ಶ್ರೀ ಸತ್ಯಾತ್ಮವಾಣಿ- 30-31: ಪುರಾಣಗಳ ಕಾಲನಿರ್ಣಯ ಪ್ರಶ್ನಿಸುವಂಥದ್ದಲ್ಲ

Upayuktha
0


ಶ್ರೀಮನ್‌ ಮಹಾಭಾರತದಲ್ಲಿ ಶ್ರೀರಾಮ ಚಂದ್ರನ ಅದ್ಭುತವಾದ ರಾಜ್ಯ, ರಾಮರಾಜ್ಯ ಎಂದು ಪ್ರಸಿದ್ಧವಾದುದು, ಎಲ್ಲರೂ ಸಮೃದ್ದಿಯಿಂದ ಬದುಕಿದವರು. ವಿಧುರರು ವಿಧವೆಯರು ಇಲ್ಲ. ಕಾಲಕಾಲಕ್ಕೆ ಸಿಗಬೇಕಾದ ಎಲ್ಲ ಫಲ ಪುಷ್ಪ ಸಮೃದ್ಧಿ ಎಲ್ಲವೂ ಇದೆ. ಎಲ್ಲ ರೀತಿಯಿಂದಲೂ ದೇಶವು ಸಮೃದ್ದಿಯಾಗಿರುವ ಕಾಲ ರಾಮರಾಜ್ಯದ ಕಾಲವೆಂದು ಮಹಾಭಾರತದಲ್ಲಿ ಹೇಳಿದೆ. ಹನ್ನೊಂದು ಸಾವಿರ ವರ್ಷಗಳ ಕಾಲ ರಾಮನು ರಾಜ್ಯವನ್ನು ಆಳಿದ್ದಾನೆ ಎಂದು ಹೇಳುತ್ತಾರೆ. ಕೆಲವು ಕಡೆ 13 ಸಾವಿರ ವರ್ಷಗಳ ಕಾಲ ರಾಮಚಂದ್ರ ರಾಜ್ಯವನ್ನು ಆಳಿದ್ದಾನೆ ಎಂದು ಹೇಳುತ್ತಾರೆ. ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಎರಡನ್ನೂ ಸರಿ ಎಂದು ಹೇಳುತ್ತಾರೆ. ನಕ್ಷತ್ರಮಾನ ಚಾಂದ್ರಮಾನ ಎರಡು. ಚಂದ್ರಮಾನದಿಂದ ಎಣಿಸಿದರೆ 11 ವರ್ಷ ನಕ್ಷತ್ರ ಮಾನದಿಂದ ಎಣಿಸಿದರೆ 13 ವರ್ಷಗಳಾಗುತ್ತವೆ. ಈ  ದೃಷ್ಠಿಯಲ್ಲಿ ಭಾಗವತ ತಾತ್ಪರ್ಯ ನಿರ್ಣಯದಲ್ಲಿ ಆಚಾರ್ಯರು ನಿರ್ಣಯಕೊಟ್ಟಿರುವುದು ಎರಡೂ ಸರಿಯಾಗಿದೆ ಎಂದು ಶ್ರೀಮದಾಚಾರ್ಯರು ಹೇಳಿದ್ದಾರೆ.


ಶ್ರೀರಾಮಚಂದ್ರನ ಅವತಾರವಾದದ್ದು ತ್ರೇತಾಯುಗದಲ್ಲಿ, ಆನಂತರ ದ್ವಾಪರ ಈಗ ಕಲಿಯುಗದಲ್ಲಿದ್ದೇವೆ ಈ ರೀತಿಯ ಶ್ರೀರಾಮಚಂದ್ರನ  ಅವತಾರ ತ್ರೇತಾಯುಗದಲ್ಲಿ ಈಗ 17 ಲಕ್ಷ ಚಿಲ್ಲರೆ ವರ್ಷಗಳು ಕೃತಯುಗ 12 ಲಕ್ಷ ಚಿಲ್ಲರೆ ತ್ರೇತಾಯುಗ, 8 ವರ್ಷ ಚಿಲ್ಲರೆ ದ್ವಾಪರಯುಗ ಅದರಲ್ಲಿ 4 ಲಕ್ಷ 32,000 ವರ್ಷ ಈ ಕಲಿಯುಗ. ಈ ನಾವೆಲ್ಲರು ಇರುವುದು ಕಲಿಯುಗದಲ್ಲಿ ಅಷ್ಟು ಲಕ್ಷ ವರ್ಷಗಳ ಹಿಂದೆ ಶ್ರೀರಾಮಚಂದ್ರನ ಅವತಾರವಾಗಿದ್ದು  ಅತ್ಯುದ್ಭುತ ಕಾರ್ಯಗಳನ್ನು ಶ್ರೀರಾಮಚಂದ್ರ ಮಾಡಿ ತೋರಿಸಿದ್ದಾನೆ. ಇವತ್ತಿನ ಕೆಲವು ವಿಚಾರವಂತರು ಇದರ ಬಗ್ಗೆ ಆಕ್ಷೇಪವನ್ನು ಮಾಡುವಂತಹ ಪ್ರಯತ್ನ ಮಾಡುತ್ತಲಿದ್ದಾರೆ. ಅವರ ಆಕ್ಷೇಪ ಪ್ರಾಚೀನವಾದ ಪುರಾಣ ಇತಿಹಾಸಗಳಿಗೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಲಿದ್ದಾರೆ. ಇವರ ವ್ಯಾಖ್ಯಾನ ವಿಚಿತ್ರವಾಗಿದೆ, ಇದನ್ನು ನಾವು ಎಚ್ಚರಿಂದ ತಿಳಿಯಬೇಕು. ಯುವಕರಿಗೆ ಇಷ್ಟವಾಗುವ ರೀತಿಯಲ್ಲಿ ಹೇಳುತ್ತೇವೆ ಎಂದು ಹೊರಟು ನಿಜವಾದ ರಾಮಾಯಣ, ಮಹಾಭಾರತ ಮತ್ತು ಭಾಗವತಗಳಿಗೆ ಸಾವಿರಾರು ವರ್ಷಗಳ ನಂಬಿಕೆಯಲ್ಲಿ ಬಂದ ಗ್ರಂಥಗಳಲ್ಲಿ ಇರುವ ಉಲ್ಲೇಖಗಳನ್ನು, ಶ್ರೀರಾಮ ಚಂದ್ರನ ಕಾಲ ಆಳ್ವಿಕೆ ಚರಿತ್ರೆ ಇವುಗಳ ಬಗ್ಗೆ ಅವರು ಬಹಳ ವಿಚಿತ್ರವಾಗಿ ಹೇಳುವುದು ಕಂಡು ಬಂದಿದೆ. ಅದಕ್ಕಾಗಿ ಎಲ್ಲ ರಾಮ ಭಕ್ತರು ಸರಿಯಾದ ವಿಷಯ ತಿಳಿಯಬೇಕು.



ಸಂಶೋಧನೆ ಮಾಡಿದವರ ವೈಯಕ್ತಿಕ ಅಭಿಪ್ರಾಯವಿಲ್ಲ ಅವರು ಮಾಡಿದ ಸಂಶೋಧನೆಯ ಬಗೆಗೆ ಸರಿಯಾಗಿ ತಿಳಿಯಬೇಕು. ನಿಖರವಾದ ದಾಖಲೆಗಳಿಲ್ಲ, ಇವು ಕವಿ ಸಮಯ ಎಂದು ಹೇಳಿದ್ದಾರೆ. ರಾಮಾಯಣ ಮಹಾಭಾರತದಲ್ಲಿ ಇರುವುದು ಉತ್ಪ್ರೇಕ್ಷೆ ಎಂದು ಹೇಳಿದ್ದಾರೆ. ಆ ವ್ಯಕ್ತಿಯು ಒಬ್ಬ ಮನುಷ್ಯನಿಗೆ ನೂರು ವರ್ಷ ಎಂದು ಉಪನಿಷತ್ತುಗಳಲ್ಲಿ ಹೇಳುವುದರಿಂದ ಮನುಷ್ಯನ ಆಯುಷ್ಯ ನೂರು ವರ್ಷ ಎಂದು ಹೇಳುತ್ತಾರೆ. ಈ ಕಾರಣದಿಂದ ಶ್ರೀರಾಮ 11,000 ವರ್ಷ ಆಳಿದ ಎಂಬುದನ್ನು ನಂಬಬಾರದು ಎಂದು ಸಹಜವಾಗಿ ಹೇಳಿದ್ದಾರೆ.



ಶತ ಎಂಬ ಶಬ್ದದ ಆಧಾರದ ಮೇಲೆ ಮಾತನಾಡುತ್ತಿರುವವರಿಗೆ ಇದರ ವ್ಯಾಪ್ತಿಯನ್ನು ಸರಿಯಾಗಿ ತಿಳಿಸಬೇಕು. ಯಾವ ಇತಿಹಾಸ ಪುರಾಣಗಳು ಈ ಶಬ್ದವನ್ನು ಬಳಸುತ್ತವೆ ಆ ವೇದ ಪುರಾಣ ಇತಿಹಾಸಗಳಲ್ಲಿ ಅಷ್ಟು ಸಾವಿರ ವರ್ಷಗಳು ತಪಸ್ಸು ಮಾಡಿದ್ದನ್ನು ಬದುಕಿದ್ದನ್ನು ಸಾಧನೆಯನ್ನು ಮಾಡಿದ ಉಲ್ಲೇಖ ಮಾಡುತ್ತದೆ. ಒಬ್ಬ ಕವಿ ಏನನ್ನೋ ಹೇಳಲು ಹೋಗಿ ತನ್ನದೇ ಒಂದೆರಡು ಮಾತುಗಳಿಗೆ ವಿರೋಧ ಬರುವಂತೆ ಹೇಳಲು ಸಾಧ್ಯವಿಲ್ಲ ಅದರಲ್ಲೂ ವೇದವ್ಯಾಸರು, ವಾಲ್ಮೀಕಿ ಮಹರ್ಷಿಗಳು ಹೇಳಲು ಸಾಧ್ಯವಿಲ್ಲ. ಇವುಗಳ ಅರ್ಥವನ್ನು ಶ್ರೀಮದಾಚಾರ್ಯರು ತಮ್ಮ ವ್ಯಾಖ್ಯಾನವನ್ನು ಉದಾಹರಣೆ ಕೊಡುತ್ತಾರೆ. ಶತ ಅಂದರೆ ಬಹಳ ಎಂದಿದೆ. ಬೇರೆ ಬೇರೆ ಯುಗದಲ್ಲಿ ಬೇರೆ ಬೇರೆ ಆಯುಷ್ಯದ ಪ್ರಮಾಣ. ವೇದಗಳಲ್ಲಿ ಈ ಉಲ್ಲೇಖ ವೇದವ್ಯಾಸರ ಪ್ರಮಾಣವನ್ನು ಹೇಳಿದ್ದೇ ಶ್ರೀಮದಾಚಾರ್ಯರು ಪ್ರಮಾಣ ಕೊಟ್ಟಿದ್ದಾರೆ. ವೇದಗಳಲ್ಲಿ ಕೂಡ ಬೇರೆ ಬೇರೆ ರೀತಿ ಉಲ್ಲೇಖವಿದೆ. ಶ್ರೀಮದಾಚಾರ್ಯರು ಹೇಳುತ್ತಾರೆ ದಶ ಶತ ಮತ್ತು ಸಹಸ್ರಗಳು ಹೆಚ್ಚು ಬಹಳ ಎಂಬ ಅರ್ಥದಲ್ಲಿ ಪ್ರಯೋಗ ಆಗುತ್ತದೆ ಗೆರೆ ಕೊರೆದಂತೆ ಅಲ್ಲ ಎಂದು ಹೇಳುತ್ತಾರೆ.


ಶಾಸ್ತ್ರದ ಪ್ರಮಾಣ ಕೊಟ್ಟು ದಶ ಶತ ಸಹಸ್ರ ಶಬ್ದಗಳಿಗೆ ಅನಂತ, ಅಕ್ಷಯ ಎಂದೂ ಹೇಳಲಾಗಿದೆ. ಗ್ರಂಥಗಳಿಗೆ ಅವುಗಳ ಅರ್ಥ ಬೇರೆ ಅರ್ಥ ಇವೆ ಎಂದು ಕೇವಲ ಶ್ರೀಮದಾಚಾರ್ಯರು ಮಾತ್ರವಲ್ಲ ಶಂಕರಾಚಾರ್ಯರು ಕೂಡ ತಮ್ಮ ಶಾಂಕರ ಭಾಷ್ಯದಲ್ಲಿ ಕೂಡ ದಶ ಶತ ಸಹಸ್ರಗಳಿಗೆ ಹೆಚ್ಚು ಪ್ರಮಾಣ ಎಂದು ಮಾಡಿದ ಉದಾಹರಣೆ ಎಂದು ಹೇಳುತ್ತಾರೆ. ಮಹಾಭಾರತದ ಆದಿಪರ್ವದಲ್ಲಿ ಕೂಡ ದಶ ಸತ ಶಬ್ದಗಳು ಅಕ್ಷಯ ವಾಚಕವಾಗಿ ಬಹಳ ಬಹುದೆಂದು ಮೂಲ ಮಹಾಭಾರತ, ಉಪನಿಷತ್ತುಗಳ ಉಲ್ಲೇಖವನ್ನು ಸರಿಯಾಗಿ ತಿಳಿಯಬೇಕು.


ಇತಿಹಾಸ ಪುರಾಣಗಳು ಉಪನಿಷತ್ತುಗಳು ಪ್ರಕಾರ 11,000 ಆ‍ಳ್ವಿಕೆ ಸರಿಯಾಗಿದೆ. ಇನ್ನೊಂದು ಆಕ್ಷೇಪ ಉತ್ಪ್ರೇಕ್ಷೆ ಅನ್ನುವುದಾದರೆ ದಶರಥನಿಗೆ 60000 ವರ್ಷ ಎಂದು ರಾಮನಿಗೆ 11,000 ವರ್ಷ ಎನ್ನುವಾಗ ಯಾಕೆ ಹೇಳಲಿಲ್ಲ? ರಾವಣನಿಗೆ ಸೂರ್ಯವಂಶದಲ್ಲಿ ಬಂದ ಒಬ್ಬ ರಾಜ ಅನರಣ್ಯ ರಾವಣನಿಗೆ ನನ್ನ ವಂಶದಲ್ಲಿ ಬರುವ ರಾಮಚಂದ್ರ ನಿನ್ನನ್ನು ಸಾಯಿಸುತ್ತಾನೆ ಎಂದು ಹೇಳುತ್ತಾನೆ. ನಾವು ಈ ಕಾಲದ ಸಮಯವನ್ನು ಆ ಕಾಲಕ್ಕೆ  ಹೋಲಿಸಿಕೊಂಡರೆ ಅದು ಕೂಪಮಂಡೂಕದಂತೆ.


ವಾಲ್ಮೀಕಿ ರಾಮಾಯಣ, ಮಹಾಭಾರತ ಮತ್ತು ಬಾಗವತ ಇದ್ದದ್ದು ಸರಿ ಆದರೆ ಅದರಲ್ಲಿ ಹೇಳಿದ್ದು ಉತ್ಪ್ರೇಕ್ಷೆ ಎನ್ನುವುದು ಸರಿಯಲ್ಲ, ಕಾಲವನ್ನು ಕಡಿಮೆ ಮಾಡಲು ಯುಗಗಳನ್ನು ಆಯಸ್ಸನ್ನು ಕಡಿಮೆ ಹೇಳುವುದನ್ನು ಒಪ್ಪುವುದಿಲ್ಲ ಎನ್ನುವುದು ಸರಿಯಲ್ಲ. ಗ್ರಂಥಕಾರರು ಹೇಳಿದ ಸಮಯವನ್ನೇ ಆಧಾರವಾಗಿ ಇಟ್ಟುಕೊಂಡು ಗ್ರಂಥಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಪವ್ಯಾಖ್ಯಾನ ಮಾಡಬಾರದು. ಹುಯನ್ತ್ಸಂಗ್‌ ನ ಪುಸ್ತಕದಲ್ಲಿ ಭಾರತದಲ್ಲಿ ಒಬ್ಬ 700 ವರ್ಷ ವಯಸ್ಸಿನ ಬ್ರಾಹ್ಮಣ ಇದ್ದ ಅವನು ನೋಡಲು 30 ವರ್ಷದವನಂತೆ ಕಾಣಿಸುತ್ತಿದ್ದ ಎಂದು ಬರೆದಿದ್ದಾನೆ ಶುದ್ಧ ಆಹಾರ ವಿಹಾರ ಸದಾಚಾರಗಳಿಂ ಇದ್ದ ಎಂದು ಬರೆದಿದ್ದಾನೆ.  ಕಾಶಿಯಲ್ಲಿದ್ದ ತ್ರಿಲಿಂಗ ಶಾಸ್ತ್ರಿಗಳು ಎನ್ನುವವರು 300 ವರ್ಷಗಳವರೆಗೆ ಬದುಕಿದ್ದರು 150 ಇದ್ದವರು ಇದ್ದಾರೆ. ಇಂದಿಗೂ 110, 115 ವರ್ಷಗಳು ಬಹಳ ಜನ ಇಂದಿಗೂ ಇದ್ದಾರೆ. ಸ್ಕಂದ ಪುರಾಣದಲ್ಲಿ ಕೂಡ ಇದೆ 100ಕ್ಕೂ ಹೆಚ್ಚು ಅಥವಾ ಕಡಿಮೆ  ಆಗಬಹುದು ಎಂದು ಹೇಳುತ್ತದೆ.


ಇದನ್ನೆಲ್ಲ ಗಮನಿಸಿದರೆ ನಮ್ಮ ಪ್ರಾಚೀನರು ನಮಗೆ ಎಷ್ಟು ನಿಖರವಾಗಿ ವಿಷಯಗಳನ್ನು ತಿಳಿಸಿಕೊಟ್ಟಿದಾರೆ ಎಂದು ತಿಳಿಯಬಹುದು. ಯುಗಗಳು ಮತ್ತು ಕಾಲ ನಿರ್ಣಯವನ್ನು ವೇದವ್ಯಾಸರು ಹೇಳಿದ ವ್ಯಾಖ್ಯಾನ ತಿಳಿಯಬೇಕು. 


ಸ್ಕಂದ ಪುರಾಣದಲ್ಲಿ  ಕಾಲಮಾನದ ಕುರಿತು ಹೇಳುತ್ತಾರೆ, ಕೃತಯುಗದಲ್ಲಿ 16 ಸಾವಿರ ವರ್ಷ ಬಾಲ್ಯ 32 ಸಾವಿರ ವರ್ಷಕ್ಕೆ ಯೌವ್ವನ ಒಂದು ಲಕ್ಷ ವರ್ಷದ ನಂತರ ವಾರ್ಧಕ್ಯ ಅದೇ ರೀತಿ ತ್ರೇತಾಯುಗದಲ್ಲಿ 1000 ಬಾಲ್ಯ 5000 ವರ್ಷದ ವರೆಗೂ ಯೌವ್ವನ ನಂತರ ವಾರ್ಧಕ್ಯ, ಹೀಗೆ ದ್ವಾಪರದಲ್ಲಿ 100 ವರ್ಷದವರೆಗೂ ಬಾಲ್ಯ 100ರಿಂದ 500 ವರ್ಷಗಳವರೆಗೂ  ಯೌವ್ವನ ನಂತರ ವಾರ್ಧಕ್ಯ. ಜರಾಸಂಧ ನೊಡನೆ ಅರ್ಜುನ ಯುದ್ಧಕ್ಕೆ ಹೋದಾಗ ಅವನಿಗೆ 55 ವರ್ಷ ನೀನು ಬಾಲಕ ನಿನ್ನೊಡನೆ ಯುದ್ಧ ಮಾಡುವುದಿಲ್ಲ ಎನ್ನುತ್ತಾನೆ. ಭೀಮಸೇನ ದೇವರು ಕೂಡ ಬಾಲಕರಾಗಿದ್ದರೂ ಬಲಶಾಲಿಗಳಾಗಿದ್ದಾರೆ ಎಂದು ಅವರೊಡನೆ ಯುದ್ಧ ಮಾಡುತ್ತಾನೆ. 


ಈಗ ಕಲಿಯುಗದಲ್ಲಿ 16 ವರ್ಷ ಬಾಲ್ಯ 30-40ರವರೆಗೆ ಯೌವ್ವನ ನಂತರ ವಾರ್ಧಕ್ಯ ಎಂದು ಸ್ಕಂದ ಪುರಾಣದಲ್ಲಿ ಭಾಗವತ ಮಹಾಭಾರತಗಳಲ್ಲಿ  ಉಲ್ಲೇಖವಿದೆ. ಹೀಗೆ ಶಾಸ್ತ್ರದಲ್ಲಿ ಉಲ್ಲೇಖವಾಗಿರುವುದನ್ನು ಅಲ್ಲಗಳೆಯ ಬಾರದು ಆಕ್ಷೇಪ ಮಾಡಬಾರದು.


ಇದಷ್ಟೇ ಅಲ್ಲದೆ ಸ್ಕಂದ ಪುರಾಣದಲ್ಲಿ ಮನುಷ್ಯನ ಎತ್ತರ, ಶಕ್ತಿ ಕೂಡ ಕ್ಷೀಣಿಸುತ್ತದೆ ಎಂದು ಹೇಳುತ್ತಾರೆ. ಮನುಷ್ಯರೂ ಇಲಿಗಳಂತೆ ಸಣ್ಣ ಆಕಾರ ಬಿಲಗಳಲ್ಲಿ ವಾಸಿಸುತ್ತಾರೆ. ಆಗ ಮುಂದೆ ಆಕಾರ ಸಣ್ಣ ಹಿಂದೆ 5-6 ಫುಟ್ ಜನರು ಇರಲೇ ಇಲ್ಲ ಎಂದಂತೆ ನಾವು ಈಗ ರಾಮನ ಕಾಲ ಮತ್ತು ಅವನ ಗುಣ ಶಕ್ತಿಗಳ ಬಗ್ಗೆ ಆಕ್ಷೇಪ ಮಾಡಿದರೆ.


ಹನುಮಂತ ದೇವರೇ ಹೇಳುತ್ತಾರೆ, ಕಾಲಕ್ರಮೇಣ  ಎಲ್ಲವೂ ಕಡಿಮೆಯಾಗುತ್ತದೆ ಎಂಬುದನ್ನು ಶಕ್ತಿ ಹ್ರಾಸವಾಗುತ್ತದೆ ಎಂಬ ವಿಚಾರಗಳು ಶ್ರಾಸ್ತದಲ್ಲಿ  ಹೇಳಲಾಗಿದೆ. ಸತ್ಯವಾದ ಸಂಗತಿಗಳಿಗೆ ಕಾಲದ ಚೌಕಟ್ಟು ಇಲ್ಲ ಹಿಂದೆ ಸತ್ಯವಾದುದು ಈಗ ವಿಚಿತ್ರ ಕಾಣಿಸಿದರೂ ಸತ್ಯ ಎಂಬುದನ್ನು ನಂಬಬೇಕು 


ಈಗ ಆಕ್ಷೇಪ ತಗೆದಿರುವ ವ್ಯಕ್ತಿ ರಾಮನ ಜನನ 7000 ವರ್ಷಗಳ ಹಿಂದೆ ಆಗಿದೆ ಎಂದು ಹೇಳುತ್ತಾರೆ, ವಾಲ್ಮೀಕಿ ರಾಮಾಯಣದಲ್ಲಿ ಚೈತ್ರ ಶುಕ್ಲ ನವಮಿಯಂದು  ಎಂದು ಅಂದಿನ ದಿನ 5 ಶುಭ ಗ್ರಹಗಳು ಉಚ್ಛ ಸ್ಥಿತಿಯಲ್ಲಿ ಇತ್ತೆಂದೂ ಹೇಳುತ್ತಾರೆ. ಆದರೆ 7000 ಹಿಂದೆ ಅವರು ಹೇಳಿದ ಮುಹೂರ್ತ ಅಷ್ಟಮಿ ದಿನ 4 ಗ್ರಹಗಳು ಮಾತ್ರ ಉಚ್ಛ ಸ್ಥಿತಿಯಲ್ಲಿತ್ತು ಎಂದು ಹೇಳುತ್ತಾರೆ. ವಾಲ್ಮೀಕಿ ರಾಮಾಯಣದಲ್ಲಿ ಇರುವ ಶ್ರೀರಾಮ ಚಂದ್ರನ ಕುಂಡಲಿ 17,00,000 ವರ್ಷಗಳ ಮುಹೂರ್ತ ಒಂದೇ ಆಗಿದೆ ಎಂಬ ಸಾಕ್ಷಿ ದೊರೆತಿದೆ.


ರಾಮಸೇತುವಿನ ಕಾಲವನ್ನು 7000 ವರ್ಷ ಎಂದು ಸಂಶೋಧನೆ ಮಾಡಿರುವುದಾಗಿ ಹೇಳಿಕೊಂಡ ಲೇಖಕರು ಅಲ್ಲಿಯೂ ಸುಳ್ಳು ಹೇಳಿದ್ದಾರೆ. ಏಕೆಂದರೆ ಆರ್ ಟಿ ಐ ಹಾಕಿದಾಗ ಆ ಕುರಿತು ಯಾರೂ ಸಂಶೋಧನೆ ಮಾಡಿಲ್ಲ ಎಂಬ ಮಾಹಿತಿ ದೊರೆಯುತ್ತದೆ.


ಹೀಗೆ ಶಾಸ್ತ್ರ ಪುರಾಣಗಳಲ್ಲಿ ಹೇಳಿರುವಂತೆ ರಾಮದೇವರ ಆಳ್ವಿಕೆ 11000 ವರ್ಷಗಳದ್ದೇ ಆಗಿದೆ. 


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top