ಬಳ್ಳಾರಿ: ಸೆ 03 ರಂದು ವೀರಭದ್ರೇಶ್ವರ ಸ್ವಾಮಿ ಜಯಂತಿ

Upayuktha
0


ಬಳ್ಳಾರಿ:
ಬಳ್ಳಾರಿ ನಗರದಲ್ಲಿ ಸೆ.3 ರಂದು 5ನೇ ವರ್ಷದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವವನ್ನು ಇಲ್ಲಿನ ಅನಾದಿಲಿಂಗೇಶ್ವರ ದೇವಸ್ಥಾನದಲ್ಲಿ ಹರಗಿನಡೋಣಿ, ಕಮ್ಮರಬೇಡು ಮತ್ತು ಕಲ್ಯಾಣಸ್ವಾಮಿ ಮಠ, ಜಂಗಮರಹೊಸಳ್ಳಿ, ಡಿ.ಅಂತಾಪುರ ಶ್ರೀಗಳ ಸಾನಿಧ್ಯದಲ್ಲಿ ಹಮ್ಮಿಕೊಂಡಿದೆ. 

ಅಂದು ಬೆಳಿಗ್ಗೆ 5 ಗಂಟೆಗೆ ಅನಾದಿಲಿಂಗೇಶ್ವರ ದೇವಸ್ಥಾನದ ಅವರಣದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಶಿಲಾಮೂರ್ತಿಗೆ ರುದ್ರಾಭಿಷೇಕ, ನಂತರ ಬೆಳಿಗ್ಗೆ 7ಗಂಟೆಗೆ 201 ಮುತ್ತೈದೆಯರಿಂದ ಕಳಸ, ಐದು ಮಹಿಳೆಯರಿಂದ ಗರಿಗೆ ಕೊಡದೊಂದಿಗೆ ವೀರಗಾಸೆ ಸಮಾಳ, ನಂದಿಕೋಲು ರಾಂ ಡೋಲು ಮತ್ತು ಇತರೆ ಜನಪದ ಕಲಾವಾದ್ಯಗಳೊಂದಿಗೆ ಶ್ರೀ ವೀರಭದ್ರೇಶ್ವರ ಭಾವಚಿತ್ರ ಭವ್ಯ ಮೆರವಣಿಗೆಯನ್ನು ಕನಕದುರ್ಗಮ್ಮ ದೇವಸ್ಥಾನದ ಅವರಣದಿಂದ ವೀರಭದ್ರೇಶ್ವರನ ಸನ್ನಿದಿಗೆ ಬಂದು ತಲುಪುವುದು, ಬಳಿಕ 201 ಮುತ್ತೈದೆಯರಿಗೆ ಹಸಿರುಸೀರೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗುವುದು, ತದನಂತರ ಪೂಜ್ಯ ರಿಂದ ಆಶೀರ್ವಚನ, ಮಹಾಮಂಗಳಾರತಿ ಪ್ರಸಾದ ವಿತರಣೆ ಜರುಗುವುದು ಎಂದು ಜೆಎಂ ಬಸವರಾಜ್ ಸ್ವಾಮಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top