ಪುತ್ತೂರು: ವಿವೇಕಾನಂದ ಕಾಲೇಜಿನ ಕಲಾಸಂಘದ ಶೈಕ್ಷಣಿಕ ಪ್ರವಾಸ

Upayuktha
0




ಪುತ್ತೂರು:ವಿವೇಕಾನಂದ ಪದವಿಪೂರ್ವ ಕಾಲೇಜಿನ ಕಲಾಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಜರಗಿತು. ಮೊದಲಿಗೆ ವಿದ್ಯಾರ್ಥಿಗಳು ಕಲ್ಲಡ್ಕ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಶ್ರೀರಾಮನ ಆಶೀರ್ವಾದವನ್ನು ಪಡೆದರು. ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಭೇಟಿ ನಂತರ ವಿದ್ಯಾರ್ಥಿಗಳು ಬಿ. ಸಿ. ರೋಡಿನ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯಕೆ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಂ ಪೂಜಾರಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತುಳುನಾಡನ್ನು ಸುಮಾರು 1200 ವರ್ಷಗಳ ಕಾಲ ಆಳ್ವಿಕೆ ಮಾಡಿದ ರಾಜವಂಶ ಎಂಬ ಕೀರ್ತಿ ಅಲುಪರಿಗೆ ಸಲ್ಲುತ್ತದೆ. ಯಾವುದೇ ಒಂದು ರಾಜವಂಶ ಇಷ್ಟು ಸುಧೀರ್ಘ ಕಾಲ ಒಂದು ನೆಲವನ್ನು ಆಳ್ವಿಕೆ ನಡೆಸಿದ್ದು ಬಹಳ ವಿರಳ. ಬಲಿಷ್ಠ ನೌಕಪಡೆಯೊಂದಿಗೆ ಬೃಹತ್ ಸೇನಾಪಡೆಯನ್ನು ಹೊಂದಿದ್ದ ಪೋರ್ಚುಗೀಸ್ ಸೈನ್ಯವನ್ನು ಮಣಿಸಿ ತನ್ನ ರಾಜ್ಯವನ್ನು ರಕ್ಷಿಸಿದ 16 ನೇ ಶತಮಾನದ ವೀರರಾಣಿ ಅಬ್ಬಕ್ಕನ ಜೀವನವನ್ನು ನಾವು ಅಧ್ಯಯನ ಮಾಡಲೇಬೇಕು ಎಂದರು.



ಅಬ್ಬಕ್ಕನ ಸಾಹಸ, ಸಾಧನೆ ಮತ್ತು ಆಡಳಿತ ನಿಜಕ್ಕೂ ಪ್ರಶಂಸನೀಯ. ನಮ್ಮ ತುಳುನಾಡಿನ ಜನರ ಜೀವನ ಶೈಲಿ ವೈಜ್ಞಾನಿಕವಾಗಿತ್ತು ಮತ್ತು ಇಂದಿನ ಜನಾಂಗಕ್ಕೆ ಅದು ಅನುಕರಣೀಯ. ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಇವುಗಳನ್ನುಅರಿತುಕೊಳ್ಳುವುದು ಮತ್ತು ಈ ಬಗ್ಗೆ ಒಲವು ಹೊಂದುವುದು ಅಗತ್ಯ ಎಂದು ಹೇಳಿದರು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿರುವ ಅಬ್ಬಕ್ಕನ ಬದುಕಿನ ಬಗೆಗಿನ ವರ್ಣಚಿತ್ರಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು ಜೊತೆಗೆ ತುಳು ಬದುಕು ವಸ್ತು ಸಂಗ್ರಹಾಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರೊ. ತುಕಾರಾಂ ಪೂಜಾರಿ ಅವರು ಕೆಲವೊಂದು ವಸ್ತುಗಳ ಪ್ರಾತ್ಯಕ್ಷಿಕೆ ನೀಡಿದರು. ತುಳುನಾಡಿನಲ್ಲಿ ಉಪಯೋಗಿಸಲಾಗುತ್ತಿದ್ದ ಹಲವಾರು ವಸ್ತುಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.



ನಾಣ್ಯ ಸಂಗ್ರಹಾಲಯಕ್ಕೆ ಭೇಟಿ ಕಲ್ಲಡ್ಕದಲ್ಲಿ ಇರುವ ಯಾಸಿರ್ ಕಲ್ಲಡ್ಕ ಇವರ ವಿಶಿಷ್ಟ ನಾಣ್ಯ ಸಂಗ್ರಹಾಲಯಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿದರು. ಅಲ್ಲಿ ವಿಭಿನ್ನ ಮತ್ತು ವೈವಿಧ್ಯಮಯ ನಾಣ್ಯ ಹಾಗೂ ವಸ್ತುಗಳ ಸಂಗ್ರಹ ವಿದ್ಯಾರ್ಥಿಗಳನ್ನು ಆಕರ್ಷಿಸಿತು. ನಾಣ್ಯ ಸಂಗ್ರಹಾಲಯ ಮಾಲೀಕರಾದ ಯಾಸಿರ್ ಕಲ್ಲಡ್ಕ ಇವರು ವಿದ್ಯಾರ್ಥಿಗಳಿಗೆ ತಮ್ಮ ನಾಣ್ಯ ಹಾಗೂ ನೋಟುಗಳ ಸಂಗ್ರಹದ ಒಂದಷ್ಟು ನಿದರ್ಶನಗಳನ್ನು ಹೇಳಿ ವಿವರಿಸಿದರು. 



ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಕಲಾ ಸಂಘದ ಸಂಯೋಜಕ ಮೋನಿಷಾ ಎನ್., ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ವಿದ್ಯಾರ್ಥಿಗಳನ್ನು ಜೊತೆಗೂಡಿದರು. ಪ್ರಥಮ ಹಾಗೂ ದ್ವಿತೀಯ ವರ್ಷದ ಕಲಾ ವಿಭಾಗದ ವಿದ್ಯಾರ್ಥಿ ಈ ಶೈಕ್ಷಣಿಕ ಪ್ರವಾಸದಲ್ಲಿ ಭಾಗವಹಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top