ಉದ್ಯೋಗದಲ್ಲಿ ಲಾಭ ನಷ್ಟ ಸಹಜ: ಶುಭ ಅಡಿಗ
ಪುತ್ತೂರು: ವಿದ್ಯೆ ಉದ್ಯೋಗವನ್ನು ಪಡೆಯುದಕ್ಕಾಗಿ ಸೀಮಿತವಾಗಿರದೆ, ಬದುಕಿಗೆ ಬೇಕಾದ ಸರ್ವಾಂಗೀಣ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಬೇಕು. ವಿದ್ಯೆ ಮನುಷ್ಯನಲ್ಲಿ ವಿನಯವನ್ನು ತಂದುಕೊಡಬೇಕೆ ಹೊರತು ಅಹಂಕಾರವನ್ನಲ್ಲ. ನಾವು ಮಾಡುವ ಕೆಲಸ ಆತ್ಮ ತೃಪ್ತಿಯನ್ನು ನೀಡುವಂತಿರಬೇಕು. ಹಾಗೆಯೇ ಉದ್ಯೋಗದಲ್ಲಿ ಕಷ್ಟ- ನಷ್ಟ ಸಹಜ, ಒಂದು ಉದ್ಯೋಗವನ್ನು ಎತ್ತರಕ್ಕೆ ಕೊಂಡೊಯ್ಯಬೇಕಾದರೆ ಅಲ್ಲಿ ಪ್ರಾಮಾಣಿಕತೆ ಇರಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶುಭ ಅಡಿಗ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಐಕ್ಯೂಎಸಿ ಮತ್ತು ವಾಣಿಜ್ಯ ವಿಭಾಗದ ಜಂಟಿ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸುರಕ್ಷಾ ಮಡ್ ಬ್ಲಾಕ್ಸ್ ಉದ್ಯಮದ ಮಾಲಿಕ, ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಾತ್ವಿಕ್ ಖಂಡೇರಿ ಮಾತನಾಡಿ, ಪರಿಸರ ಸ್ನೇಹಿಯಾದ ಇಟ್ಟಿಗೆಯನ್ನು ಉತ್ಪಾದಿಸುವುದು ಆರೋಗ್ಯಕ್ಕೂ ಒಳ್ಳೆಯದು, ಹಾಗೆಯೇ ಕಡಿಮೆ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಬಹುದು. ಒಂದು ವಸ್ತುವಿಗೆ ಹೆಚ್ಚಾಗಿ ಅನಿವಾರ್ಯತೆ ಬಿದ್ದಾಗ ಮಾತ್ರ ಆ ವಸ್ತುವನ್ನು ಉತ್ಪಾದಿಸಲಾಗುತ್ತದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ವಾಣಿಜ್ಯ ವಿಭಾಗದ ಡೀನ್ ಡಾ. ರವಿಕಲಾ, ಉಪನ್ಯಾಸಕಿ ಅಕ್ಷತಾ ನಾಯಕ್ ಉಪಸ್ಥಿತರಿದ್ದರು. ವಾಣಿಜ್ಯವಿಭಾಗದ ಉಪನ್ಯಾಸಕಿ ಅಂಕಿತಾ ಸಹಕರಿಸಿದರು. ಕಾರ್ಯಕ್ರಮವನ್ನು ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ,ವಾಣಿಜ್ಯ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಸ್ವಾಗತಿಸಿ, ಚರಿಷ್ಮಾ ವಂದಿಸಿ, ದ್ವಿತೀಯ ವಾಣಿಜ್ಯ ವಿಭಾಗದ ಆಶಿತ. ಎಸ್ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ