ಬಳ್ಳಾರಿ: ಸದ್ಗುರು ಮಹಾದೇವತಾತ ಪ್ರಸಾದ ನಿಲಯ ವತಿಯಿಂದ “ಅಸ್ಮಾಕಂ ಸಂಸ್ಕೃತಂ” ಕಾರ್ಯಕ್ರಮ

Upayuktha
0


ಬಳ್ಳಾರಿ:
ಬಳ್ಳಾರಿ ನಗರದ ಶ್ರೀಶ್ರೀಶ್ರೀ ಸದ್ಗುರು ಮಹಾದೇವತಾತ ನವರ ಪ್ರಸಾದ ನಿಲಯ ಟ್ರಸ್ಟ್ ವತಿಯಿಂದ ನಡೆಯಲ್ಪಡುವ, ಶ್ರೀ ಸದ್ಗುರು ಹಾದೇವತಾತನವರ ಸಂಸ್ಕೃತ ಪಾಠಶಾಲೆಯ “ಅಸ್ಮಾಕಂ ಸಂಸ್ಕೃತಂ” ಸರಣಿ ಕಾರ್ಯಕ್ರಮವು ಬಳ್ಳಾರಿಯ ಅಲ್ಲೀಪುರದ ಕಂಪಿಲರಾಯ ಗಿರಿಜನ ಪ್ರೌಢಶಾಲೆಯಲ್ಲಿ ಜರುಗಿತು. 

ಭಾರತ ದೇಶದಲ್ಲಿನ 22 ಭಾಷೆಗಳಲ್ಲಿ ಮುಖ್ಯವಾದ ಭಾಷೆ ಸಂಸ್ಕೃತ,ಈ ಭಾಷೆ ಯಿಂದಲೇ ಎಲ್ಲಾ ಭಾಷೆಗಳು ಪ್ರಾರಂಭವಾಗಿರುವಂತದ್ದು . ಇದು ದೇವವಾಣಿ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತ ಭಾಷೆಯನ್ನು ಪ್ರತಿಯೊಬ್ಬರು ಕಲಿಯುವ ಮೂಲಕ ಭಾಷೆಯ ಉಳಿವಿಗೆ ಶ್ರಮಿಸಬೇಕಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಹೆಚ್.ಯಂ. ಚನ್ನಬಸವಸ್ವಾಮಿ ಹೇಳಿದರು. ಸಂಸ್ಕೃತ ಭಾರತಿ ಉತ್ತರ ಪ್ರಾಂತ ಉಪಾಧ್ಯಕ್ಷರಾದ ಚಂದ್ರಶೇಖರ ಶಾಸ್ತ್ರಿಗಳು 64 ವಿದ್ಯೆಗಳಲ್ಲಿ ಸಂಸ್ಕೃತ ಭಾಷೆಯು ಸಹ ಒಂದು. 


ಮಂತ್ರ ಹೇಳುವುದಕ್ಕೆ, ಜ್ಯೋತಿಷ್ಯ ಹೇಳುವುದಕ್ಕೆ, ವಾಸ್ತು ಶಾಸ್ತ್ರ ಹೇಳುವುದಕಷ್ಠೆ ಸಂಸ್ಕೃತ ಸೀಮಿತವಾಗಿರ ಬಾರದು ಪ್ರತಿಯೊಬ್ಬರ ಮನೆಯಲ್ಲಿ ಈ ಭಾಷೆಯನ್ನು ವ್ಯವಹಾರಿಕ ಭಾಷೆಯಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವುದರಿಂದ “ಅಸ್ಮಾಕಂ ಸಂಸ್ಕೃತಂ” ನಮ್ಮ ಭಾಷೆ, ನಮ್ಮದೇಶ, ಆದ್ದರಿಂದ ನಮ್ಮ ಸನಾತನ ಭಾಷೆಯಾದ ಸಂಸ್ಕೃತವನ್ನು ಎಲ್ಲರೂ ಕಲಿಯಬೇಕೆಂದು ಮಾತನಾಡಿದರು. ಕಲಬುರ್ಗಿವಲಯದ ಸಂಸ್ಕೃತ ವಿಷಯ ಪರಿವೀಕ್ಷಕರಾದ ಡಿ. ದ್ಯಾಮಪ್ಪ ದೇಸಾಯಿ ” ಅಸ್ಮಾಕಂ ಸಂಸ್ಕೃತಂ” ಈ ಸರಳವಾದ ಭಾಷೆ, 


ಸತತವಾಗಿ ಈ ಸಂಸ್ಕೃತ ಶ್ರಾವಣ ಮಾಸದಿಂದ ಸೆಪ್ಟೆಂಬರ್ 30 ರ ವರೆಗೆ ಕರ್ನಾಟಕ ರಾಜ್ಯದ 4 ವಿಭಾಗಗಳಲ್ಲಿ 300 ”ಅಸ್ಮಾಕಂ ಸಂಸ್ಕೃತ” ಈಗ ಸಂಸ್ಕೃತ ಭಾಷೆ ಏನಾಗಿದೆ ಎಂದರೆ ಮೃದುಭಾಷೆ, ದೇವಭಾಷೆ, ಒಂದೇ ಜಾತಿಯಲ್ಲಿ ಇದೆ . ಆಗಾಗಬಾರದು, ಪ್ರತಿಯೊಬ್ಬರು ಮಾತನಾಡುವ ಭಾಷೆ ಯಾಗಬೇಕು ಎಂದು ಹೇಳಿದರು.ಶ್ರೀ ಸದ್ಗುರು ಮಹಾದೇವತಾತನವರ ಮಠದ ಸಂಸ್ಕೃತ ಪಾಠಶಾಲೆಯ ಮುಖ್ಯಗುರುಗಳಾದ ಗದಿಗೆಯ್ಯ ಶಾಸ್ತ್ರಿಗಳು ನಿರೂಪಣೆ ಮಾಡಿದರು. ಪಾಠಶಾಲೆ ಮಕ್ಕಳಿಂದ ಭಗವದ್ಗೀಗೀತೆ ಶ್ಲೋಕಗಳನ್ನು ಹೇಳಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top