ಪುತ್ತೂರು:ವಿವೇಕಾನಂದ ಕಾಲೇಜಿನಲ್ಲಿ ವಿಶ್ವ ಓಝೋನ್‌ ದಿನಾಚರಣೆ

Upayuktha
0


ಪುತ್ತೂರು:
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸೆ. 16 ರಂದು ವಿಶ್ವ ಓಝೋನ್‌ ದಿನಾಚರಣೆ ನಡೆಯಿತು. ಆ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಕಳೆದ ಒಂದು ವಾರವನ್ನು “ಓಝೋನ್‌ ಜಾಗೃತಿ ವಾರ” (ಓಝೋನ್‌ ಅವೇರ್ನೆಸ್‌ ವೀಕ್)‌ ಎಂದು ಹೆಸರಿಸಿ "ಓಝೋನ್‌ ಫಾರ್‌ ಲೈಫ್"‌ ಎಂಬ ಶೀರ್ಷಿಕೆಯಡಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. 


ವಿಜ್ಞಾನ ಸಂಘದ ವತಿಯಿಂದ ನಡೆಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಓಝೋನ್‌ ಪದರದ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವುದಕ್ಕಾಗಿ ನಡೆದಿದ್ದು, ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ಮುಖವರ್ಣಿಕೆ, ಪ್ರಬಂಧ ಸ್ಪರ್ಧೆ, ಸ್ಲೋಗನ್‌ ಬರವಣಿಗೆ, ಪೋಸ್ಟರ್‌ ತಯಾರಿಕೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಈ ಕಾರ್ಯಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಓಝೋನ್‌ ತಳಹದಿಯ ರಕ್ಷಣೆ ಹಾಗೂ ಪರಿಸರ ಪರಿಪಾಲನೆಯ ಮಹತ್ವವನ್ನು ತಿಳಿಸುವಲ್ಲಿ ಸಫಲವಾಯಿತು.


ಕಾರ್ಯಕ್ರಮದಲ್ಲಿ ಉಪನ್ಯಾಸಕಿಯರಾದ ಮಮತಾ ಶೆಟ್ಟಿ, ಸುಖದಾದೇವಿ, ಸಂಧ್ಯಾ ವಿಜ್ಞಾನ ಸಂಘದ ಸದಸ್ಯರು ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top