ಮಂಗಳೂರು: ಕಾರ್ಕಳ ತಾಲೂಕಿನ ಬೈಲೂರು ಕೌಡೂರಿನ ಮಣಿ ಕುಮೇರಿನ ಅನಾಥ ಆಶ್ರಮವನ್ನು ನಡೆಸುತ್ತಿರುವ ಹೊಸ ಬೆಳಕು ಸೇವಾ ಟ್ರಸ್ಟ್ (ರಿ) ಗೆ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ವತಿಯಿಂದ ಇ.ಸಿ.ಜಿ ಮಷಿನ್, ಬಿ.ಪಿ ಮತ್ತು ಶುಗರ್ ಟೆಸ್ಟ್ ಮಷಿನ್, ಆಕ್ಸಿಜನ್ ಕಾನ್ಸಂಟ್ರೇಟರ್, ಆಕ್ಸಿಮೀಟರ್, ಡೈಪರ್ ಮೊದಲಾದ ತುರ್ತು ಚಿಕಿತ್ಸಾ ಸಲಕರಣೆಗಳು ಸೇರಿದಂತೆ ರೂ. ಒಂದು ಲಕ್ಷಕ್ಕೂ ಮೀರಿದ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಕೊಡುಗೆಯಾಗಿ ನೀಡಲಾಯಿತು.
ಸಂಸ್ಥೆಯ ಮುಖ್ಯಸ್ಥೆ ತನುಲಾ ತರುಣ್‌ರವರು ರೋಟರಿ ಸಂಸ್ಥೆಯ ಕೊಡುಗೆಯನ್ನು ಸ್ವೀಕರಿಸಿ ಆಶ್ರಮದಲ್ಲಿ 180ಕ್ಕೂ ಮಿಕ್ಕಿ ಅನಾಥರಿದ್ದು ಇದರಲ್ಲಿ ಹೆಚ್ಚಿನವರು ವಯೋ ವೃದ್ಧರು. ಆಶ್ರಮಕ್ಕೆ ಬೇರೆ ಬೇರೆ ಸಂಸ್ಥೆಗಳು ಸಹಾಯ ಹಸ್ತ ನೀಡುತ್ತಿದ್ದಾರೆ. ಆದರೆ ಆಶ್ರಮವಾಸಿಗಳು ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಲು ಬಹಳಷ್ಟು ಕಷ್ಟವಾಗುತ್ತಿತ್ತು. ಮತ್ತು ಕೊಂಡೊಯ್ಯಲು ವಾಹನ ಖರ್ಚು ದುಬಾರಿಯಾಗುತ್ತಿತ್ತು. ಅನೇಕ ಸಂದರ್ಭಗಳಲ್ಲಿ ರಾತ್ರಿಯ ಹೊತ್ತು ಆಶ್ರಮವಾಸಿಗಳು ಅಸ್ವಸ್ಥರಾಗುವ ಸಂದರ್ಭದಲ್ಲಿ ಆಶ್ರಮದಲ್ಲೇ ತುರ್ತು ಪ್ರಾಥಮಿಕ ಚಿಕಿತ್ಸೆಯ ಅವಶ್ಯಕತೆ ಅನಿವಾರ್ಯವಾಗಿತ್ತು ಎಂದು ತಿಳಿಸಿದ ಸಂಸ್ಥೆಯ ಮುಖ್ಯಸ್ಥೆ ತನುಲಾ ತರುಣ್‌ರವರು ವೈದ್ಯಕೀಯ ತುರ್ತು ಸವಲತ್ತುಗಳನ್ನು ಒದಗಿಸಿಕೊಟ್ಟ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇವರಿಗೆ ಕೃತಜ್ಷತೆಗಳನ್ನು ಸಲ್ಲಿಸಿದರು.
ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ರೋ. ಬ್ರಾಯನ್ ಪಿಂಟೋ, ಕಾರ್ಯದರ್ಶಿ ರಾಜೇಶ್ ಸೀತಾರಾಂ, ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ಸಂತೋಷ್ ಶೇಟ್ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ