ತುಳು ಎಂ.ಎ. ಪ್ರವೇಶಾತಿ ದಿನ- ಸೆ.25ರ ವರೆಗೆ ವಿಸ್ತರಣೆ

Chandrashekhara Kulamarva
0

ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇದರ ತುಳು ಸ್ನಾತಕೋತ್ತರ  ಅಧ್ಯಯನ ವಿಭಾಗದ 2024-25 ನೇ ಸಾಲಿನ ಪ್ರವೇಶಾತಿ ಪಡೆಯಲು ದಿನಾಂಕವನ್ನು ವಿಸ್ತರಿಸಲಾಗಿದ್ದು, ಆಸಕ್ತ ಪದವೀಧರರು ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 25 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.


ತರಗತಿಗಳು ಸಾಯಂಕಾಲ 5 ರಿಂದ ನಡೆಯುತ್ತವೆ. ಉದ್ಯೋಗಸ್ಥರಿಗೆ ಹಾಗೂ ತುಳು ಭಾಷಾಭಿಮಾನಿಗಳಿಗೆ ಇದೊಂದು ಸುವರ್ಣಾವಕಾಶ. ಇತರ ಪಿಜಿ ಕೋರ್ಸ್ ಗಳಿಗೆ ಸಮಾನವಾದ ಸ್ನಾತಕೋತ್ತರ ಅಧ್ಯಯನವಾಗಿದ್ದು, ತುಳು ಭಾಷೆ, ಸಾಹಿತ್ಯ, ಜಾನಪದ, ಇತಿಹಾಸ, ಸಂಶೋಧನೆ ಬಗ್ಗೆ ಕಲಿಸಲಾಗುತ್ತದೆ. ಯಾವುದೇ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.


ಮಾಹಿತಿಗಾಗಿ ವೆಬ್‌ಸೈಟ್ ವಿಳಾಸ http:// mangaloreuniversity.ac.in ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ. 8553119780,  9972261201 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top