ಲೇಖಾ ಲೋಕ-15: ನಾಟಕ ರಂಗದ ಅದ್ಭುತ ವ್ಯಕ್ತಿ ಬಿ.ವಿ ಕಾರಂತರು

Upayuktha
0


ನ್ನಡ ನಾಟಕಗಳನ್ನು ಮತ್ತು ಅನೇಕ  ಚಲನಚಿತ್ರಗಳನ್ನು ಇನ್ನಿತರ ಭಾಷೆಯ ನಾಟಕಗಳನ್ನು ನಿರ್ದೇಶಿಸಿ, ಸಂಗೀತ ನೀಡಿದ ಕೀತಿ೯ಗೆ ಪಾತ್ರರಾದವರು. ಅದ್ಭುತ  ಕಲಾವಿದ ಬಾಬುಕೋಡಿ ವೆಂಕಟರಮಣ ಕಾರಂತರು (ಬಿ.ವಿ. ಕಾರಂತ್) ಸುಪ್ರಸಿದ್ಧ ವ್ಯಕ್ತಿತ್ವ ಹೊಂದಿ, ಅನೇಕ ಚಲನಚಿತ್ರಗಳ ಪ್ರಶಸ್ತಿಗೆ ಭಾಜನರಾಗಿ, ವಿಶಿಷ್ಟ ನಾಟಕಗಳನ್ನು ನಿರ್ದೇಶಿಸಿ, ಬಹಳಷ್ಟು ಜನರನ್ನು ಕಲಾವಿದರನ್ನಾಗಿ ಮಾಡಿದ ನಾಟಕಕಾರರು.   


ಬಾಬುಕೋಡಿ ನಾರಾಣಪ್ಪಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಆರು ಮಕ್ಕಳಲ್ಲಿ ಹಿರಿಯ ಪುತ್ರನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಎಂಬ ಗ್ರಾಮದಲ್ಲಿ ತಾ॥ 7-10-1928ರಂದು ಜನಿಸಿದರು. ಇವರ ತಾಯಿ, ಪ್ರೀತಿಯಿಂದ, ಬಿ.ವಿ. ಕಾರಂತರನ್ನು  "ಬೋಯಣ್ಣ" ಎಂದೇ ಸಂಬೋಧಿಸುತ್ತಿದ್ದರು. ಬಿ.ವಿ ಕಾರಂತರು, ತಮ್ಮ ಗ್ರಾಮದ, ಸುತ್ತುಮುತ್ತಲಿನ ಪರಿಸರದಲ್ಲಿ ಜರುಗುತ್ತಿದ್ದ ಭಜನೆಗಳ ಹಾಡುಗಳು, ಸಂಪ್ರದಾಯದ ಹಾಡುಗಳು, ಊರಿನ  ಹರಿಕಥೆ, ಯಕ್ಷಗಾನಗಳು, ಜಾತ್ರೆ, ಕೋಲ, ರಥೋತ್ಸವ, ಪಾಡ್ದನಗಳು, ಪಾತ್ರಿಯ ದರ್ಶನ, ವಾದ್ಯಗಳ ಧ್ವನಿ ವೈವಿಧ್ಯಗಳಿಗೆ ಪ್ರಭಾವಿತರಾದರು. ತದನಂತರ, ಕುಕ್ಕಾಜಿಯ ಪ್ರಾಥಮಿಕ ಶಾಲೆಯಲ್ಲಿ ನಟನೆ ಮಾಡಲು ಅವಕಾಶ ದೊರಕಿತು.


ಇವರ  ಅಧ್ಯಾಪಕ ನಿರ್ದೇಶಿಸಿದ  'ಸುಕ್ರುಂಡೆ ಐತಾಳರು', ಕುಂಬಳಕಾಯಿ ಭಾಗವತರು" ನಾಟಕದಲ್ಲಿ ಮೂರನೇ ತರಗತಿ ಓದುತ್ತಿದ್ದ ಕಾರಂತರಿಗೆ ಪುರೋಹಿತ ಐತಾಳನ ಪಾತ್ರ ದೊರಕಿತು. ಪುರೋಹಿತ ಐತಾಳ ಭಾಗವತರಂತೆ, ಸಂಗೀತವನ್ನು ಮಂತ್ರದ ಧಾಟಿಯಲ್ಲಿ ಹೇಳುತ್ತಿದ್ದರು.


ಐದನೇ ಕ್ಲಾಸಿನಲ್ಲಿ ಕಾರಂತರು ಓದುತ್ತಿರುವಾಗ ಪಿ.ಕೆ ನಾರಾಯಣ ರಾಯರು ನಿರ್ದೇಶಿಸಿದ 'ನನ್ನ ಗೋಪಾಲ' ನಾಟಕದಲ್ಲಿ,  ಗೋಪಾಲನ ಪಾತ್ರದ ಹಾಡುಗಳನ್ನು ಕೇಳಿ, ಊರಿನ ಜನರು ಮೆಚ್ಚುಗೆ ವ್ಯಕ್ತಪಡಿಸಿ, ಬಹುಮಾನ ನೀಡಿದರು. ಅವರ ಪ್ರೋತ್ಸಾಹದಿಂದ ಇವರನ್ನು ರಂಗಭೂಮಿಗೆ ಪ್ರವೇಶ ಮಾಡಲು ಬಾಲ್ಯದಲ್ಲಿಯೇ ಸೆಳೆಯಿತು. ಮುಂದೆ ಮನೆಪಾಠ ಹೇಳುವ, ಮಾಸ್ತರರಾಗಿ, ಸಂಗೀತ ಶಾಲೆಯಲ್ಲಿ ಅಭ್ಯಾಸ ಮಾಡಿ ಪ್ರಖ್ಯಾತರಾದರು. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಗೀತ ಕಲಿತರು. ಕೆಲವು ಸಲ ಶಿವರಾಮ ಕಾರಂತರ ಬಾಲವನಕ್ಕೆ ಭೇಟಿ ನೀಡಿ, ಗುಬ್ಬಿ ಕಂಪನಿಯ ಕೃಷ್ಣ ಲೀಲಾ ನಾಟಕ ನೋಡಲು, ಮಂಗಳೂರಿಗೆ  ಹೋಗುತ್ತಿದ್ದರು.


ಬಾಲಪ್ರಪಂಚ, ಸಿರಿಗನ್ನಡ ಅರ್ಥಕೋಶ ಪುಸ್ತಕಗಳನ್ನು ಓದುತ್ತಿದ್ದರು. ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಕಾರಂತರು ನಂತರ  ಪ್ರಸಿದ್ಧಿ ಪಡೆದ ಗುಬ್ಬಿ ಕಂಪನಿಯವರ ನಾಟಕ ಕಂಪನಿ ಸೇರಿದರು. ಊರು ಬಿಟ್ಟು ಹೋದ.  ಕಾರಂತರು, ಸುಮಾರು 25 ವಷ೯ಗಳ ನಂತರ ತಮ್ಮ, ತಂದೆ ತಾಯಿಯನ್ನು, ಉಡುಪಿಯ ಎಂ ಜಿ ಎಂ. ಕಾಲೇಜಿನಲ್ಲಿ ಏವಂ ಇಂದ್ರಜಿತು ನಾಟಕ ಪ್ರದರ್ಶನದಲ್ಲಿ ಭೇಟಿಯಾದರು.


ಗುಬ್ಬಿ ವೀರಣ್ಣನವರು ವಿಶೇಷವಾಗಿ ಬಿ.ವಿ.ಕಾರಂತರನ್ನು ಬನಾರಸ್ ಕಲಾಪ್ರಕಾರದಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ ಕಳಿಸಿದರು. ಅಲ್ಲಿ ಕಾರಂತರು, ಗುರು ಓಂಕಾರನಾಥರ ಹತ್ತಿರ ಹಿಂದೂಸ್ಥಾನಿ ಸಂಗೀತ ಅಭ್ಯಾಸ ಮಾಡಿದರು. ಬಿ ವಿ ಕಾರಂತರು, ಪ್ರೇಮಾ ಅವರನ್ನು ಸರಳ ರೀತಿಯಲ್ಲಿ ಮೈಸೂರಿನ ಆಂಜನೇಯ ದೇವಸ್ಥಾನದಲ್ಲಿ ವಿವಾಹವಾದರು. ದಂಪತಿಗಳ ಪ್ರಯತ್ನದಿಂದ, ಬೆನಕ ನಾಟಕದ ತಂಡವನ್ನು ಕಟ್ಟಿದರು. (ಬೆಂಗಳೂರು ನಗರ ಕಲಾವಿದರು.)


ಕಾರಂತರು ರಾಷ್ಟ್ರೀಯ ನಾಟಕ ಶಾಲೆಯಿಂದ,ಪದವಿ ಪಡೆದರು. 1969 ರಿಂದ 1972 ರವರೆಗೆ ದೆಹಲಿ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ನಾಟಕ ನುರಿತ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಪುನಃ ಬೆಂಗಳೂರಿಗೆ ವಾಪಸ್ಸು ಬಂದು ಚಲನಚಿತ್ರಗಳ ಸಂಗೀತಕ್ಕಾಗಿ ಕೆಲಸ ಮಾಡಿದರು. ಅಂತಹ ಸಮಯದಲ್ಲಿ ಗಿರೀಶ್ ಕಾನಾ೯ಡ್, ಯು. ಆರ್. ಅನಂತಮೂರ್ತಿ ಅವರ ಒಡನಾಟ ದೊರಕಿತು. 1977ರಲ್ಲಿ, ಪುನಃ, ರಾಷ್ಟ್ರೀಯ  ಶಾಲೆಗೆ ವಾಪಸಾದರು! ರಾಷ್ಟ್ರೀಯ ಶಾಲೆಯ ನಿರ್ದೇಶಕರಾಗಿ, ಮೆಚ್ಚಿನ ರಂಗಭೂಮಿಯನ್ನು ದೇಶಾದ್ಯಂತ ಕೊಂಡೊಯ್ದರು.


ತಮಿಳುನಾಡಿನ, ಮಧುರೈನಲ್ಲಿ ನಾಟಕಗಳ ಕಮ್ಮಟ ಸಹ ನಡೆಸಿದರು. ಮಧ್ಯಪ್ರದೇಶ ಸರಕಾರ ಇವರನ್ನು ಭಾರತ ಭವನದ, ಆಶ್ರಯದಲ್ಲಿ,ರಂಗಮಂಡಲರೆಪಟ೯ರಿಯ ಮುಖ್ಯಸ್ಥರನ್ನಾಗಿ ನೇಮಿಸಿತು. 1981ರಿಂದ 1986ರವರೆಗೆ, ಕೆಲಸ ಮಾಡಿದರು. ಪುನಃ ಕನಾ೯ಟಕದಲ್ಲಿ ಶಿವರಾಮ ಕಾರಂತರ ಚೋಮನದುಡಿ ಚಲನಚಿತ್ರಕ್ಕೆ ನಿರ್ದೇಶನವನ್ನು ಮಾಡಿದರು. ಕೇಂದ್ರ ಸರಕಾರ, ಚೋಮನದುಡಿ ಚಿತ್ರಕ್ಕೆ ಸ್ವರ್ಣ ಕಮಲ  ಪ್ರಶಸ್ತಿ ನೀಡಿತು. ಈ ಚಿತ್ರ ಕನ್ನಡದಲ್ಲಿ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮೈಸೂರಿನಲ್ಲಿ ಸಕಾ೯ರ, ರೆಪಟ೯ರಿ ಸ್ಥಾಪಿಸಿ, ರಂಗಾಯಣ ಎಂದು ನಾಮಕರಣ ಮಾಡಿ 1955ರ ವರೆಗೆ ಮುಖ್ಯಸ್ಥರನ್ನಾಗಿ ನೇಮಿಸಿತು.


 

ವೃತ್ತಿ ಜೀವನದಲ್ಲಿ ಬಿ.ವಿ. ಕಾರಂತರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ನಿರ್ದೇಶಕರಾಗಿ, ಮಧ್ಯಪ್ರದೇಶದ ರಂಗಮಂಡಲ  ನಿರ್ದೇಶಕರಾಗಿ, ರಂಗಾಯಣ ಮೈಸೂರು ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.


ಇವರು ತಮ್ಮ ನಾಟಕಗಳಲ್ಲಿ ವಿಶಿಷ್ಟ ಸಂಗೀತ, ಯಕ್ಷಗಾನ ತರಹ ಜಾನಪದ ಪದ್ಧತಿ ಅಳವಡಿಸಿ ನಾಟಕಗಳನ್ನು ನಿರ್ದೇಶಿಸಿದ  ಅದ್ಭುತ ನಾಟಕಾರರು. ಕನ್ನಡದಲ್ಲಿ ಈಡಿಪಸ್ (ಗ್ರೀಕ್ ನಾಟಕ), ಹಯವದನ, ಪಂಜರಶಾಲೆ, ಗೋಕುಲ ನಿರ್ಗಮನ, ಸತ್ತವರ ನೆರಳು ಮತ್ತು ಜೋಕುಮಾರಸ್ವಾಮಿ, ಹಿಂದಿಯಲ್ಲಿ ಅಂಧೇರ್ ನಾಗರಿ ಚೌಪಟ್ ರಾಜಾ, ಕಿಂಗ್ ಲಿಯರ್, ಸ್ಕಂದಗುಪ್ತ ಪ್ರಖ್ಯಾತ ನಾಟಕಗಳು.



ತಬ್ಬಲಿ ನೀನಾದೆ ಮಗನೆ, ಚೋಮನ ದುಡಿ, ವಂಶವೃಕ್ಷ, ಚಲನಚಿತ್ರಗಳ ನಿರ್ದೇಶಕರಾಗಿ ಫಣಿಯಮ್ಮ, ಘಟಶ್ರಾದ್ಧ, ಕನ್ನೇಶ್ವರ ರಾಮ, ಕಾರಂತರ ಚೋಮನದುಡಿ ಮತ್ತು ಕಾಡು ಚಲನಚಿತ್ರಗಳಿಗೆ ಸಂಗೀತ ನೀಡಿದ ಮಹಾನುಭಾವರು. 1979 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕಾಳಿದಾಸ ಸಮ್ಮಾನ, ಬಿ.ವಿ.ಕಾರಂತರಿಗೆ ನೀಡಿ, ಸನ್ಮಾನಿಸಲಾಯಿತು.



ಬಿ ವಿ ಕಾರಂತರು ತೆಲುಗು ನಾಟಕರಂಗಕ್ಕೂ ಮೂರು ಅದ್ಭುತವಾದ  ನಾಟಕಗಳನ್ನು ಆಂಧ್ರದ ಸುರಭಿ ಥಿಯೇಟರ್ ಆಫ್  ಆಂಧ್ರ ಪ್ರದೇಶ ದೊಂದಿಗೆ ನೀಡಿ ನಾಟಕ ಕಮ್ಮಟಗಳನ್ನು ಸಹ ಏರ್ಪಡಿಸಿದ್ದರು. ಭೀಷ್ಮ, ಚಂಡಿಪ್ರಿಯ, ಬಸ್ತಿದೇವತಾ ಯಾದಮ್ಮ,  ಪ್ರಮುಖವಾದವು. ಅನೇಕ ನಾಟಕಗಳ ಕಮ್ಮಟಗಳನ್ನು ಆಂಧ್ರಪ್ರದೇಶದ ಮೂಲೆಮೂಲೆಗಳಲ್ಲಿ ಏರ್ಪಡಿಸಿ, ಬಹುತೇಕ ಸಮಯವನ್ನು ಹಳ್ಳಿಗಳಲ್ಲಿ ಕಳೆದರು. ಅನೇಕ ಡಾಕುಮೆಂಟರೀ ಚಿತ್ರಗಳನ್ನೂ,  26 ಚಲನಚಿತ್ರಗಳಿಗೆ, ಸಂಗೀತ ನೀಡಿ, ಅದ್ಭುತ ನಿರ್ದೇಶಕ, ನಾಟಕಕಾರರಾಗಿ ಕರ್ನಾಟಕ ರಾಜ್ಯಕ್ಕೆ ಹೆಸರು ತಂದರು. ಅನೇಕ ಪ್ರಶಸ್ತಿಗಳಿಗೆ, ಸನ್ಮಾನಗಳಿಗೆ, ಪ್ರೀತಿಗೆ ಗೌರವಗಳಿಗೆ, ಭಾಜನರಾದರು. ಗಿರೀಶ್ ಕಾನಾ೯ಡ್ ಬರೆದ, ತೊಗಲಕ್ ಹಿಂದಿ ನಾಟಕವನ್ನು ಬಿ ವಿ ಕಾರಂತರು ಅನುವಾದಿಸಿದರು.


ಕನ್ನಡ ನಾಡಿಗೆ ಅನೇಕ ಶ್ರೇಷ್ಠ ನಾಟಕಗಳನ್ನು ನಿದೇ೯ಶನ ಮಾಡಿ, ಸಂಗೀತ ನೀಡಿ, ಅನೇಕ ನಟರನ್ನು ಅಭಿನಯಕ್ಕೆ ತಯಾರು ಮಾಡಿ,  ಬೆಂಗಳೂರಿನಲ್ಲಿ ತಮ್ಮ72 ನೇ ವಯಸ್ಸಿನಲ್ಲಿ ತಾ॥  1-9-2002ರಂದು ನಿಧನರಾದರು.


ಇವರ ಹೆಸರಿನಲ್ಲಿ 2012 ರಲ್ಲಿ ಫಿಲ್ಮ್ ಡಿವಿಜನ್ ರವರು ಬಿ ವಿ ಕಾರಂತ ಬಾಬಾ, ಎಂಬ ಡಾಕುಮೆಂಟರೀ ನಿರ್ಮಿಸಿದರು. ಪ್ರಖ್ಯಾತ ಸಾಹಿತಿ ವೈದೇಹಿ ಅವರು ನಿರ್ಮಿಸಿದ ಬಿ.ವಿ ಕಾರಂತರ ಆತ್ಮಚರಿತ್ರೆ ಆಧರಿಸಿದ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಚಿತ್ರ ಬಿಡುಗಡೆಯಾಯಿತು. 


- ಶ್ರೀಧರ ರಾಯಸಂ

ಗಿರಿನಗರ

ಬೆಂಗಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top