಿ ಅರ್ಪಣೆ ಮಾಡಬಹುದು ಎಂದು ಹೇಳುತ್ತಾರೆ. ನಾವು ಅನುಭವಿಸುವ ರೋಗಗಳನ್ನು ತಪಸ್ಸೆಂದು ದೇವರು ಸ್ವೀಕರಿಸುತ್ತಾನೆ ಎಂದಾಗ ನಾವು ಅರ್ಪಿಸಬೇಕು ಎಂದು ಹೇಳುತ್ತಾರೆ. ಬಡತನ ಬಂದರೆ ಸಜ್ಜನರ ಸಹವಾಸ ಆಗುತ್ತದೆ. ವಿನಯವಂತಿಕೆ ಬರುತ್ತದೆ ಎಂದು ಸಜ್ಜನರು ಬಡವರ ಬಳಿ ಹೋಗುತ್ತಾರೆ. ಅದಕ್ಕಾಗಿ ದಾರಿದ್ರ್ಯ ಬರಲಿ ಎಂದು ಶಾಪವನ್ನು ಕೊಟ್ಟಿದಾರೆ. ಇಬ್ಬರೂ ಕುಬೇರ ಪುತ್ರರಿಗೆ ಶಾಪ ವಿಮೋಚನೆಯಾದಾಗ ಭಗವಂತನಿಗೆ ಪ್ರಾರ್ಥನೆ ಮಾಡುತ್ತಾರೆ. ಇಂದ್ರಿಯಗಳ ದುರೂಪಯೋಗ ಆಗದಂತೆ ಅನುಗ್ರಹ ಮಾಡು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾರೆ.
ಪರಮಾತ್ಮನ ಕಥೆಯನ್ನು ಕೇಳುವುದರಲ್ಲಿ ಕಿವಿ, ಸೇವೆಯನ್ನು ಮಾಡುವುದರಲ್ಲಿ ಕೈಗಳು ನಿನ್ನ ಪಾದ ಸ್ಮರಣೆ ಮಾಡುವ ಮನಸು, ತಲೆ ಯಾವಾಗಲೂ ನಿನ್ನ ಭಕ್ತರಿಗೆ ಬಾಗಿ ನಮಿಸುವುದಕ್ಕೆ ಇರಲಿ. ನಿನ್ನ ಭಕ್ತರ ದರ್ಶನ ಪ್ರತಿಮೆಗಳ ದರ್ಶನ ಗ್ರಂಥಗಗಳ ದರ್ಶನ ಸಜ್ಜನರ ದರ್ಶನಕ್ಕಾಗಿ ನಮ್ಮ ಕಣ್ಣುಗಳಿರಲಿ ಎಂದು ಪ್ರಾರ್ಥನೆ ಮಾಡುತ್ತಾರೆ. ದುಷ್ಟ ವಿಷಯಗಳನ್ನು ಕೇಳುವುದು ಪಾಡುವುದು ಬೇಡ ಎಂದು ಪ್ರಾರ್ಥನೆ ಮಾಡುತ್ತಾರೆ. ನೋಡಬೇಕಾದ್ದನ್ನು ನೋಡಬಾರದ್ದನ್ನು ನೋಡುತ್ತೇವೆ, ಸ್ಮರಣೆ ಮಾಡಬೇಕಾದ್ದು ಮಾಡಬಾರದ್ದನ್ನೆಲ್ಲಾ ಮಾಡುತ್ತೇವೆ. ಹೀಗಾಗಿ ನಾವು ಪರಮಾತ್ಮನ ಮಹಿಮೆಯನ್ನು ಕೇಳಬೇಕು ಎಂದು ಹೆಚ್ಚು ಭಕ್ತಿಯಿಂದ ಕೇಳಬೇಕು. ದಿಗಂಬರರಾದ ಶುಕಾಚಾರ್ಯರು ಭಾಗವತವನ್ನು ಹೇಳುವಾಗ ಭಕ್ತಿಯಿಂದ ಹೇಳುತ್ತಾರೆ. ಶುಕಾಚಾರ್ಯರು ದೇಹಾಭಿಮಾನ ಬಿಟ್ಟು ಭಗವಂತನ ಮಹಿಮೆಯನ್ನು ಹೇಳುತ್ತಾ ಮಗ್ನರಾಗದರೆ ಅವರಿಗೆ ಶಿಕ್ಷೆ ಇಲ್ಲ. ಆದರೆ ಕಾಮ ಕ್ರೋಧಗಳಿಗೆ ಒಳಗಾಗಿ ವಿವಸ್ತ್ರರಾದರೆ ಅದು ದೋಷ ಎಂದು ಭಾಗವತ ಹೇಳುತ್ತದೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ