ಬಳ್ಳಾರಿ:ಪಕ್ಷವನ್ನು ಜಿಲ್ಲೆಯಲ್ಲಿ ಮೊದಲಿನಂತೆ ಸಂಘಟನೆ ಮಾಡಿ ಬಲಿಷ್ಟವಾಗಿಮಾಡಲು ಸದಸ್ಯತ್ವ ನೋಂದಣಿ ಮಾಡುತ್ತಿದೆಂದು ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮನಾಯಕ ಹೇಳಿದ್ದಾರೆ.
ಅವರು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ಸಧ್ಯ ಸದಸ್ಯತ್ವ ನೋಂದಣಿ ಮಾಡಲಿದೆ. ಪದಾಧಿಕಾರಿಗಳ ನೇಮಕ, ಜಿಪಂ ತಾಪಂ ಚುನಾವಣೆ, ಸಂಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಕುರಿತು ಚರ್ಚೆ ನಡೆಸಲಿದೆಂದರು.
ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಆಗಮಿಸಿ ಪಕ್ಷದ ಸಂಘಟನೆಯ ಸಭೆ ನಡೆಸಲಿದ್ದಾರೆಂದರು.
ಮುಡಾ ವುಚಾರದಲ್ಲಿ ಸಿದ್ದರಾಮಯ್ಯ ಅವರ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ಕಾನೂನಿನ ಚೌಕಟ್ಟಿನಂತೆ ನಡೆಯಲಿದೆಂದ ಅವರು ಸಂಡೂರು ಉಪ ಚುನಾವಣೆ ವಿಷಯ ಪಕ್ಷದ ವರಿಷ್ಟರಿಗೆ ಬಿಟ್ಟಿದ್ದು ಎಂದರು.
ಜಿಲ್ಲೆಯ ಪಕ್ಷದ ಉಸ್ತುವಾರಿ ಮುಖಂಡ ಮಂಹಾಂತೇಶ್ ಪಾಟೀಲ್ ಮಾತನಾಡಿ, ಈ ಜಿಲ್ಲೆಯಲ್ಲಿ ಪಕ್ಷ ಈ ಮೊದಲಿನಂತೆ ಹೆಚ್ಚು ಶಕ್ತಿಯುತವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಮತ್ತೆ ಮೊದಲಿನಂತೆ ಪಕ್ಷದ ಬಲವರ್ಧನೆಗೆ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಮೂರುಸಾವಿರ ಸದಸ್ಯತ್ವ ಮಡುವ ಗುರಿ ಇದೆ ಎಂದು ಹೇಳಿದರು.
ಸಂಡೂರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಾವು ಟಿಕೆಟ್ ಕೇಳಯವುದಾಗಿ ಪಕ್ಷದ ಜಿಲ್ಲಾ ಅಧ್ಯಕ್ಷ ಮೀನಳ್ಳಿ ತಾಯಣ್ಣ ಇದೇ ವೇಳೆ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರುಗಳಾದ ಮೈಸೂರಿನ ಕುಮಾರಸ್ವಾಮಿ, ವಿಜಯನಗರ ಜಿಲ್ಲೆಯ ಅಧ್ಯಕ್ಷ ಕೊಟ್ರೇಶ್, ಮೊದಲಾದವರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ