ಬೆಂಗಳೂರು:ಬೆಂಗಳೂರಿನ ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಶ್ರೀ ಸರ್ಕಲ್ ಮಾರಮ್ಮ ದೇವಸ್ಥಾನ ಅಕ್ಟೋಬರ್ 3 ರಿಂದ 12ರ ವರೆಗೆ ದಸರಾ ಮಹೋತ್ಸವ ಆಚರಿಸುತ್ತಿದ್ದು ಆ ಎಲ್ಲಾ ದಿನಗಳಲ್ಲೂ ದೇವಿಗೆ ವಿಶೇಷ ಅಲಂಕಾರ, ಪೂಜಾ ಕೈಂಕರ್ಯಗಳು ನಡೆಯಲಿದೆ. ಅಕ್ಟೋಬರ್ 3 ರಂದು ಸಂಜೆ 5-00ಕ್ಕೆ ಶ್ರೀ ದುರ್ಗಾ ಹೋಮ ಇರುತ್ತದೆ.
ಪ್ರತಿದಿನ ಸಂಜೆ 6-30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು : ಅಕ್ಟೋಬರ್ 4 : ವಿ|| ಶ್ರೀಮಾತಾ ರಮಾನಂದ ಮತ್ತು ಸಂಗಡಿಗರು "ಕರ್ನಾಟಕ ಶಾಸ್ತ್ರೀಯ ಸಂಗೀತ", ಅಕ್ಟೋಬರ್ 5 : ಶ್ರೀಮತಿ ರೂಪಾ ಹೇಮಂತ್ ಅವರ ನಿರ್ದೇಶನದಲ್ಲಿ ದೇವಸ್ಥಾನದ ಲಲಿತ ಕಲಾ ಕೇಂದ್ರದ ಮಕ್ಕಳಿಂದ "ಭರತನಾಟ್ಯ", ಅಕ್ಟೋಬರ್ 6 : ಶ್ರೀಮತಿ ಶ್ರೀದೇವಿ ಗರ್ತಿಕೆರೆ ಅವರ ನಿರ್ದೇಶನದಲ್ಲಿ ಲಲಿತ ಕಲಾ ಕೇಂದ್ರದ ಕಲಾವಿದರಿಂದ "ಭಕ್ತಿಗೀತೆಗಳ ಗಾಯನ", ಅಕ್ಟೋಬರ್ 7 : ಶ್ರೀ ರಂಜನಿ ಗಾನ ಮಂಡಲಿಯ ಶ್ರೀಮತಿ ಶಾಂತಾ ಸಾಗರ್ ಮತ್ತು ಸಂಗಡಿಗರಿಂದ "ಭಕ್ತಿ ಗೀತೆಗಳು", ಅಕ್ಟೋಬರ್ 8 : ಶ್ರೀಮತಿ ರೂಪಶ್ರೀ ಪ್ರಭಂಜನ ಮತ್ತು ಸಂಗಡಿಗರಿಂದ "ದಾಸವಾಣಿ", ಅಕ್ಟೋಬರ್ 9 : ವಿ||ಶ್ರೀಮತಿ ಗೀತಾ ರಮಾನಂದ ಇವರಿಂದ "ವೀಣಾ ವಾದನ" ಮೃದಂಗ : ವಿ|| ಅದಮ್ಯ ರಮಾನಂದ, ಅಕ್ಟೋಬರ್ 10 : ಕು|| ಎಸ್.ವಿ. ಚಂದನ ಇವರಿಂದ "ಹರಿನಾಮ ಸಂಕೀರ್ತನೆ" ವಾದ್ಯ ಸಹಕಾರ : ವಿ|| ಟಿ.ಎಸ್. ರಮೇಶ್ (ಕೀ-ಬೋರ್ಡ್), ಶ್ರೀ ಸರ್ವೋತ್ತಮ (ತಬಲಾ), ಅಕ್ಟೋಬರ್ 11 : 'ತತ್ವ-18' ಹಾಗೂ ತಂಡದವರಿಂದ "ಭಜನಾಮೃತ" ಹಾಗೂ ಅಕ್ಟೋಬರ್ 12ರಂದು ಸಂಜೆ 6-00ಕ್ಕೆ : ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಗಣಪತಿ, ಶ್ರೀ ಅಮ್ಮನವರ ಮುತ್ತಿನ ಪಲ್ಲಕ್ಕಿ ಉತ್ಸವಗಳು ನಡೆಯಲಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ