ಮಂಡ್ಯ: ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹ

Upayuktha
0


ಮಂಡ್ಯ: 
ಸೆಪ್ಟೆಂಬರ್ 11, ಬುಧವಾರ ರಾತ್ರಿ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಮೆರವಣಿಗೆಯ ಮೇಲೆ ಮತಾಂಧರು ಕಲ್ಲು ತೂರಾಟ ಮಾಡಿ. ದೊಂಬಿ ನಡೆಸಿದ ಘಟನೆಯನ್ನು  ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸಿದೆ.

ಅಂಗಡಿ-ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಅಷ್ಟೇ ಅಲ್ಲದೆ ಮತಾಂಧರು ಮಸೀದಿಯಿಂದ ಮಾರಕಾಸ್ತ್ರಗಳನ್ನು ಹೊರತಂದು ಅತ್ಯಂತ ಭೀಕರ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ಮತಾಂಧರ ಈ ನಡೆಯನ್ನು ನೋಡಿದಾಗ ಈ ದಾಳಿ ಸಂಪೂರ್ಣ ಪೂರ್ವ ನಿಯೋಜಿತವಾಗಿದ್ದು ಗಲಭೆ ಸೃಷ್ಠಿಸಲೆಂದೇ ಈ ಕೃತ್ಯ ಎಸಗಲಾಗಿದೆ ಎಂಬುದು ಬೆಳಕಿಗೆ ಬರುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ. ಪೊಲೀಸರ ಸಮ್ಮುಖದಲ್ಲೂ ಇಂತಹ ದೊಡ್ಡ ಮಟ್ಟದ ಹಲ್ಲೆ ನಡೆದಿರುವುದು ನಾಚಿಕೆಗೀಡು ಮಾಡಿದೆ. ಪೊಲೀಸರು ಅತಿ ಶೀಘ್ರದಲ್ಲಿ ವಶಕ್ಕೆ ಪಡೆದವರಲ್ಲಿ ಕೃತ್ಯಕ್ಕೆ ಕಾರಣಕರ್ತ ರಾದವರ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕು ಮತ್ತು ರಾಜ್ಯಾದ್ಯಂತ ಇನ್ನೂ ಅನೇಕ ಜಿಲ್ಲೆಗಳಲ್ಲಿ ಗಣೇಶ ವಿಸರ್ಜನೆ ಬಾಕಿ ಇದ್ದು ಎಲ್ಲ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕೆಂದು ಸಮಿತಿಯು ಆಗ್ರಹಿಸಿದೆ.


ಘಟನೆ ಬಗ್ಗೆ ಗೃಹ ಸಚಿವ ಡಾ. ಪರಮೇಶ್ವರ ಇವರು ಈ ಘಟನೆ ಆಕಸ್ಮಿಕವಾಗಿದ್ದು ಯಾವುದೇ ದೊಡ್ಡ ಮಟ್ಟದ ಗಾಯ, ಜೀವಹಾನಿಯಾಗಿಲ್ಲ, ಇದನ್ನು ಇಲ್ಲಿಗೆ ನಿಲ್ಲಿಸಿಬಿಡೋಣ ಎಂದು ಪ್ರತಿಕ್ರಿಯಿಸಿದ್ದಾರೆ. ಗೃಹ ಸಚಿವರ ಈ ಹೇಳಿಕೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ. ಇಂಥ ಹೇಳಿಕೆಗಳಿಂದಲೇ ಮತಾಂಧರಿಗೆ ಕುಮ್ಮಕ್ಕು ಸಿಗುತ್ತದೆ. ಸಮಿತಿ ಗೃಹ ಸಚಿವರ ಹೇಳಿಕೆಯನ್ನು ತೀವ್ರ ಶಬ್ದಗಳಲ್ಲಿ ಖಂಡಿಸುತ್ತದೆ. ಜೊತೆಗೆ ಮತಾಂಧರಿಂದ ಕಲ್ಲು ತೂರಾಟವಾಗಿರುವಾಗಲೂ ಗಣೇಶ ಮಂಡಳಿಯ ಸದಸ್ಯರನ್ನು ಬಂಧಿಸಿರುವುದು ಪುನಃ ಕಾಂಗ್ರೆಸ್ ನ ಓಲೈಕೆ ನೀತಿಯನ್ನು ಎತ್ತಿ ತೋರಿಸುತ್ತದೆ. ಗೃಹ ಸಚಿವರು ಶಿವಮೊಗ್ಗದ ಈದ್ ಮಿಲಾದ್ ವೇಳೆ ಗಲಭೆಯಾದಾಗಲೂ ಇದೇ ರೀತಿ ಆಕಸ್ಮಿಕ ಘಟನೆ ಎಂದಿದ್ದರು. ಈಗ ಪುನಃ ಇದೇ ರೀತಿ ಹೇಳಿಕೆ ನೀಡಿದ್ದು ಜನತೆಯ ಕೋಪಕ್ಕೆ ಗುರಿಯಾಗಿದ್ದಾರೆ.  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top