ಎಡನೀರು ಮಠದಲ್ಲಿ ಯಕ್ಷಗಾನ ಕಲಾವಿದರಿಗೆ ಸಮ್ಮಾನ, ತಾಳಮದ್ದಳೆ

Upayuktha
0


ಎಡನೀರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ಯಕ್ಷಮಿತ್ರರು ಬೆಂಗಳೂರು ವತಿಯಿಂದ ಎಡನೀರು ಮಠದಲ್ಲಿ ಎಡನೀರು ಶ್ರೀಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ನಾಲ್ಕನೇ ಚಾತುರ್ಮಾಸ ಅವಧಿಯಲ್ಲಿ ಕಲಾವಿದರಿಗೆ ಸಮ್ಮಾನ ಹಾಗೂ ತಾಳಮದ್ದಳೆ ಕಾರ್ಯಕ್ರಮ ಜರಗಿತು.


ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ವಿಷ್ಣುಶರ್ಮ ವಾಟೆಪಡ್ಪು ಅವರನ್ನು ಅಭಿನಂದಿಸಿ ಗೌರವಿಸಲಾಯಿತು.


ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಯಕ್ಷಗಾನ ಶಿಕ್ಷಣ ನೀಡುವಂತಹ ಕಲೆ, ಪುರಾಣ ಇತಿಹಾಸ ವಿಚಾರಗಳನ್ನು ಯಕ್ಷಗಾನದಿಂದ ಕಲಿಯುತ್ತಾ ಬಂದಿದ್ದೇವೆ. ಶಾಲಾ ಶಿಕ್ಷಣವೇ ಶಿಕ್ಷಣವಲ್ಲ, ಇಂದು ಯಾವುದೇ ಕಲೆಯೂ ಶಿಕ್ಷಣ ನೀಡುತ್ತದೆ, ಆ ದೃಷ್ಟಿಯಿಂದ ಯಕ್ಷಗಾನ ಕಲಾವಿದರಿಗೆ ಸಮ್ಮಾನಿಸುವುದು ಔಚಿತ್ಯ ಪೂರ್ಣವಾಗಿದೆ ಎಂದರು.


 ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಡಾ|ಶ್ರೀಪತಿ ಕಲ್ಲೂರಾಯ ಅವರು, ಕಲಾವಿದರು ಕೂಡಾ ಮೌಲ್ಯಗಳನ್ನು ಕಲೆಯ ಮೂಲಕ ಸಮಾಜಕ್ಕೆ ತಿಳಿ ಹೇಳುವ ಕಾರಣ ಅವರೂ ಶಿಕ್ಷಕರೇ, ಹಾಗಾಗಿ ಶಿಕ್ಷಕರ ದಿನಾಚರಣೆಯಂದು ಯಕ್ಷಗಾನ ಕಲಾವಿದರನ್ನು ಸಮ್ಮಾನಿಸುವುದು ಯೋಗ್ಯವಾದ ವಿಚಾರ ಎಂದರು.


ಹರೀಶ ಬಳಂತಿಮೊಗರು ಸಹಕರಿಸಿದರು. ಯಕ್ಷಮಿತ್ರರು ಬೆಂಗಳೂರು ಸಂಚಾಲಕ ಶ್ಯಾಮಸೂರ್ಯ ಮುಳಿಗದ್ದೆ ನಿರೂಪಿಸಿದರು.


ಬಳಿಕ ಬಡಗು-ತೆಂಕು ತಿಟ್ಟಿನ ಕಲಾವಿದರಿಂದ ತಾಳಮದ್ದಳೆ `ರಾಮಾಂಜನೇಯ' ನಡೆಯಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top