ಬೆಂಗಳೂರು: ನೆಲಮಂಗಲದ ಅಂಬೇಡ್ಕರ್‌ನಗರದಲ್ಲಿನ ಜಿಎಲ್‌ಪಿಎಸ್ ಶಾಲೆಯಲ್ಲಿನ ಮಕ್ಕಳಿಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ’ಸಮಾಜ ಸಹಾಯ’ ಅಭಿಯಾನದ ಅಡಿಯಲ್ಲಿ ಸಂಸ್ಕಾರ ನೋಟ್ ಬುಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಮಕ್ಕಳಿಗೆ ಸಂಸ್ಕಾರ ವಹಿಗಳ ಮಹತ್ವ ಮತ್ತು ಉದ್ದೇಶಗಳ ಬಗ್ಗೆ ತಿಳಿಸಿದರು. ತಂದೆ, ತಾಯಿ, ಗುರು-ಹಿರಿಯರ ಮಾತುಗಳನ್ನು ಕೇಳಬೇಕು, ಅವರನ್ನು ಗೌರವಿಸಬೇಕು, ನಮ್ಮಲ್ಲಿರುವ ಜ್ಞಾನವನ್ನು ಬೇರೆಯವರ ಜೊತೆ ಹಂಚಿಕೊಂಡು ಹೇಗೆ ಸಹಬಾಳ್ವೆ ನಡೆಸಬೇಕು ಎಂಬ ನೀತಿಕತೆಗಳನ್ನು ಮಕ್ಕಳಿಗೆ ತಿಳಿಸಿದರು. ಈ ವೇಳೆ ಸಮಿತಿಯ ಕಾರ್ಯಕರ್ತ ಜಯರಾಮ್, ಸೌ. ಸುಮಾ ಜಯರಾಮ್, ಶಾಲೆಯ ಮುಖ್ಯೋಪಾಧ್ಯಾಯರಾದ ರವಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಿಂದೂ ಜನಜಾಗೃತಿ ಸಮಿತಿಯು ಕಳೆದ 22 ವರ್ಷಗಳಿಂದ ಸಮಾಜದಲ್ಲಿನ ಜನರಿಗೆ ರಾಷ್ಟ್ರಪ್ರೇಮ, ಧರ್ಮಜಾಗೃತಿಯ ಕಾರ್ಯವನ್ನು ಮಾಡುತ್ತಾ ಬಂದಿದೆ. ನೈತಿಕ ಮೌಲ್ಯಗಳಿಂದ ಭ್ರಷ್ಟವಾಗುತ್ತಿರುವ ಸಮಾಜಕ್ಕೆ ಧರ್ಮಶಿಕ್ಷಣದ ಮೂಲಕ ಧರ್ಮಪ್ರೇಮ ಜಾಗೃತಗೊಳಿಸುವ ಕಾರ್ಯವನ್ನು ಸಮಿತಿಯು ಮಾಡುತ್ತಿದೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ನೋಟ್ ಬುಕ್ಕಿನಲ್ಲಿ ಸಿನಿಮಾ ತಾರೆಯರ ಚಿತ್ರಗಳು ಇರುತ್ತವೆ, ಇದರ ಬದಲಾಗಿ ಸಂಸ್ಕಾರ ನೋಟ್ ಬುಕ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ, ಕ್ರಾಂತಿಕಾರಿಗಳ, ಧರ್ಮರಕ್ಷಕರ, ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ಸ್ವಾತಂತ್ರ್ಯ ಹೋರಾಟಗಾರ್ತಿಯರ ಚಿತ್ರಗಳು, ಅವರ ಪರಿಚಯವಿದ್ದು ಇದು ಮಕ್ಕಳ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ