ಬಳ್ಳಾರಿ : ಶ್ರೀ ಟೇಕೂರ್ ಸುಬ್ರಮಣ್ಯಂ ಉದ್ಯಾನವನವನ್ನು ಅಭಿವೃದ್ಧಿಪಡಿಸುವಂತೆ ಬುಡಾ ಅಧ್ಯಕ್ಷರು ಮತ್ತು ಅಧಿಕಾರಿಗಳಲ್ಲಿ ಯುವಸೇನ ಸೊಶಿಯಲ್ ಯಾಕ್ಷನ್ ಕ್ಲಬ್ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ. ಬಳ್ಳಾರಿ ನಗರದಲ್ಲಿರುವ ಇನ್ನುಳಿದ ಬುಡಾ ಪ್ರಾಧಿಕಾರದ ಉದ್ಯಾನವನಗಳನ್ನು ತಮ್ಮ ಪ್ರಾಧಿಕಾರವೇ ಅಭಿವೃದ್ಧಿಪಡಿಸಿ, ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದೀರಿ.ತಮ್ಮ ಪ್ರಾಧಿಕಾರದ ಕಛೇರಿ ಆವರಣದಲ್ಲಿರುವ ‘ಶ್ರೀ ಟೇಕೂರ್ ಸುಬ್ರಮಣ್ಯಂ’ ಎಂಬ ಹೆಸರಿನಲ್ಲಿ ಉದ್ಯಾನವನ್ನು 2002ನೇ ಇಸ್ವಿಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಪಿ.ಪ್ರಕಾಶ್ ರವರು ಉದ್ಘಾಟನೆ ಮಾಡಿದ್ದಾರೆ.
ಆದರೆ ಸದರಿ ಉದ್ಯಾನವನದ ಸದ್ಯದ ಸ್ಥಿತಿ ಹೇಗಿದೆ ಎಂದರೆ ತಮ್ಮ ಪ್ರಾಧಿಕಾರದ ಆವರಣದಲ್ಲಿದ್ದ ಮಳಿಗೆಗಳು, ಹೋಟೆಲ್, ಬೇಕರಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಮಲಮೂರ್ತ ವಿಸರ್ಜನೆಗೆ ಉದ್ಯಾನವನದಲ್ಲೇ ಹೋಗುವ ಪರಿಸ್ಥಿತಿ ಉಂಟಾಗಿದೆ ಕಾರಣ ಉದ್ಯಾನವನದಲ್ಲಿ ಎತೇಚ್ಛವಾಗಿ ರಿಜರ್ವ್ ಗಿಡಗಳು ಬೆಳೆದಿರುವುದು ಹಾಗೂ ಉದ್ಯಾನವನ ಸರಿಯಾದ ನಿರ್ವಹಣೆ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.
ಸದರಿ ಉದ್ಯಾನವನದಲ್ಲಿ ಜಿಮ್ ಪರಿಕರಗಳು ಮತ್ತು ಚಿಕ್ಕ ಮಕ್ಕಳು ಆಟವಾಡುವ ಪರಿಕರಗಳು ಇದ್ದು, ಅದಕ್ಕೆ ಹೋಗಲು ದಾರಿಯೇ ಇಲ್ಲ, ಅಷ್ಟೇ ಅಲ್ಲದೇ ಉದ್ಯಾನವನದಲ್ಲಿ ಕೂಡುವ ಬೆಂಚ್‍ಗಳು, ನೀರಿನ ಕಾರಂಜಿ ಎಲ್ಲವೂ ಹದಗೆಟ್ಟಿವೆ, ಮುಖ್ಯವಾಗಿ ವ್ಯಾಯಾಮ ಮಾಡುವ ಪರಿಕರಗಳ ಸುತ್ತಲೂ ಸರಿಯಾದ ಬೆಡ್ಡಿಂಗ್ ವ್ಯವಸ್ಥೆ ಇಲ್ಲ, ಹಾಗೂ ಮಳೆಬಂದಲ್ಲಿ ನೀರು ಸರಾಗವಾಗಿ ಹರಿಯದೇ ನೀರು ನಿಲ್ಲುತ್ತಿರುವುದರಿಂದ ವ್ಯಾಯಾಮ ಮಾಡಲು ಆಗುವುದಿಲ್ಲ.
ಅಷ್ಟೇ ಅಲ್ಲದೇ ಉದ್ಯಾನವನದಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಪಾದಾಚಾರಿಗಳ ರಸ್ತೆಯ ವ್ಯವಸ್ಥೆ ಸರಿಯಿಲ್ಲ, ವಿದ್ಯುತ್ ಕಂಬಗಳ ವ್ಯವಸ್ಥೆ ಇದ್ದು, ಆದರೆ ವಿದ್ಯುತ್‍ದೀಪಗಳ ವ್ಯವಸ್ಥೆ ಸರಿಯಿಲ್ಲ ರಾತ್ರಿ ಸಮಯದಲ್ಲಿ ವಿದ್ಯುತ್ ದೀಪಗಳು ಕೆಲಸ ನಿರ್ವಹಿಸುತ್ತಿಲ್ಲ, ಸ
ದರಿ ಉದ್ಯಾನವನವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ತಮ್ಮ ಬುಡಾ ಪ್ರಾಧಿಕಾರದ ಅಧೀನದಲ್ಲಿರುವ ಒಂದೇ ಒಂದು ಉದ್ಯಾನವನವು ಸಂಪೂರ್ಣವಾಗಿ ಹದಗೆಟ್ಟು, ಸಾರ್ವಜನಿಕರಿಗೆ ಅನುಪಯುಕ್ತವಾಗಿ ಉಳಿದಿದೆ. ಸದರಿ ಉದ್ಯಾನವನದ ಸಂಪೂರ್ಣ ನಿರ್ವಹಣಾ ಜವಾಬ್ದಾರಿ ತಮ್ಮ ಪ್ರಾಧಿಕಾರದ್ದಾಗಿರುತ್ತದೆ.
ಆದ್ದರಿಂದ ತಾವುಗಳು ದಯಮಾಡಿ, ಬಳ್ಳಾರಿ ನಗರದ ತಮ್ಮ ಪ್ರಾಧಿಕಾರ ಆವರಣದಲ್ಲಿರುವ ‘ಶ್ರೀ ಟೇಕೂರ್ ಸುಬ್ರಮಣ್ಯಂ ಉದ್ಯಾನವನ’ವನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಣೆ ಮಾಡಲು ತಮ್ಮ ಪ್ರಾಧಿಕಾರದ ಮಾನ್ಯ ಸಹಾಯಕ ಅಭಿಯಂತರರಿಗಾಗಲೀ ಅಥವಾ ವ್ಯವಸ್ಥಾಪಕರಿಗಾಗಲೀ ಜವಾಬ್ದಾರಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ಯುವಸೇನ ಸೊಶಿಯಲ್ ಆ್ಯಕ್ಷನ್ ಕ್ಲಬ್ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ, ಕಾರ್ಯಕರ್ತರಾದ ಎಸ್.ಕೃಷ್ಣ, ಜಿ.ಎಂ. ಭಾಷ, ಪಿ.ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ ಶ್ರೀನಿವಾಸರೆಡ್ಡಿ.ಎಂ, ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಕೆ.ವೆಂಕಟೇಶ, ಅಭಿಷೇಕ್ ಮತ್ತು ಇತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ