ಬಳ್ಳಾರಿ: ಕಳೆದೊಂದು ದಶಕದಿಂದ ಬಳ್ಳಾರಿಯಲ್ಲಿ ಸನ್ಮಾರ್ಗ ಗೆಳೆಯರ ಬಳಗ ಹತ್ತು ಹಲವು ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅದರಲ್ಲಿಯೂ ಪ್ರಮುಖವಾಗಿ ದುರ್ಗಮ್ಮ ದೇಗುಲದ ಬಳಿ ಇರುವ ಸನ್ಮಾರ್ಗ ಸಹಾಯ ಹಸ್ತ ಎನ್ನುವ ಮಳಿಗೆ ತೆರದು ಉಳ್ಳವರ ಬಳಿ ಇರೋ ಹೆಚ್ಚುವರಿ ಬಟ್ಟೆ ಪಡೆದು ಇಲ್ಲದವರಿಗೆ ನೀಡುವ ಕೆಲಸ ಮಾಡಲಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಮಳಿಗೆಯಲ್ಲಿ ಐವತ್ತು ಸಾವಿರ ಬಡವರು ಬಟ್ಟೆ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಇಂತಹ ಸುಸಂದರ್ಭದಲ್ಲಿ ರೌಂಡ್ ಟೇಬಲ್ ಎನ್ನುವ ಸಂಸ್ಥೆ ಕೈ ಜೋಡಿಸಿ ಶನಿವಾರ ನೂರಾರು ಬಳಸಿದ ಬಟ್ಟೆ ನೀಡಿ ಬಡವರಿಗೆ ಸಹಾಯ ನೀಡಲು ಪ್ರೋತ್ಸಾಹ ನೀಡಿದರು.
ಈ ವೇಳೆ ಮಾತನಾಡಿದ ಸನ್ಮಾರ್ಗ ಬಳಗದ ಅಧ್ಯಕ್ಷ ಎಚ್ ಲಕ್ಷ್ಮಿಕಾಂತರೆಡ್ಡಿ. ಸಾಮಾನ್ಯವಾಗಿ ಸ್ಥಿತಿವಂತರು ತಮ್ಮ ಹಳೆಯದಾದ ಬಟ್ಟೆಗಳನ್ನು ಮನೆಯಲ್ಲಿ ಹಾಗೆಯೇ ಬಿಟ್ಟಿರುತ್ತಾರೆ. ಅದನ್ನು ನಮಗೆ ತಂದು ಕೊಟ್ಟರೇ ಅದನ್ನು ಶುಭ್ರಗೊಳಿಸಿ ಮತ್ತೊಬ್ಬ ಬಡವರಿಗೆ ನೀಡುವ ಕೆಲಸ ಮಾಡುತ್ತಿದ್ದೇವೆ. ಈ ಕೆಲಸಕ್ಕೆ ಈವರೆಗೆ ಸಾವಿರಾರು ಜನರು ಸಹಾಯ ಸಹಕಾರ ನೀಡಿದ್ದಾರೆ. ವಿಶೇಷವಾಗಿ ಇಂದಿಗೆ ಈ ಮಳಿಗೆಯಿಂದ ಐವತ್ತು ಸಾವಿರ ಬಡವರು ಬಟ್ಟೆಗಳನ್ನು ಪಡೆದಿರುವುದು ಸಂತಸವಾಗಿದೆ. ಇದೊಂದು ಆತ್ಮತೃಪ್ತಿಯ ಕೆಲಸವಾಗಿದೆ. ನಮ್ಮ ಬಳಗವನ್ನು ಬೆಳೆಸುತ್ತಿರುವ ಮತ್ತು ಪ್ರೋತ್ಸಾಹ ನೀಡುತ್ತಿರುವ ಬಳ್ಳಾರಿಯ ನಾಗರಿಕರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇವೆ ಎಂದರು.
ಈ ವೇಳೆ ಸನ್ಮಾರ್ಗದ ಉಪಾಧ್ಯಕ್ಷ ಹನುಮಂತರೆಡ್ಡಿ, ಎಂ.ಎಸ್.ಜಿ ಜಗದೀಶ, ಕಪ್ಪಗಲ್ಲು ಬಿ. ಚಂದ್ರಶೇಖರ ಆಚಾರ್ ಅಪ್ಪು ಸೇವಾ ಸಮಿತಿಯ ಮಂಜು, ಲಕ್ಷ್ಮಿರೆಡ್ಡಿ, ಚಂದ್ರಶೇಖರ ಸೇರಿದಂತೆ ರೌಂಡ್ ಟೇಬಲ್ ಸಂಸ್ಥೆಯ ಅಧ್ಯಕ್ಷ ಎನ್ ಶಿರೀಷ್, ಉಪಾಧ್ಯಕ್ಷ ಅಶೀಷ ಶೆಟ್ಟಿ, ರೋಹಿತ್ ರಾಜ್, ಶರತ್ ರೆಡ್ಡಿ ಇತರರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ