ಮುಳಿಯಾರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ನವೀಕರಣ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಮಹೋತ್ಸವವು 2025 ಮಾರ್ಚ್ 27 ರಿಂದ ಏಪ್ರಿಲ್ 7ರ ತನಕ ಜರಗಲಿದ್ದು ಸಮಾರಂಭದ ಯಶಸ್ವಿಗಾಗಿ ಮುಳಿಯಾರು ಪ್ರಾದೇಶಿಕ ಸಮಿತಿಯ ರಚನಾ ಸಭೆಯು ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಸಂಪನ್ನವಾಯಿತು.
ಶ್ರೀ ಮಂಜುನಾಥ ಕಾಮತ್ ಅವರು ಸಭೆಯಲ್ಲಿ ದಿಕ್ಸೂಚಿ ಮಾತುಗಳನ್ನಾಡಿದರು. ಜಯದೇವ ಖಂಡಿಗೆ ಅವರು ಸಮಾರಂಭದ ರೂಪರೇಖೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು. ಗೀರೀಶ್ ಸಂಧ್ಯಾ ಅವರು ಶುಭಾಶಂಸನೆಯಿತ್ತರು. ರತನ್ ಕಾಮಡ, ರಾಮಯ್ಯ ಭಟ್, ಸುರೇಶ ನಾಯಕ್, ಮುರಳಿ ಗಟ್ಟಿ, ಮುರಳಿ ಬಂದಡ್ಕ, ಯೋಗೀಶ್ ಮಧೂರು, ಜಗದೀಶ್ ಕೂಡ್ಲು ಉಪಸ್ಥಿತರಿದ್ದರು.
ಸಭೆಯಲ್ಲಿ ಮುಳಿಯಾರು ಪ್ರಾದೇಶಿಕ ಸಮಿತಿಯನ್ನು ರೂಪಿಸಲಾಯಿತು. ಗೌರವಾಧ್ಯಕ್ಷರಾಗಿ ಸೀತಾರಾಮ ಬಳ್ಳುಳ್ಳಾಯ, ಅಧ್ಯಕ್ಷರಾಗಿ ಗೋವಿಂದ ಬಳ್ಳಮೂಲೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜನ್ ಮುಳಿಯಾರು ಅವರನ್ನು ಆಯ್ಕೆ ಮಾಡಲಾಯಿತು. ಈ ಸಮಿತಿಗೆ ಇತರ ಸದಸ್ಯರನ್ನು ಮುಂದಿನ ಸಭೆಯಲ್ಲಿ ಸೇರ್ಪಡೆಗೊಳಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.
ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿ ಸಾಮಾರಂಭದ ಯಶಸ್ವಿಗಾಗಿ ಸರ್ವರೂ ಒಂದಾಗಿ ಸಹಕರಿಸಲು ಕರೆಯಿತ್ತರು. ಗೋವಿಂದ ಬಳ್ಳಮೂಲೆ ಪ್ರಾರ್ಥನೆ ಮಾಡಿ ಸ್ವಾಗತಿಸಿ ರಾಜನ್ ಮುಳಿಯಾರು ಧನ್ಯವಾದವಿತ್ತರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ