ಮಂಗಳೂರು: ಸೇಂಟ್ ಅಲೋಶಿಯಸ್ ಸಂಸ್ಥೆಗಳು ಮತ್ತು ರಾಮಕೃಷ್ಣ ಮಿಷನ್– ಸ್ವಚ್ಛ ಮಂಗಳೂರು ಅಭಿಯಾನ ಆಶ್ರಯದಲ್ಲಿ ಉಚಿತ ಹಣ್ಣಿನ ಸಸಿಗಳ ವಿತರಣಾ ಕಾರ್ಯಕ್ರಮ ನಡೆಯುತ್ತಿದೆ.
ನಮ್ಮ ಮಂಗಳೂರು ನಗರವನ್ನು ಹಣ್ಣುಗಳ ನಗರವನ್ನಾಗಿ ಪರಿವರ್ತಿಸುವ ಉದ್ದೇಶದಿಂದ, ಎರಡೂ ಸಂಸ್ಥೆಗಳು 'ಫಲ ವೃಕ್ಷಾರೋಪಣ ಅಭಿಯಾನ' ವನ್ನು ಹಮ್ಮಿಕೊಂಡಿವೆ.. ಈ ಮಹತ್ವಾಕಾಂಕ್ಷಿ ಯೋಜನೆಯು ನಮ್ಮ ನಗರದಲ್ಲಿ ಹಸಿರಿನ ನೈಸರ್ಗಿಕ ಆವರಣವನ್ನು ವೃದ್ಧಿಸುವುದು ಮಾತ್ರವಲ್ಲದೆ, ಸುಸ್ಥಿರ ಬದುಕನ್ನು ಉತ್ತೇಜಿಸಲು ಸಹಾಯಮಾಡುತ್ತದೆ.
ಉಚಿತ ಹಣ್ಣಿನ ಗಿಡಗಳನ್ನು ಪಡೆಯಲು ಷರತ್ತುಗಳು:
- ಈ ಅಭಿಯಾನವು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಿವಾಸಿಗಳಿಗೆ ಮಾತ್ರ ಅನ್ವಯಿಸುತ್ತದೆ.
- ಗಿಡ ನೆಡುವ ಸ್ಥಳದಲ್ಲಿ ನೇರವಾಗಿ ಸೂರ್ಯನ ಬೆಳಕು ಇರಬೇಕು.
- ಸಸಿಗಳಿಗೆ ಸೂಕ್ತ ಆರೈಕೆ ನೀಡಬೇಕು.
- ಸಸಿಗಳನ್ನು ತಮ್ಮ / ಮಿತ್ರರ ಖಾಸಗಿ ಜಾಗದಲ್ಲಿ ಮಾತ್ರ ನೆಡಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲ.
ಹಣ್ಣಿನ ಸಸಿಗಳ ಪಟ್ಟಿ:
ತೋಟದ ಮಾವು, ಕೋಕಂ, ರೋಲಿನಿಯಾ, ಲಕ್ಷ್ಮಣಫಲ, ತಾರಾಹಣ್ಣು, ನೀರಿಹಣ್ಣು, ನೇರಳೆ, ಕುಂತಳಕಾಯಿ.
ನೋಂದಣಿ ವಿವರಗಳು:
- 30-09-2024 ಸೋಮವಾರದ ಒಳಗೆ ನಿಮ್ಮ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿ- 9448489399
- ನಿಮಗೆ ಇಷ್ಟವಾದ ಮೂರು ಹಣ್ಣಿನ ಗಿಡಗಳ ಆಯ್ಕೆಯನ್ನು ತಿಳಿಸಿ.
- ಪರಿಶೀಲನೆಯ ನಂತರ, ಪ್ರತಿಯೊಬ್ಬರಿಗೂ ಕನಿಷ್ಠ ಮೂರು ಸಸಿಗಳನ್ನು ವಿತರಿಸಲಾಗುವುದು.
ಸ್ವಚ್ಛ ಮಂಗಳೂರಿಗಾಗಿ ಹಸಿರು ಮಂಗಳೂರಿಗಾಗಿ ನಮ್ಮೊಂದಿಗೆ ಕೈಜೋಡಿಸಿ ಎಂದು ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪಾಡಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ