ಬಳ್ಳಾರಿ:ಗಣೇಶ ಚತುರ್ಥಿಯ ಹಿನ್ನೆಲೆ ಬಳ್ಳಾರಿ ನಗರದ ವಿವಿಧ ಪ್ರದೇಶಗಳಲ್ಲಿ ವಿನಾಯಕ ಮಂಡಳಿಗಳು ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣೇಶ ಪೆಂಡಾಲ್ಗಳಿಗೆ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿಯವರು ಭಾನುವಾರ ಸಂಜೆ ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭ ಹಲವು ಗಣೇಶ ಪೆಂಡಾಲ್ ಸಮಿತಿಯವರು ನಗರ ಶಾಸಕ ನಾರಾ ಭರತ್ ರೆಡ್ಡಿಯವರನ್ನು ಸನ್ಮಾನಿಸಿ, ಶುಭ ಹಾರೈಸಿದರು. ಎಂ.ಜಿ ಪೆಟ್ರೋಲ್ ಬಂಕ್ ಬಳಿಯ ಗಣೇಶ ಪೆಂಡಾಲ್, ಸೆಂಟೇನರಿ ಹಾಲ್ನ ಹಿಂದೂ ಮಹಾ ಗಣಪತಿ ಪೆಂಡಾಲ್, ಸಿಂದಗಿ ಕಂಪೌಂಡಿನ ಗಣೇಶ ಪೆಂಡಾಲ್, ಕೆ.ಸಿ.ರಸ್ತೆಯ ಕಾಟೇ ಗುಡ್ಡದ ಗಣೇಶ ಪೆಂಡಾಲ್, ಮಿಲ್ಲರ್ ಪೇಟೆಯ ಗಣೇಶ ಪೆಂಡಾಲ್, ತಾಳೂರು ರಸ್ತೆಯ ಗಣೇಶ ಪೆಂಡಾಲ್, ಎಂಆರ್ವಿ ಬಡಾವಣೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಗಣೇಶ ಪೆಂಡಾಲ್ಗಳಿಗೆ ಭೇಟಿ ನೀಡಿ ವಿಘ್ನ ವಿನಾಯಕನ ಮೂರ್ತಿಗಳ ದರ್ಶನ ಪಡೆದರು. ಈ ಸಂದರ್ಭ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿದಾನಂದಪ್ಪ ಯಾದವ್, ಮಾಜಿ ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಅನೂಪ್, ವಿಷ್ಣು ಬೋಯಪಾಟಿ, ಸತ್ತಿಬಾಬು, ವೇಣು, ರಾಕಿ, ಹಗರಿ ಗೋವಿಂದ, ಚಾನಾಳ್ ಶೇಖರ್, ಗುರುರಾಜ ಹತ್ವಾರ್, ವಾಸು ರೆಡ್ಡಿ, ವನ್ನನಗೌಡ, ಶಬರಿ ರವಿ ಸೇರಿದಂತೆ ಹಲವರು ಹಾಜರಿದ್ದರು. ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ