ಹುಟ್ಟು ಹಬ್ಬ ಎಂದರೆ ಎಲ್ಲರೂ ಖುಷಿಪಡುತ್ತಾರೆ. ಹೊಸ ಬಟ್ಟೆ ಧರಿಸಿ, ಸಿಹಿ ಹಂಚುತ್ತಾರೆ. ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸುತ್ತಾರೆ. ಇದು ಸಾಮಾನ್ಯವಾಗಿ ಇರುವ ಎಲ್ಲರ ಮನಸ್ಥಿತಿ. ಆದರೆ ಸತ್ಯಾಂಶ ಬೆಲೆ ಇದೆ. ಹುಟ್ಟು ಹಬ್ಬ ಎಂದರೆ ಭೂಮಿಯ ಮೇಲೆ ನಮ್ಮ ಆಯುಷ್ಯ ಕಡಿಮೆಯಾಗುತ್ತಿದೆ ಎಂದು ತಿಳಿಸುವ ಗಂಟೆ. ಹುಟ್ಟು ಹಬ್ಬವನ್ನು ಸಂತೋಷದಿಂದ ಕಳೆಯುತ್ತವೆ. ಆದರೆ ಆ ದಿನ ಎಷ್ಟು ಜನ ತಾಯಿಯ ಬಗ್ಗೆ ಯೋಚನೆ ಮಾಡುತ್ತೀರಿ? ನಿಮ್ಮನ್ನು ಭೂಮಿಗೆ ತರಲು ಜೀವನವನ್ನೆ ಮುಡಿಪಾಗಿಡುತ್ತಾಳೆ. ತಾಯಿ ನಿಮಗಾಗಿ ಮಾಡಿದ ತ್ಯಾಗ ತಿಳಿದಿರಾ ನೀವು? ಒಂದು ಮಾತು ಇದೆ "ಮಕ್ಕಳ ಹೇಳುವ ಮಾತು ಹೆರಿಗೆ ನೋವಿಗಿಂತ ಹೆಚ್ಚು"
ಮಕ್ಕಳು ಯೌವನಕ್ಕೆ ಬಂದಾಗ ತಂದೆ ತಾಯಿ ಯಾತನೆ ತಿಳಿದಿರಾ? ಯೌವನ ಎಂಬುದು ಗೊಂದಲದ ದಾರಿ, ಮುಳ್ಳು ಮತ್ತು ಹುಲ್ಲು ಎರಡೂ ಇದೆ, ಆಯ್ಕೆ ಮಾತ್ರ ನಮ್ಮದು. ನಾವು ದಾರಿ ತಪ್ಪಬಾರದು ಎಂದು ಕ್ಷಣ ಕ್ಷಣವೂ ಬುದ್ಧಿ ಮಾತು ಹೇಳುತ್ತಾರೆ.
ಗಂಡು ಮಗನ ಬಗ್ಗೆ ಅವರ ಭವಿಷ್ಯದ ಬಗ್ಗೆ ತಂದೆ ತಾಯಿ ಕಂಡ ಆಸೆಗಳು ಈಡೇರುವುದೇ ಕಡಿಮೆ. ಏಕೆಂದರೆ ತಂದೆ ಹೇಳಿದ ರೀತಿ ನಡೆದುಕೊಳ್ಳವ ಮಗ ಸಿಗುವುದೇ ಕಡಿಮೆ, ತಂದೆಗೆ ತಕ್ಕ ಮಗ ಎಂದು ಹೇಳಿಕೊಳ್ಳುವ ಮಗನನ್ನು ಪಡೆದು ಆ ತಂದೆ ಜನ್ಮ ಪಾವನ. ಆದರೆ ಮಗು ಆ ಆಸೆಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ದೂರ ಮಾಡುತ್ತಾನೆ. ಅವನ ಆಸೆ ಆಕಾಂಕ್ಷೆಗಳಿಗೆ ಒತ್ತು ನೀಡುತ್ತಾನೆ. ತಂದೆ ತಾಯಿ ತಮ್ಮ ಜೀವನವನ್ನೇ ಮಕ್ಕಳಿಗಾಗಿ ಇಟ್ಟಿರುವಾಗ ಅವರು ಆಸೆಗಳಿಗೆ ಬೆಲೆ ಇಲ್ಲ.
ಮಕ್ಕಳು ಇಲ್ಲ ಎಂದು ಕೊರಗುತ್ತಾರೆ. ಇಂತಹ ಮಕ್ಕಳು ಬೇಕಿತ್ತೇ ಎಂದು ಸಹ ಕೊರಗುತ್ತಾರೆ.
- ಹರ್ಷಿತಾ ವಿ.ಪಿ.
ವಿವೇಕಾನಂದ ಕಾಲೇಜು, ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ