ವಿ.ಬಿ. ಕುಳಮರ್ವ ಅವರಿಗೆ "ಶಿಕ್ಷಣ ಮತ್ತು ಸಾಹಿತ್ಯ ಸೇವಾ ವಿಭೂಷಣ" ರಾಷ್ಟ್ರೀಯ ಪ್ರಶಸ್ತಿ

Upayuktha
0

ಕಾಸರಗೋಡು: ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕೃತಿ ಸಮ್ಮೇಳನ 2024 ಈ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡು ಜವಾಬ್ದಾರಿಯುತವಾಗಿ ಮುನ್ನಡೆಸಿದ ಕಾಸರಗೋಡಿನ ಹಿರಿಯ ಸಾಹಿತಿ ಶಿಕ್ಷಣತಜ್ಞ ವಿ.ಬಿ. ಕುಳಮರ್ವ, ಮತ್ತು ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಮತಿ ಲಲಿತಾಲಕ್ಷ್ಮೀ ಕುಳಮರ್ವ ಅವರು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗೈದ ಅನನ್ಯ ಸೇವೆಯನ್ನು ಪರಿಗಣಿಸಿ ಕನ್ನಡ ಭವನದಲ್ಲಿ ಜರಗಿದ ಸಮ್ಮೇಳನದಲ್ಲಿ "ರಾಷ್ಟ್ರೀಯ ಸ್ಪಂದನ ಸಿರಿ ಶಿಕ್ಷಣ ಮತ್ತು ಸಾಹಿತ್ಯ ಸೇವಾ ವಿಭೂಷಣ ಪ್ರಶಸ್ತಿ-2024" ನೀಡಿ ಗೌರವಿಸಲಾಯಿತು. 



ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ) ಬೆಂಗಳೂರು; ಕೇಂದ್ರ ಕಛೇರಿ- ಹಾಸನ; ಕಾಸರಗೋಡು ಜಿಲ್ಲಾ ಘಟಕ; ಕನ್ನಡ ಭವನ ಮತ್ತು ಗ್ರಂಥಾಲಯ (ರಿ) ಕಾಸರಗೋಡು ಸಹಯೋಗದಲ್ಲಿ ಈ ಸಮ್ಮೇಳನ ನಡೆದಿತ್ತು.



ಸಮ್ಮೇಳನದ ವೇದಿಕೆಯಲ್ಲಿ ಉದ್ಘಾಟಕರಾದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ| ಮಾನಸ ಮೈಸೂರು, ಕರ್ನಾಟಕ ಸ್ಪಂದನ ಸಿರಿ ವೇದಿಕೆಯ ಸಂಸ್ಫಾಪಕ ರಾಜ್ಯಾಧ್ಯಕ್ಷೆ ಶ್ರೀಮತಿ ಕಲಾವತಿ ಮಧುಸೂದನ, ಕ.ಸಾ.ಪ.ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ|ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕನ್ನಡ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯಕಟ್ಟೆ, ಕನ್ನಡ ಭವನ ಗ್ರಂಥಾಲಯದ ಸಂಸ್ಥಾಪಕ ಅಧ್ಯಕ್ಷ ವಾಮನ ರಾವ್ ಬೇಕಲ್, ಸಾಹಿತಿ ಕೆ.ಟಿ. ಶ್ರೀಮತಿ ಮೈಸೂರು, ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು, ವಿಸ್ಡಮ್ ಇನ್ಸ್ಟಿಟ್ಯೂಟ್ ನೆಟ್ವರ್ಕ್ ನ ಅಧ್ಯಕ್ಷೆ  ಶ್ರೀಮತಿ ಸಂಧ್ಯಾರಾಣಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top