ಮಂಗಳೂರು: ಆರೋಗ್ಯಕರ ರಾಷ್ಟ್ರಕ್ಕಾಗಿ ಜೀವನ ಪರಿವರ್ತನೆಯನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತಾ, ಆರೋಗ್ಯ ಮತ್ತು ಯೋಗಕ್ಷೇಮದ ಅಗತ್ಯತೆಗಳನ್ನು ಬೆಂಬಲಿಸುವ ಪ್ರಮುಖ ಕಂಪನಿಯಾದ ಆಮ್ವೇ ಇಂಡಿಯಾ, ರಾಷ್ಟ್ರೀಯ ಪೌಷ್ಟಿಕಾಂಶ ಮಾಸವನ್ನು ಆಚರಿಸಿತು.
ಈ ವರ್ಷದ "ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರಗಳು" ಎಂಬ ಧ್ಯೇಯಕ್ಕೆ ಹೊಂದಿಕೆಯಾಗುವ ಈ ಉಪಕ್ರಮವು ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರದ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆಯನ್ನು ಹುಟ್ಟುಹಾಕುವತ್ತ ಗಮನ ಹರಿಸಿದೆ. ಸಮತೋಲಿತ ಆಹಾರ ಸೇವನೆಯನ್ನು ಉತ್ತೇಜಿಸುವ ಸಲುವಾಗಿ ಬೆಳಗಿನ ಪೋಷಣೆ, ಗುಣಮಟ್ಟದ ಉತ್ಪನ್ನಗಳಿಂದ ಬೆಂಬಲಿತವಾದ ಅಗತ್ಯ- ಆಧಾರಿತ ಪೌಷ್ಟಿಕಾಂಶದ ಶಿಫಾರಸುಗಳು ಮತ್ತು ಆರೋಗ್ಯಕರ ಅಡುಗೆ ಸಲಹೆಗಳನ್ನು ಇದು ಒಳಗೊಂಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಚೋಪ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಒಂದು ತಿಂಗಳ ಅವಧಿಯ ಉಪಕ್ರಮಗಳು, ಜ್ಞಾನ ಮತ್ತು ಪರಿಕರಗಳೊಂದಿಗೆ ವಿತರಕರನ್ನು ಸಜ್ಜುಗೊಳಿಸುವುದು, ಆಹಾರದ ಆಯ್ಕೆಗಳು ಮತ್ತು ಶಾಶ್ವತವಾದ ಆರೋಗ್ಯವನ್ನು ಉತ್ತೇಜಿಸುವ ಅಭ್ಯಾಸಗಳನ್ನು ನಿರ್ಮಿಸಿಕೊಳ್ಳಲು ತಮ್ಮ ಗ್ರಾಹಕರಿಗೆ ಸಹಾಯವನ್ನು ಮಾಡುತ್ತದೆ. ದೇಶಾದ್ಯಂತ 30 ಸಾವಿರ ವಿತರಕರು ಮತ್ತು ಅವರ ಗ್ರಾಹಕರನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಎಲ್ಲೆಡೆ ಆಯೋಜಿಸಿದ್ದ ಈ ಕಾರ್ಯಾಗಾರಗಳಲ್ಲಿ ನಿಮ್ಮ ದೈನಂದಿನ ಪೆÇ್ರೀಟೀನ್ ಗುರಿಗಳನ್ನು ಮತ್ತು ಆಮ್ವೇ ಕ್ವೀನ್ ಕುಕ್‍ವೇರ್ ಮೂಲಕ ಪಡೆಯಬಹುದಾದ ಪ್ರೋಟೀನ್ ಸೇವನೆಯ ಪ್ರಯೋಜನಗಳು, ಆರೋಗ್ಯಕರ ಆಹಾರ ಪದ್ಧತಿಗಳು ಮತ್ತು ನ್ಯೂಟ್ರಿಲೈಟ್ ಆಲ್ ಪ್ಲಾಂಟ್ ಪ್ರೋಟೀನ್ ಅನ್ನು ಬಳಸಿಕೊಂಡು ಪೌಷ್ಟಿಕಾಂಶದ ಊಟದ ಪಾಕವಿಧಾನಗಳನ್ನು ಒಳಗೊಂಡಂತೆ ಹಲವಾರು ವಿಷಯಗಳನ್ನು ಒಳಗೊಂಡಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ