ಬೆಂಗಳೂರು: ಭಾರತದ ಪ್ರಮುಖ ಕೆ12 ಸ್ಕೂಲ್ ಚೈನ್ ಆಗಿರುವ ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ತನ್ನ ಶಾಲೆಯ ಬೋಧಕ ಸಿಬ್ಬಂದಿಗಳ ವರ್ಗಕ್ಕೆ 200ಕ್ಕೂ ಹೆಚ್ಚು ಪ್ರತಿಭಾವಂತ ಐಐಟಿ ಪದವೀಧರರನ್ನು ಸೇರಿಸಿಕೊಂಡಿದೆ. ಭಾರತದಲ್ಲಿ ಸ್ಟೆಮ್ ಎಜುಕೇಷನ್ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯು ಈ ಕ್ರಮ ಕೈಗೊಂಡಿದೆ. 6ನೇ ತರಗತಿಯಿಂದ 12ನೇ ತರಗತಿಯ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ಆರ್ಕಿಡ್ಸ್ ಕರಿಯರ್ ಫೌಂಡೇಶನ್ ಪ್ರೋಗ್ರಾಮ್ ಅನ್ನು ಅಬಿವೃದ್ಧಿಪಡಿಸುವ ನಿಟ್ಟಿನಲ್ಲಿ ಐಐಟಿ ಪದವೀಧರರನ್ನು ಕರೆತರಲಾಗಿದ್ದು, ಐಐಟಿ ಕಾನ್ ಪುರ, ಐಐಟಿ ಮಂಡಿ, ಐಐಟಿ ಭುವನೇಶ್ವರ ಮುಂತಾದ ಐಐಟಿಗಳ ವಿದ್ಯಾರ್ಥಿಗಳು ಸಂಸ್ಥೆಯನ್ನು ಸೇರಿಕೊಂಡಿದ್ದಾರೆ.
ಐಐಟಿಯಿಂದ ಬಂದ ಶಿಕ್ಷಕರು ಉತ್ತಮ ಬೋಧನೆ ಮಾಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸೂಕ್ತ ವೃತ್ತಿ ಮಾರ್ಗ ಆರಿಸಿಕೊಳ್ಳಲು, ಸಂಶೋಧನೆ ಅಥವಾ ಉದ್ಯಮಶೀಲತೆಯ ಹಾದಿಯಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಉತ್ತಮ ಮಾರ್ಗದರ್ಶನ ನೀಡಲಿದ್ದಾರೆ. ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಪ್ರಾಯೋಗಿಕ ಜ್ಞಾನ ಎರಡನ್ನೂ ಒದಗಿಸುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಕಾರಣರಾಗಲಿದ್ದಾರೆ. ಈ ಯುವ ಐಐಟಿ ಪದವೀಧರರು ದೇಶದ ಉಜ್ವಲ ಭವಿಷ್ಯಕ್ಕೆ ಅದ್ಭುತ ಅಡಿಪಾಯ ಹಾಕಲಿದ್ದಾರೆ ಎಂಬ ಭರವಸೆಯನ್ನು ಆರ್ಕಿಡ್ಸ್ ಸಂಸ್ಥೆ ಹೊಂದಿದೆ.
ಆರ್ಕಿಡ್ಸ್ ನ ಓಸಿಎಫ್‌ಪಿ ಕಾರ್ಯಕ್ರಮವು ಸ್ಟೆಮ್ ವಿಷಯಗಳಲ್ಲಿ ಆಸಕ್ತಿ ಉಳ್ಳವರು ಮತ್ತು ಆಸಕ್ತಿ ಇರದವರ ಮಧ್ಯೆಯ ಅಂತರ ಕಡಿಮೆ ಮಾಡಲು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೆಚ್ಚಿಸುತ್ತದೆ ಮತ್ತು ವಿದ್ಯಾರ್ಥಿಗಳ ಸಂಪೂರ್ಣ ಸಾಮರ್ಥ್ಯವನ್ನು ಹೊರತರುವ ಕೆಲಸವನ್ನು ಮಾಡುತ್ತದೆ. ಈ ಯೋಜನೆಯು ವಿಶಿಷ್ಟ ಕಲಿಕಾ ವಿಧಾನವನ್ನು ಹೊಂದಿದ್ದು, ಅಧ್ಯಾಪಕರು ವಿವಿಧ ರೀತಿಯ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಪಠ್ಯ ಜ್ಞಾನವನ್ನು ವಾಸ್ತವ ಬದುಕಿನಲ್ಲಿ ಬಳಸಿಕೊಳ್ಳುವಂಥ ಜ್ಞಾನವನ್ನು ಒದಗಿಸುತ್ತಾರೆ. ಈ ವಿಧಾನವು ವಿದ್ಯಾರ್ಥಿಗಳು ಶಾಲಾ ಜೀವನದಲ್ಲಿ ಯಶಸ್ವಿ ಹೊಂದಲು ಮತ್ತು ಸ್ಟೆಮ್ ಶಿಕ್ಷಣವನ್ನು ಯಶಸ್ವಿಯಾಗಿ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಪ್ರಸ್ತುತ ಓಸಿಎಫ್‌ಪಿ ಕಾರ್ಯಕ್ರಮವು ಭಾರತದಾದ್ಯಂತ ಸುಮಾರು 100ಕ್ಕೂ ಹೆಚ್ಚು ಬೋಧಕ ಸಿಬ್ಬಂದಿಗಳನ್ನು ಹೊಂದಿದೆ. ಈಗ ಮತ್ತಷ್ಟು ಬೋಧಕ ಸಿಬ್ಬಂದಿಗಳನ್ನು ಸೇರ್ಪಡೆಗೊಳಿಸಿರುವುದು ಈ ಕಾರ್ಯಕ್ರಮದ ಯಶಸ್ಸಿನ ಸಂಕೇತವಾಗಿದೆ ಮತ್ತು ಗುಣಮಟ್ಟದ ಸ್ಟೆಮ್ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆಗೆ ಪುರಾವೆಯಾಗಿದೆ.
ಈ ಕುರಿತು ಮಾತನಾಡಿರುವ ಐಐಟಿ ಹಳೆಯ ವಿದ್ಯಾರ್ಥಿ ಆಗಿರುವ ಮತ್ತು ಆರ್ಕಿಡ್ಸ್ ಕರಿಯರ್ ಫೌಂಡೇಶನ್ ಕಾರ್ಯಕ್ರಮದ ಮುಖ್ಯಸ್ಥರಾಗಿರುವ ಶ್ಲೋಕ್ ಶ್ರೀವಾಸ್ತವ ಅವರು, "ಐಐಟಿ ಪದವೀಧರರು ತರಗತಿಗಳಿಗೆ ಹೊಸತನ ತರಲಿದ್ದಾರೆ. ವಿದ್ಯಾರ್ಥಿಗಳಿಗೆ ಅತ್ಯುನ್ನತ ಸ್ಟೆಮ್ ಶಿಕ್ಷಣವನ್ನು ಒದಗಿಸಲಿದ್ದಾರೆ. ಸಂಕೀರ್ಣ ವಿಷಯಗಳನ್ನು ಸೂಕ್ಷ್ಮವಾಗಿ, ಸುಲಭವಾಗಿ ಅರ್ಥ ಮಾಡಿಸಲಿದ್ದಾರೆ. ಇಂಥಾ ಬೋಧಕ ಸಿಬ್ಬಂದಿಗಳ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ಐಐಟಿ ಪದವೀಧರರು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಹೊಸ ಹಾದಿಯನ್ನು ಹಾಕಿಕೊಡಲಿದ್ದಾರೆ ಮತ್ತು ಮುಂದಿನ ಪೀಳಿಗೆಯ ಸಂಶೋಧಕರನ್ನು ಹುಟ್ಟುಹಾಕಲಿದ್ದಾರೆ" ಎಂದು ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ