ಶ್ರೀ ಸತ್ಯಾತ್ಮವಾಣಿ– 41: ತಪ್ಪು ಯಾರೇ ಮಾಡಿರಲಿ ಶಿಕ್ಷೆ ಅವರಿಗೆ ತಪ್ಪಿದ್ದಲ್ಲ

Upayuktha
0



ಶ್ರೀಕೃಷ್ಣ ಪರಮಾತ್ಮನನ್ನು ಹೆದರಿಸುವುದಕ್ಕೆ ಬೆದರಿಸುವುದಕ್ಕೆ ಯಶೋದೆ ಕೈಯಲ್ಲಿ ಕೋಲನ್ನು ತೆಗೆದುಕೊಂಡಿದ್ದಾಳೆ. ಭಾಗವತದಲ್ಲಿ ಮತ್ತು ಮಹಾಭಾರತಾತ್ಪರ್ಯ ನಿರ್ಣುಯದಲ್ಲೂ ಬರುತ್ತದೆ.  ಮಹಾ ಮಹಾಯೋಗಿಗಳು ಋಷಿಗಳು ಸಹಸ್ರಾರು ವರುಷ ತಪಸ್ಸು ಮಾಡಿದರೂ ದೊರಕದ ಪರಮಾತ್ಮನನ್ನು ಹಿಡಿಯಲು ಓಡುತ್ತಾಳೆ, ಕೋಲಿನಿಂದ ಹೆದರಿಸುವ ಪ್ರಯತ್ನ ಮಾಡುತ್ತಾಳೆ. ಭಯವನ್ನು ಕೊಡುವವಳು ದುರ್ಗಾದೇವಿ ಅವಳು ಭಯಾಭಿಮಾನಿನಿ ಪರಮಾತ್ಮನಿಗೆ ಹೆದರುತ್ತಾಳೆ. ಅಂತಹ ಪರಮಾತ್ಮನಿಗೆ ಹೆದರಿಸಲು ಯಶೋದೆ ಪ್ರಯತ್ನ ಮಾಡುತ್ತಾಳೆ. ದಾಸರು ಹೇಳುತ್ತಾರೆ. ಹರಿಯ ಭಕ್ತರಿಗೆ ಭಯವಿಲ್ಲ ಅಂತಹ ಪರಮಾತ್ಮ ಯಶೋದೆಗೆ ಹೆದರಿದಂತೆ ತೋರಿಸುತ್ತಾನೆ. ಭಗವಂತನ ಕೃಪೆ ಬಹಳ ಅದ್ಭುತ. ಹರಿಯಅನುಗ್ರಹ ಇದ್ದಾಗ ಹಾವು ಕೂಡ ಮಾಲೆಯಾಗುತ್ತದೆ. ವಿಜಯೀಂದ್ರ ಸ್ವಾಮಿಗಳ ಕತೆಯನ್ನು ಕೇಳಿದ್ದೇವೆ. ಎಲ್ಲವನ್ನು ದೇವರು ಒದಗಿಸಿಕೊಟ್ಟು ಕಾಪಾಡಿದ್ದಾನೆ ಎಂದು ಕೇಳುತ್ತೇವೆ.  ದೇವರು ಭಯ ಆದಂತೆ ನಾಟಕ ಮಾಡುತ್ತಾನೆ. ಭಾಗವತದಲ್ಲೂ ಅದನ್ನೇ ಹೇಳುತ್ತಾರೆ.


ಶ್ರೀ ಕೃಷ್ಣ ಪರಮಾತ್ಮನನ್ನು ಹಿಡಿಯುವ ಪ್ರಯತ್ನ, ಕಟ್ಟುವ ಪ್ರಯತ್ನ ಮಾಡಿದಳು ಅದಕ್ಕೆ ಕಟ್ಟಿಸಿಕೊಂಡ, ಒರಳಿಗೆ ಕಟ್ಟಿದ್ದಾಳೆ.  ಈ ಘಟನೆಗೆ ವಾದಿರಾಜ ಶ್ರೀಪಾದರು ಹೇಳುತ್ತಾರೆ, ಒರಳಿಗೆ ಕೃಷ್ಣನಿಗೆ ಸೇರಿಸಿ ಕಟ್ಟಿದ್ದಾಳೆ ಎನ್ನುತ್ತಾರೆ. ಪರಮಾತ್ಮ ತನ್ನ ಉದರದಲ್ಲಿ ಮುಕ್ತು ಅಮುಕ್ತರು ಇದ್ದಾರೆ ಮುಕ್ತರಿಗೆ ಬಂಧನ ಬರಬಾರದು ಎಂದು ಕಟ್ಟಿಸಿಕೊಳ್ಳದೇ ಬಿಟ್ಟಿರಬಹುದು ಎಂದು ಹೇಳುತ್ತಾರೆ.


ಶ್ರೀಕೃಷ್ಣ ಪರಮಾತ್ಮ ಅವಳು ಒರಳಿಗೆ ಕಟ್ಟಿದ್ದನ್ನು ಎಳೆದು ಕೊಂಡು ಹೋಗಿ ಅರ್ಜುನ ವೃಕ್ಷಗಳು ಬಿದ್ದವು. ಒಳಗೆ ಇದ್ದ ಅಸುರರಾದ ಧ್ವನಿ ಚಮೂ ಇವರ ವಧೆ ಮತ್ತು ನಲಕೂಬ ಮಣಿಗ್ರೀವರ ಉದ್ದಾರ ಮಾಡುವುದಕ್ಕಾಗಿ ಮಾಡಿದ ಯಾಕೆ ಅಂದರೆ ದೇವರು ಸಂದೇಶ ಕೊಡುತ್ತಾನೆ. ವಿರೋಧ ಮಾಡುವವರಿಗೆ ವಿರೋಧ ಮಾಡುವರ ಸಮರ್ಥಕರಿಗೆ ಅಪಾಯ ತಪ್ಪಿದ್ದಲ್ಲ ಎಂದು ತೋರಿಸುತ್ತಾನೆ ಮಂಗಳಕಾರ್ಯ ಮಾಡುವವರಿಗೆ ಅದಕ್ಕೆ ಸಹಾಯ ಮಾಡುವವರಿಗೆ ಸುಖವಿದೆ ಎಂದು ಭಾಗವತದಲ್ಲಿ ಹೇಳುತ್ತಾರೆ. ಒಳ್ಳೆಯ ಕೆಲಸ ಮಾಡುವವರಿಗೆ ಬೆಂಬಲ ನೀಡಿದವರಿಗೆ ಬಾಯಲ್ಲಿ ಒಳ್ಳೆಯದಾಯಿತು ಎಂದವರಿಗೂ ಪುಣ್ಯ ಬರುತ್ತದೆ ಎಂದು ಹೇಳುತ್ತಾಋ. ಅಳಿಲು ಸೇವೆ. ಪ್ರಾಯಃ ಮನೆಯ ಹಿತ್ತಲಿನಲ್ಲಿದ್ದ ಅರ್ಜುನ ಮರದ ಟೊಂಗೆಯನ್ನು ತೆಗೆದುಕೊಂಡಿದ್ದಳೋ ಆ ಮರಕ್ಕೆ ಮೂಲ ಸಮೇತ ಕಿತ್ತೊಗೆಯುತ್ತಾನೆ. ತಂದೆ ತಾಯಿಯರಿಗೆ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದೂ ತೋರಿಸುವುದರ ಜೊತೆಗೆ ಕುಬೇರನ ಮಕ್ಕಳು ರುದ್ರದೇವರ ಅನುಚರರು ಅವರಿಗೆ ನಾರದರ ಶಾಪ ವಿಮೋಚನೆ, ಧ್ವನಿ ಚಮೂ ರಾಕ್ಷಸರ ಸಂಹಾರವನ್ನು ಮಾಡಿ ಸಜ್ಜನರಿಗೆ ಉಪಕಾರ ಮಾಡಿದ್ದಾನೆ. ತನ್ನವರೆಂದು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುತ್ತಾನೆ. ಭಗವಂತ ಕರ್ಮಕ್ಕೆ ತಕ್ಕಂತೆ ಫಲವನ್ನು ಕೊಡುತ್ತಾನೆ.


ಪಾರ್ವತಿಯು ಅವಧ್ಯರಾಗಿರಿ ಎಂದು ಕೊಟ್ಟ ವರವನ್ನು ಮೀರಿ ವಧಿಸಿದ್ದಾನೆ. ಅವರ ಕರ್ಮ ತಕ್ಕ ಫಲ ದೊರೆಯುತ್ತದೆ. ನಾವು ಪಾಪ ಮಾಡಿದ ಪಾಪಕ್ಕೆ ಪಾಪದ ಫಲ ಅನುಭವಿಸಬೇಕು. ನಾವು ಪುಣ್ಯ ಮಾಡಿದ್ದರೆ ಮಾತ್ರ ನಮಗೆ ಆಶೀರ್ವಾದ ನಲಕೂಬ ಮಣಿಗ್ರೀವರು ತಪ್ಪು ಮಾಡಿದ್ದರು ಅವರು ಮಾಡಿದ ತಪ್ಪಿಗೆ ಶಿಕ್ಷೆಯನ್ನು ಕೊಟ್ಟು ನಂತರ ಉದ್ಧಾರ ಮಾಡುತ್ತಾನೆ. ಅನ್ಯ ಕ್ಷೇತ್ರದಲ್ಲಿ ಮಾಡಿದ ಪಾಪ ಪುಣ್ಯ ಕ್ಷೇತ್ರದಲ್ಲಿ ಕಳೆದು ಕೊಳ್ಳಬಹುದು, ಪುಣ್ಯ ಕ್ಷೇತ್ರದಲ್ಲಿ ಮಾಡಿದ ಪಾಪ ವಿಷ್ಣು ಕ್ಷೇತ್ರದಲ್ಲಿ ಪರಿಹಾರವಾಗುತ್ತದೆ. ಅದರಲ್ಲಿ ಗಂಗಾ ವಿಷ್ಣುಕ್ಷೇತ್ರ ನಲಕೂಬ ಮಣಿಗ್ರೀವರು ಗಂಗೆಯಲ್ಲಿ ತಮ್ಮ ಸ್ತ್ರೀಯರೊಂದಿಗೆ ವಿವಸ್ತ್ರನಾಗಿ ಸ್ನಾನ ಮಾಡಿದ ಪಾಪ ಸಂಚಯ ಮಾಡಿಕೊಳ್ಳುತ್ತಾನೆ. ಆ ಸಮಯದಲ್ಲಿ ನಾರದರು ಬರುತ್ತಾರೆ. ನಾರದರು ಎಚ್ಚರಿಕೆಯ ಗಂಟೆಯನ್ನು ಬಾರಿಸಿದರು. ಅವರು ಎಲ್ಲಿ ಸಜ್ಜನರು ಧರ್ಮದ ಹಾದಿ ತಪ್ಪುತ್ತಿದ್ದಲ್ಲಿ ಹೋಗಿ ಅವರನ್ನು ತಿದ್ದುತ್ತಾರೆ. ಅವರು ಹೋಗಿ ಶಾಪ ಕೊಟ್ಟು ತಾಪ ಕಳೆಯುತ್ತಾರೆ. ನೂರು ವರ್ಷ ದೇವತೆಗಳ ನೂರು ವರ್ಷ ಮನುಷ್ಯರ 36000 ವರ್ಷ ವೃಕ್ಷವಾಗಿರಬೇಕೆಂಬ ಶಾಪ ನೀಡಿರುತ್ತಾರೆ. (ದಿನ ನಿತ್ಯದಲ್ಲೂ ವಿವಸ್ತ್ರರಾಗಿ ಸ್ನಾನ ಮಾಡಬಾರದು)



ದೀಪಾವಳಿ ಎಂದರೆ ನರಕಾಸುರ ವಧೆಯನ್ನು ಮಾಡಿ ದೇವರಿಗೆ ದೀಪ ಹಚ್ಚಿ ಕೃತಜ್ಞತೆ ಸಲ್ಲಿಸುವ ಹಬ್ಬ ದೀಪಾವಳಿ. ನಮಗೆ ವಸ್ತ್ರ ದೇವರಿಗೆ ಇಲ್ಲ ನಮಗೆ ಊಟ ಅವನಿಗೆ ಇಲ್ಲ ಎಂದು ಇರಬಾರದು. ನಾವು ಧರಿಸುವಾಗ ಭಗವಂತನಿಗೆ ಅರ್ಪಿಸಿ ಧರಿಸಬೇಕು. ನಮ್ಮ ದೇಹ ಪರಮಾತ್ಮನ ಮಂದಿರ ಎಂದು ಉಟ್ಟರೆ ಅದು ಪುಣ್ಯಕರ. ಕುಬೇರನ ಮಕ್ಕಳು ಅಂತರ್ಯಾಮಿ ಪರಮಾತ್ಮನಿಗೆ ಅವಮಾನ ಮಾಡಿದ ಕಾರಣ ಶಿಕ್ಷೆಯಾಯಿತು. ನ್ಮಮ ದೇಹದಲ್ಲಿ 36,000 ಪುರುಷರೂಪದಿಂದ 36000 ಸ್ತ್ರೀ ರೂಪದಿಂದ ಇರುವ ಪರಮಾತ್ಮನ ಅವಮಾನ ಮಾಡಿದ್ದಕ್ಕಾಗಿ 36000 ವರ್ಷ ಮರವಾಗಿರಿ. ನಂತರ ಶ್ರೀಕೃಷ್ಣ ಪರಮಾತ್ಮನ ಅವತಾರದಲ್ಲಿ ನಿಮ್ಮ ಉದ್ಧಾರ ಮಾಡುತ್ತಾನೆ. ಭಾಗವತದಲ್ಲಿ ಉಲ್ಲೇಖವಿದೆ ನಾರದರ ಅನುಗ್ರಹದಿಂದ ನಿಮ್ಮ ಉದ್ದಾರ ಮಾಡುತ್ತೇನೆ ಎಂದು ಹೆಳುತ್ತಾರೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top