ಸ್ಫೂರ್ತಿ ಸೆಲೆ: ವೃತ್ತಿ ಜೀವನದ ಸವಾಲುಗಳು

Upayuktha
0


ಪ್ರತಿಯೊಬ್ಬರಿಗೆ ಕೂಡ ತಮ್ಮದೇ ಆದ ವೈಯುಕ್ತಿಕ ಜೀವನ ಮತ್ತು. ವೃತ್ತಿಜೀವನ ಇರುತ್ತದೆ. ಆದರೆ ವೈಯುಕ್ತಿಕ ಮತ್ತು ವೃತ್ತಿಜೀವನವನ್ನು ಸಮನಾಗಿ ಸಮತೋಲನ ಕಾಪಾಡುವುದು ಕೂಡ ಒಂದು ಸವಾಲೇ ಆಗಿರುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಕೌಟುಂಬಿಕ ಬದುಕಿಗಿಂತ ತಮ್ಮ ಕೆರಿಯರ್ ಗ್ರಾಫ್ ಏರಿಸಿ ಕೊಳ್ಳಲು ತಮ್ಮ ವೈಯುಕ್ತಿಕ ಬದುಕಿಗಿಂತ ಜಾಸ್ತಿ ಹೆಣಗಾಡುತ್ತಾರೆ. ನಮ್ಮಲ್ಲಿ ಆದುನಿಕ ಜೀವನದ ಗಾಳಿ ಬೀಸಿದರೂ ಅದೃಷ್ಟವಶಾತ್ ಕೌಟುಂಬಿಕ ಜೀವನಕ್ಕೆ ಈಗಲೂ ಪ್ರಾಮುಖ್ಯತೆ ಇದೆ.


ಹೆಸರಾಂತ ನಟ ಅಮಿತಾಭ್ ಬಚ್ಚನ್ ಒಂದು ಕಡೆ ಹೇಳುತ್ತಾರೆ- "ನಾವು ಯಶಸ್ಸಿನ ಏಣಿಯನ್ನು ಏರಿಂದಂತೆಲ್ಲ ತುದಿಯಲ್ಲಿ ಒಂಟಿಯಾಗಿ ನಿಲ್ಲುತ್ತೇವೆ" ಈಗಿನ ಪಾಶ್ಯತ್ಯ ಅಂಧಾನುಕರಣೆ ನೋಡಿದಂತೆಲ್ಲ ಅದು ಸರಿ ಎನಿಸುತ್ತಿದೆ.


ಇತ್ತೀಚೆಗಷ್ಟೇ ಪುಣೆಯ 26 ವರ್ಷದ  ಚಾಟರ್ಡ್ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುವ ಯುವತಿ ಕೆಲಸದ ಒತ್ತಡ ತಾಳಲಾರದೆ ಹೃದಯ ಆಘಾತಕ್ಕೆ ಈಡಾದ ಸುದ್ದಿ ವೈರಲ್ ಆಗಿ ಮನಸ್ಸನ್ನು ಕದಡಿತ್ತು. ಯಾವ ಪುರುಷಾರ್ಥಕ್ಕೆ ಈ ವೃತ್ತಿ ಜೀವನ ಎಂದೆನಿಸುತ್ತದೆ.


ಬದುಕಿನಲ್ಲಿ ವೃತ್ತಿ ಜೀವನ ಮತ್ತು ಕೌಟುಂಬಿಕ ಜೀವನದ ಸಮತೋಲನ ಕಾಪಾಡಿಕೊಳ್ಳುವುದೇ ಒಂದು ಸಾಹಸ ಆಗಿಬಿಟ್ಟಿದೆ. ವೃತ್ತಿ ಜೀವನದ  ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು ಎಷ್ಟೋ ಜನ ಕೌಟುಂಬಿಕ ಜೀವನವನ್ನು ನಿರ್ಲಕ್ಷಿಸಿ ಪತಿ ಮತ್ತು ಪತ್ನಿ ವಿಚ್ಛೇದನಕ್ಕೆ ಹೋಗಿರುವ  ಉದಾಹರಣೆಗಳು ಉಂಟು.


ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಅರ್ಥಗರ್ಭಿತ ಸಾಲುಗಳನ್ನು ನೋಡಿದೆ. "Love your job, Not your company

When you are died, you will be replaced before your completion of your funeral". ಓದಿ ಕಣ್ಣುಗಳು ಒದ್ದೆಯಾದವು.


ಚೆಸ್ ಆಟದಲ್ಲಿ ಆಟ ಮುಗಿದ ನಂತರ ಎಲ್ಲ ಕಾಯಿಗಳನ್ನು ಒಂದೇ ಡಬ್ಬಿಯಲ್ಲಿ ಇಡುತ್ತಾರೆ. ಜನ ಈ ಕಟು ಸತ್ಯವನ್ನು ಅರಿತುಕೊಂಡರೆ ಅಲ್ಲಿ ಅಹಂ  ಮತ್ತು ಶೋಷಣೆಗೆ ಅವಕಾಶ ಇರುವುದಿಲ್ಲ ಅಲ್ಲವೆ?


- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top