ಬೆಳೆಸದೆ ಬೆಳೆಯುವ ಬೆಳೆಗೆ ಪ್ರಾಧಾನ್ಯತೆ: ಶ್ರೀ ಪಡ್ರೆ

Upayuktha
0

ಗಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳದ ಬಗ್ಗೆ  ಪೂರ್ವ ಸಿದ್ಧತೆ ಸಭೆ




ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗದ ಆಶ್ರಯದಲ್ಲಿ ಜನವರಿಯಲ್ಲಿ ಹಮ್ಮಿಕೊಂಡಿರುವ ಗಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳದ ಬಗ್ಗೆ  ಪೂರ್ವ ಸಿದ್ಧತೆ ಸಭೆ ಭಾನುವಾರ ಸಂಘನಿಕೇತನದಲ್ಲಿ ನಡೆಯಿತು.


ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಮಾರ್ಗದರ್ಶನ ನೀಡಿ, ಕಾರ್ಯಕ್ರಮಕ್ಕೆ ಸೀಮಿತವಾಗದೆ ಮಕ್ಕಳಲ್ಲಿ, ಪೇಟೆ ಜನಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಲಭ್ಯ ಜಾಗದಲ್ಲಿ ಗಡ್ಡೆ ಮತ್ತು ‌ಗೆಣಸು ಬೆಳೆ ಬೆಳೆಸಲು ಉತ್ಸಾಹ ತುಂಬಿ ಇದನ್ನು ಮುಂದುವರಿಸಲು ಮಾರ್ಗದರ್ಶನ ನೀಡಬೇಕು ಎಂದರು.


ವಾಣಿಜ್ಯ ಸೊಪ್ಪಿನ ಬಗ್ಗೆ ‌ಮಾತ್ರ ಯೋಚನೆ ಮಾಡದೆ ಹಿತ್ತಿಲಿನಲ್ಲಿ‌ ಸಹಜವಾಗಿ ಬೆಳೆಯುವ ಸೊಪ್ಪು, ಗಡ್ಡೆ ಬಳಸುವ ಪ್ರೇರಣೆ ನೀಡುವ ಕೆಲಸವಾಗಲಿ ಎಂದರು.


ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಜಿ.ಆರ್. ಪ್ರಸಾದ್ ಮಾತನಾಡಿ, ವಿವಿಧ ರಾಜ್ಯಗಳ ರೈತರನ್ನು ‌ಭೇಟಿ ಮಾಡಲಾಗಿದೆ. ಕೇರಳ, ಜೊಯಿಡಾ, ಮೈಸೂರು, ಉಡುಪಿ ರೈತರನ್ನು ಭೇಟಿ‌ ಮಾಡಲಾಗಿದೆ.‌ ಒರಿಸ್ಸಾ, ಆಂಧ್ರದಿಂದಲೂ ರೈತರು ಭಾಗವಹಿಸುವರು ಎಂದರು.


ಮೇಳದ ಕಾರ್ಯದರ್ಶಿ ರತ್ನಾಕರ ಕುಳಾಯಿ ಮಾತನಾಡಿ, ಜೂನ್‌ ತಿಂಗಳಿನಿಂದ ಸಿದ್ಧತೆ ಆರಂಭಗೊಂಡಿದೆ. ರೈತರು ಬರಲು ಉತ್ಸಾಹ ತೋರಿದ್ದಾರೆ‌. ಮೇಳದಲ್ಲಿ ಪ್ರದರ್ಶನ ಜತೆಗೆ ಮಾಹಿತಿ, ಜಾಗೃತಿ, ಸಾವಯವ ಪ್ರೇರಣೆ ಸಿಗಲಿದೆ. ಕಾರ್ಯಕ್ರಮ ಯಶಸ್ವಿಗೆ ವಿವಿಧ ‌ಸಮಿತಿ ರಚಿಸಲಾಗಿದೆ ಎಂದರು.

ಮೇಳದ ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾರ್ಗ ದರ್ಶನ ನೀಡಿದರು.


ಕೋಶಾಧಿಕಾರಿ ‌ಶರತ್ ಕುಮಾರ್ ಇದ್ದರು. ವಿವಿಧ ಸಮಿತಿ ಪ್ರಮುಖರು ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top