ಬಳ್ಳಾರಿ: ಜೀವ ಜಗತ್ತಿನಲ್ಲಿ ಮಾನವ ಶ್ರೇಷ್ಟನಾಗಿರುವುದು ತನ್ನ ವ್ಯಕ್ತಿತ್ವದಿಂದ. ವ್ಯಕ್ತಿತ್ವ ಹುಟ್ಟಿನಿಂದ ಬರುವುದಿಲ್ಲ. ವ್ಯಕ್ತಿ ತನ್ನ ಸ್ವ ಸಾಮರ್ಥ್ಯದಿಂದ ರೂಪಿಸಿಕೊಳ್ಳುತ್ತಾನೆ. ವಚನಗಳು ವ್ಯಕ್ತಿತ್ವ ರೂಪಿಸಿಕೊಳ್ಳಲು ಸುವರ್ಣ ಸೂಕ್ತಿಗಳೆಂದು ಹಂದಿಹಾಳು ಶಿವಶರಣರ ಮಠದ ಧರ್ಮದರ್ಶಿಗಳಾದ ಡಾ|| ಮಲ್ಲಿಕಾರ್ಜುನ ಗೌಡರು ಹೇಳಿದರು. ಹಂದಿಹಾಳು ಗ್ರಾಮದ ಸರ್ಕಾರಿ ಪ್ರೌಢ (ಆರ್.ಎಂ.ಎಸ್.ಎ.) ಶಾಲೆಯಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ 304ನೇ ಮಹಾಮನೆ ಗುರು ಹಿರಿಯರ ದತ್ತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಚನಗಳಲ್ಲಿ ಕಾವ್ಯ ಸೌಂದರ್ಯ, ಕಲ್ಪನೆಗಿಂತ ವ್ಯಕ್ತಿಯ ಬದುಕಿನ ಸಾರ್ಥಕತೆಯನ್ನು ಸಾರುವ ತತ್ವಗಳು ಅಡಗಿವೆ ಎಂದರು.
ಶರಣರ ಬದುಕು ಸರಳ, ಸುಂದರ ಮತ್ತು ಪಾರದರ್ಶಕವಾಗಿರಲು ಅವರು ನಡೆ ನುಡಿ ಸಿದ್ಧಾಂತವೇ ಕಾರಣವೆಂದು ಅತಿಥಿಗಳಾಗಿ ಭಾಗವಹಿಸಿದ್ದ ಶಾಲೆಯ ಮುಖ್ಯಗುರುಗಳಾದ ವೈ.ಕವಿತರವರು ನುಡಿದರು. ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ, ದತ್ತಿ ದಾಸೋಹಿಗಳಾದ ಶ್ರೀಮತಿ ಸುಮಂಗಳಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪರುಶುರಾಮ ತತ್ವಪದ ಹಾಡಿದರು. ಕು|| ಭೂಮಿಕಾ ತಂಡದವರು ಪ್ರಾರ್ಥನೆ ಮಾಡಿದರು. ಅತಿಥಿ ಶಿಕ್ಷಕ ರಾಜಶೇಖರ ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ದತ್ತಿ ಪರಿಚಯಿಸಿ ಶರಣು ಸಮರ್ಪಣೆ ಮಾಡಿದರು. ಸಭೆಯಲ್ಲಿ ಬಾಲಬೋದಿನಿ ಶ್ರೀನಾಥ್, ಪುರುಷೋತ್ತಮ, ಪಂಪನಗೌಡ, ಸುಮಾ, ಶಾಂತಕುಮಾರಿ, ಡಾ.ಶಿವಲಿಂಗಪ್ಪ, ರಾಕೇಶ್ ಹಾಗೂ ಊರಿಗೆ ಗಣ್ಯರು ಉಪಸ್ಥಿತರಿದ್ದರು. ವೇದಿಕೆಯ ಗಣ್ಯರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಲೇಖನ ಸಾಮಾಗ್ರಿಗಳನ್ನು ವಿತರಿಸುವುದರೊಂದಿಗೆ ಕಾರ್ಯಕ್ರಮ ಮಂಗಳವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ