ಬಳ್ಳಾರಿ:ಕಾವ್ಯ ಸಂವಾದ ಕಾರ್ಯಕ್ರಮ

Upayuktha
0

ಬಳ್ಳಾರಿ:ಬಳ್ಳಾರಿ ನಗರದ ಬಾಲಾಜಿ ನಗರದಲ್ಲಿರುವ ಡಾ. ವಿಷ್ಣುವರ್ಧನ್  ವೇದಿಕೆಯಲ್ಲಿ ಶನಿವಾರ ಕಾವ್ಯ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಪ್ರಾರಂಭದಲ್ಲಿ ಅಜಯ್ ಬಣಕಾರ್ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿದರು. ನಂತರ್ ಅಂಕಲಿ ಬಸಮ್ಮರವರ ಕವನ ಸಂಕಲನವನ್ನು ಸಾಹಿತಿ ಡಾ. ಅರವಿಂದ ಪಾಟೀಲ್ ಬಿಡುಗಡೆ ಮಾಡಿದರು. ಸಂಕಲನ ಕುರಿತು ಕವಿ ಹಾಗೂ ಚಿಂತಕ ಡಾ.ಯು.ಶ್ರೀನಿವಾಸ ಮೂರ್ತಿ, ಅಂಕಲಿ ಬಸಮ್ಮ ರವರ ಕವಿತೆಗಳು ಸಾಮಾಜಿಕ ಬದ್ದತೆ. ಸ್ತ್ರೀ ಸಂವೇದನೆ ಹಾಗೂ ಇಂದಿನ ವ್ಯವಸ್ಥೆಯೊಂದಿಗೆ ಸಂವಾದಿಸುತ್ತವೆ. 


ಅಲ್ಲದೆ ಬದುಕ ಪ್ರೀತಿಯ ಬದ್ದತೆಯನ್ನೂ, ಹದಗೆಡುತ್ತಿರುವ ಪರಿಸರದ ಬಗೆಗಿನ ಕಾಳಜಿಯನ್ನು ಧ್ವನಿಸುತ್ತವೆ ಎಂದರು. ಕಾರ್ಯಕ್ರದಲ್ಲಿ ಕವಿಗಳಾದ ವೀರೇಂದ್ರ ರಾವೀಹಾಳ್, ಈರಮ್ಮ ಶಿಕ್ಷಕಿ, ಅಂಕಲಿ ಬಸಮ್ಮ, ಹಾರಕಬಾವಿ ತಿಪ್ಪೇಸ್ವಾಮಿ ತಮ್ಮ ಕವಿತೆಗಳನ್ನು ವಾಚಿಸಿದರು, ಅಬ್ದುಲ್ ಹೈ ತೋರಣಗಲ್ಲು ಅಧ್ಯಕ್ಷತೆ ವಹುಸಿದ್ದರು. ವೇದಿಕೆಯಲ್ಲಿ, ಸಾಹಿತ್ಯ ವಿಮರ್ಶಕ ಹಾಗೂ ಕವಿ ದಸ್ತಗೀರ್ ಸಾಬ್ ದಿನ್ನಿ, ಶ್ರೀಮತಿ ವಾಣಿ ಇದ್ದರು, ಕ.ಸಾ.ಪ ತಾಲೂಕು ಅಧ್ಯಕ್ಷ ನಾಗರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top