ಬಳ್ಳಾರಿ: ಬಳ್ಳಾರಿ ನಗರದ 30 ನೇ ವಾರ್ಡಿನ ಆದಿ ದ್ರಾವಿಡ (ಎಸ್.ಸಿ) ತಮಿಳ್ ರುದ್ರ ಭೂಮಿಗೆ ಮುಖ್ಯ ದ್ವಾರ ಉದ್ಘಾಟನೆಯನ್ನು ಮಹಾನಗರ ಪಾಲಿಕೆ ಮಹಾಪೌರರಾದ ಮುಲ್ಲಂಗಿ ನಂದೀಶ್, ಉಪಮಹಾ ಪೌರರಾದ ಡಿ ಸುಕುಂ ಅವರು ಪಾಲಿಕೆ ಸದಸ್ಯರಾದ ಎಂಡಿ ಆಸಿಫ್ ಅವರ ನೇತೃತ್ವದಲ್ಲಿ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಾಪೌರರು ಮಾತನಾಡಿ ಮನುಷ್ಯನಾದ ಮೇಲೆ ಹುಟ್ಟು ಉಚಿತ ಸಾವು ಖಚಿತ ಎಂಬ ಗಾದೆ ಮಾತಿನಂತೆ, ಒಂದಲ್ಲ ಒಂದು ದಿನ ನಾವೆಲ್ಲಾ ವಿಶ್ರಾಂತಿ ಇಲ್ಲೇ ಪಡೆಯಬೇಕು ಎಂದರು.
ಕಾಂಪೌಂಡ್ ಗೋಡೆ ಮತ್ತು ವಿದ್ಯುತ್ ಕಂಬಗಳು ಹಾಗೂ ಮೂಲ ಭೂತ ಸೌಕರ್ಯಗಳನ್ನು ಕೂಡಲೇ ನಿರ್ಮಿಸುವುದು ಅತಿ ಶೀಘ್ರದಲ್ಲಿ ಈ ವಾರ್ಡಿನ ಸದಸ್ಯರಾದ ಆಸಿಫ್ ಅವರ ಜೊತೆ ಚರ್ಚೆಸಿ ಕಾಮಗಾರಿಗೆ ಚಾಲನೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಪಾಲಿಕೆ ಸದಸ್ಯ ಆಸಿಫ್ ಮಾತನಾಡಿ ಕೌಲ್‌ಬಜಾರಿನ ಎಲ್ಲಾ ತಮಿಳ್ ಸಮುದಯಾ, ಸುಮಾರು ಹಲವಾರು ವರ್ಷಗಳಿಂದ ರುದ್ರ ಭೂಮಿ ಇಲ್ಲೇ ಇದ್ದು, ಇಲ್ಲಿ ಯಾವುದೇ ತರಹದ ಮೂಲ ಭೂತ ಸೌಕರ್ಯಗಳು ಇರುವುದಿಲ್ಲ ಹಾಗೂ ಕಾಂಪೌಂಡ್ ಗೋಡೆಯು ಸಹ ಕಟ್ಟಿಕೊಡಬೇಕೆಂದು ಮನವಿ ಮಾಡಿದಾಗ ವಾರ್ಡ್ ಅಭಿವೃದ್ಧಿಗಾಗಿ ನಾನು ಎಂದಿಗೂ ನಿಮ್ಮ ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು.
ಹಾಗೂ ನಮ್ಮ ಗ್ರಾಮೀಣ ಶಾಸಕ ನಾಗೇಂದ್ರ ಅವರು ಅತೀ ಶೀಘ್ರದಲ್ಲಿ ಕೆಟ್ಟ ಘಳಿಗೆಯಿಂದ ಹೊರ ಬರಲಿ. ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಅಭಿವೃದ್ಧಿಯ ಪಥದಲ್ಲಿ ನಮ್ಮ ವಾರ್ಡನ್ ಸಾಗಿಸೋಣ ಎಂದು ವಾರ್ಡಿನ ಜನತೆಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಸಮೀರ್ ಸೇರಿದಂತೆ ಸಮುದಾಯದ ಮುಖಂಡರಾದ, ಸೀನಾ, ಶಿವಾಜಿ, ರವಿ, ಗುಂಡ, ಉದಯ್ ಕುಮಾರ್, ಸೋಲಾಪುರ ಪ್ರಭು, ಬಾಲಕೃಷ್ಣ, ಸೂರಿ, ಬಾಲು, ಶ್ರೀಧರ್, ದಲಿತ ಮುಖಂಡ ವಿಘ್ನೇಶ್ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ