ಬಳ್ಳಾರಿ: ಬಳ್ಳಾರಿಯ ಕೊಟ್ಟೂರು ಸ್ವಾಮಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರ್ ಕಾಲೇಜ್ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟದಲ್ಲಿ ಸತ್ಯಂ ಶಿಕ್ಷಣ ಶಿಕ್ಷಣ ವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಕ್ರಿಕೆಟ್ ಆಟದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ತ್ರೋಬಾಲ್ ಆಟದಲ್ಲಿ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಮಹಿಳೆಯರು ಗೆಲುವನ್ನು ಸಾಧಿಸಿದ್ದಾರೆ.
ಎರಡು ಕಾಲೇಜುಗಳ ಸಮಾಗಮ ಗೆಲುವನ್ನು ಸ್ನೇಹದ ಸೌಹಾರ್ದತೆಯ ಹಾಗೂ ಭಾವೈಕ್ಯತೆಯ ಸಂಕೇತವು ಗಟ್ಟಿಗೊಳಿಸಿದೆ. ಇಂತಹ ಸುವರ್ಣ ಅವಕಾಶ ಮಾಡಿಕೊಟ್ಟ ಪ್ರಾಚಾರ್ಯ ಡಾ. ಸತೀಶ್ ಹಿರೇಮಠ ಸರ್ ಮತ್ತು ಸಿಬ್ಬಂದಿ ವರ್ಗದವರ ಶ್ರಮ ಅಪಾರ. ವಿಕ್ರಂ ಹಿರೇಮಠ ಮತ್ತು ಆಲಂಭಾಷ ತೀರ್ಪುಗಾರರಾಗಿ ಸಹಕರಿಸಿದರು.
ಈ ಸಂದರ್ಭದಲ್ಲಿ ಡಾ.ಅಶ್ವ ರಾಮು, ಪ್ರಾಂಶುಪಾಲರು, ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ, ಬಳ್ಳಾರಿ ಇನ್ನಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ