ಮೈಸೂರು: “ವನಮಾಲಾ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ ಟ್ರಸ್ಟ್ (R)” - ಇದು ಹಿರಿಯ ಸಂಗೀತ ವಿದುಷಿ ಹಾಗೂ ಸಂಗೀತಜ್ಞೆ ಡಾ.ಮೀರಾ ರಾಜಾರಾಮ್ ಪ್ರಾಣೇಶ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಕಳೆದ ಮೂರು ದಶಕಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು, ನೃತ್ಯ, ನಾಟಕ, ಸಂಗೀತ ಶಿಕ್ಷಣ, ಹಿರಿಯ ತಜ್ಞರಿಂದ ವಿದ್ವಾಂಸರುಗಳಿಂದ ಸಂಗೀತದ ಕುರಿತಾಗಿ ಪ್ರಾತ್ಯಕ್ಷಿಕೆಗಳು ಹಾಗೂ ಸಂಗೀತ ಮತ್ತು ಭಾರತೀಯ ಸಂಸ್ಕೃತಿಯ ಕುರಿತಾಗಿ ಕಾರ್ಯಾಗಾರಗಳನ್ನು ನಡೆಸಿಕೊಂಡು ಬರುತ್ತಿದೆ.
ಇಂದು ಜಯನಗರದ ವಿವೇಕ ಸಭಾಂಗಣದಲ್ಲಿ ವಾರ್ಷಿಕ ವನಮಾಲ ಸಂಗೀತೋತ್ಸವದ ಪ್ರಯುಕ್ತ ಮಕ್ಕಳಿಗಾಗಿ ಮೈಸೂರಿನ ಚಿನ್ನರಿ ಸಂಗೀತ ಭಾಗ-2 ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕಲೆ ಮತ್ತು ಸಂಸ್ಕೃತಿಗೆ ಮೈಸೂರಿನ ಮಹಾರಾಜರುಗಳ ಮಹತ್ತರ ಕೊಡುಗೆ ಹಾಗೂ ಅವರ ದೂರ ದೃಷ್ಟಿಗಳ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ.
ಹಿರಿಯ ಭರತನಾಟ್ಯ ಕಲಾವಿದೆ ಹಾಗೂ ಚಲನಚಿತ್ರ ನಟಿ ವಿದುಷಿ ಲಕ್ಷ್ಮೀ ಗೋಪಾಲ ಸ್ವಾಮಿ, ಅನನ್ಯ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ಡಾ. ಆರ್. ವಿ. ರಾಘವೇಂದ್ರ ಹಾಗೂ ಡಿಸ್ಕವರ್ ಮಾಂಟೆಸರಿಯ ಸಂಸ್ಥಾಪಕ ನಿರ್ದೇಶಕರಾದ ಡಾ. ಸುಮತಿ ರವೀಂದ್ರನಾಥ್ ರವರುಗಳು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.
ದಿನಾಂಕ : 29-09-2024 ಭಾನುವಾರ
ಸಮಯ : 10:15am
ಸ್ಥಳ : ವಿವೇಕ ಸಭಾಂಗಣ, ಯುವಪಥ, #4, 31ನೇ ಅಡ್ಡರಸ್ತೆ, 4ನೇ T ಬ್ಲಾಕ್ ಪೂರ್ವ ಜಯನಗರ, ಬೆಂಗಳೂರು - 560011
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ