- ಡಾ. ರೂಪಾ ರಾವ್
ಗಂಡ ಹೆಂಡತಿ ಅಥವ ದಾಂಪತ್ಯದಂತಹ ಸಂಬಂಧದಲ್ಲಿ ಪರಸ್ಪರ ಗೌರವ, ನಂಬಿಕೆ ಹಾಗೂ ಕಾಳಜಿ ಮುಖ್ಯ ಎಂಬುದು ಗೊತ್ತೇ ಇರುವ ಸಂಗತಿ, ಆದರೆ ಇದೆಲ್ಲಾವುದರ ಜೊತೆ ದಾಂಪತ್ಯದ ಬದುಕಿನ ಐದು ಭಾಗಗಳಲ್ಲಿ ಈ ಪರಸ್ಪರ ಎಷ್ಟರ ಮಟ್ಟಿಗೆ ಓಪನ್ ಆಗಿದ್ದೀರಿ ಎಂಬುದನ್ನು ದಾಂಪತ್ಯದ ಬಂಧನವನ್ನು ಬಂಧವಾಗಿರಿಸುತ್ತದೆ.
ಅವುಗಳನ್ನು ಕೆಳಗಿನಂತೆ ಡಿವೈಡ್ ಮಾಡಬಹುದು,
ಈ ಕೆಳಗಿನ ಪ್ರಶ್ನೆಗಳಿಗೆ 1 ರಿಂದ ಐದು ಅಂಕಗಳನ್ನು ಕೊಟ್ಟುಕೊಳ್ಳಿ
1 ಇಲ್ಲ, 2 ಅಪರೂಪ, 3 ಆಗಾಗ 4 ತುಂಬಾ ಸಲ
5 ಬಹುತೇಕ ಯಾವಾಗಲೂ
1. ಭಾವನಾತ್ಮಕ ಮುಕ್ತತೆ
👉 ಭಾವನೆಗಳನ್ನು ಧನಾತ್ಮಕ ಮತ್ತು ಋಣಾತ್ಮಕ ಎರಡನ್ನೂ ಮುಕ್ತವಾಗಿ ಹಂಚಿಕೊಳ್ಳಲಾಗುವುದಾ?
👉 ಭಯ, ಅಭದ್ರತೆಗಳಂತಹ, ಆಕರ್ಷಣೆ, ಅನುಮಾನಗಳನ್ನು ವ್ಯಕ್ತಪಡಿಸಲು ಆಗುತ್ತದೆಯಾ
👉 ಅದನ್ನು ಪ್ರದರ್ಶಿಸಿದಾಗ ಅವರೇನಾದರೂ ತನ್ನ ಬಗ್ಗೆ ಅಂದುಕೊಳ್ಳಬಹುದು ಎಂಬ ಆತಂಕ ಇಲ್ಲದೇ ವ್ಯಕ್ತಪಡಿಸಬಹುದಾ?
👉 ಅವರು ನಿಮ್ಮಲ್ಲಿಇವುಗಳನ್ನು ಮುಕ್ತವಾಗಿ ಶೇರ್ ಮಾಡಿಕೊಳ್ಳುತ್ತಾರಾ?
2. ದೈಹಿಕ ಮುಕ್ತತೆ
👉 ಆಗಾಗ ಪ್ರೀತಿ ಅಥವಾ ಮಮತೆಗಳ ಅಪ್ಪುಗೆ, ಚುಂಬನಗಳು ಸಾಧ್ಯವೇ
👉 ನಿಮ್ಮ ಲೈಂಗಿಕ ಪ್ರಯಾರಿಟಿಗಳನ್ನು ಅಗತ್ಯಗಳನ್ನು ಹಂಚಿಕೊಳ್ಳಬಲ್ಲಿರಾ
👉 ದೇಹದ ಆಕಾರದ/ ಬಣ್ಣದ/ ರೂಪದ ಬಗೆಗೆ ಜಡ್ಜ್ ಮೆಂಟಲ್ ಆಗುವ ಭಯವಿಲ್ಲದೇ ಚರ್ಚಿಸಬಲ್ಲಿರಾ
👉 ಪರಸ್ಪರ ಹತ್ತಿರವಾಗಲು ದೈಹಿಕ ಒಪ್ಪಿಗೆ ಮತ್ತು ಗಡಿಗಳ ಬಗ್ಗೆ ಗೌರವ ಇದೆಯಾ?
3. ಸಮಯದ ಹಂಚಿಕೆಯಲ್ಲಿ ಮುಕ್ತತೆ
👉 ಅವರೊಂದಿಗೆ ಗುಣಮಟ್ಟದ ಸಮಯಕ್ಕೆ ಆದ್ಯತೆ ನೀಡಲು ಆಗುತ್ತಿದೆಯಾ?
👉 ಪರಸ್ಪರ ಒಟ್ಟಿಗೆ ಹೆಚ್ಚು ಸಮಯ ಕಳೆಯಬೇಕೆಂದು ಅನಿಸುತ್ತಿದೆಯಾ?
👉 ಕೆಲಸ, ಜೀವನ ಮತ್ತು ಸಂಬಂಧದ ಬದ್ಧತೆಗಳನ್ನು ಸಮತೋಲನಗೊಳಿಸಲು ಅವರಿಗೆ ಸಹಾಯ ಮಾಡುತ್ತಿದ್ದೀರಾ?
👉 ಅವರು ನಿಮಗೆ ವರ್ಕ್ ಲೈಫ್ ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತಿದ್ದಾರಾ?
4. ಭೌತಿಕ ವಸ್ತುಗಳ ಮುಕ್ತತೆ-
👉 ನಿಮ್ಮ ಆರ್ಥಿಕ ಸ್ಥಿತಿ ಖರ್ಚು, ಉಳಿತಾಯ, ಸಾಲ ಇತರರಿಗೆ ಸಹಾಯ ಮಾಡುವ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಪಾರದರ್ಶಕವಾಗಿದ್ದೀರಾ?
👉 ಅವರೂ ನಿಮ್ಮೊಂದಿಗೆ ನೀವು ಬೈಯ್ಯಬಹುದು ಎಂಬ ಭಯವಿಲ್ಲದೇ ಶೇರ್ ಮಾಡಿಕೊಳ್ಳಬಲ್ಲರಾ
👉 ಆಸ್ತಿ ಮತ್ತು ಇತರ ಹಣಕಾಸು ಗಳನ್ನು ಯಾವುದೇ ವ್ಯಾಜ್ಯವಿಲ್ಲದೇ, ಹಣ ದುರುಪಯೋಗವಾಗಬಹುದೆಂಬ ಭಯವಿಲ್ಲದೇ ಅವರ ಜೊತೆ ಮಾಡಿಕೊಳ್ಳಬಲ್ಲಿರಾ
👉 ಅವರೂ ಸಹಾ ನಿಮ್ಮೊಂದಿಗೆ ತಮ್ಮ ಆಸ್ತಿಗಳನ್ನು ಶೇರ್ ಮಾಡಿಕೊಳ್ಳುವ ಮನಸು ಹೊಂದಿದ್ದಾರೆಯಾ ?
👉 ಮನೆಯ ಆರ್ಥಿಕ- ಸಾಂಸಾರಿಕ ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳಬಲ್ಲಿರಾ
👉 ಯಾರೋ ಒಬ್ಬರು ಸಾಂಸಾರಿಕ ಹಾಗು ಸಾಂದರ್ಭಿಕ ಕಾರಣದಿಂದ ದುಡಿಯಲಾಗದಿದ್ದರೆ ಅವರನ್ನು ಹಂಗಿಸದೇ ಗೌರವಿಸಬಲ್ಲಿರಾ,
👉 ಅದೇ ಗೌರವ ನಿಮಗೆ ಸಿಗುತ್ತದೆಯೇ?
👉 ಪರಸ್ಪರರ ಆಸೆ ಆಕಾಂಕ್ಷೆ ಹಾಗೂ ಗುರಿಗಳನ್ನು ಮುಟ್ಟಲು ಇಬ್ಬರೂ ಸಹಕಾರ ನೀಡುತ್ತಿದ್ದೀರಾ?
5 ಮೊಬೈಲ್/ ಡಿಜಿಟಲ್ ಮುಕ್ತತೆ:
👉 ನಿಮ್ಮ ಮೊಬೈಲ್ ಅಥವಾ ಡಿಜಿಟಲ್ ಅಕೌಂಟಿಗೆ ಅವರು ಲಾಗಿನ್ ಆಗಲು ನಿಮ್ಮ ಅಭ್ಯಂತರ ಅಥವಾ ಭಯ ಇಲ್ಲವಾ?
👉 ನಿಮ್ಮವರ ಮೊಬೈಲಿನಲ್ಲಿ ಅವರ ಖಾಸಗೀ ವಿಷಯಗಳನ್ನು ನೋಡಿಯೂ ಅವರು ಜೊತೆ ಈ ಬಗ್ಗೆ ಮುಕ್ತವಾಗಿ ಮಾತಾಡಬಲ್ಲಿರಾ
👉 ನಿಮ್ಮ ಸಂಗಾತಿಯ ಸ್ನೇಹಿತ / ಸ್ನೇಹಿತೆಯರ ಸ್ನೇಹದ ಗಡಿ ಮೀರದ ಸಲುಗೆಗಳನ್ನು ತಮಾಷೆಯಾಗಿ ಸ್ವೀಕರಿಸಬಲ್ಲಿರಾ?
👉 ಅವರೂ ಮೇಲಿನದನ್ನು ತಮಾಷೆಯಾಗಿ ಸ್ವೀಕರಿಸಬಲ್ಲರೇ
ಮೇಲಿನದರಲ್ಲಿ ನಿಮ್ಮ ಸ್ಕೋರ್ 72 ರ ಮೇಲಿದ್ದರೆ ನಿಮ್ಮ ಸಂಬಂಧ ಪಾಸಿಟೀವ್ ಆಗಿಯೇ ಇದೆ. ಇನ್ನೂ ಉತ್ತಮ ಪಡಿಸಿಕೊಳ್ಳುವುದೆಂದಿದ್ದರೆ ಇನ್ನಷ್ಟು ಪ್ರಯತ್ನ ಹಾಕಬಹುದು
54ರಿಂದ 71 ಕೊಂಚ ಉಸಿರುಗಟ್ಟಿಸಿ ಸಂಬಂಧ ಆದರೂ ಬದುಕು ನಡೆಸುತ್ತಿದ್ದೀರಿ, ಇಬ್ಬರೂ ಕೂತು ಬದಲಾವಣೆ ತಂದುಕೊಳ್ಳಿ
27 ರಿಂದ 53 ನಿಮ್ಮ ಸಂಬಂಧ ಕೇವಲ ಸಂಬಂಧದ ನೆಪದ ಮೇಲೆ ಮಾತ್ರವಿದೆ ಅದರಲ್ಲಿ ತೀವ್ರವಾಗಿ ಬದಲಾವಣೆ ಬೇಕಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ